Earthquake: ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಪ್ರಬಲ ಭೂಕಂಪ, ಯುಪಿವರೆಗೆ ಭೂಮಿ ಕಂಪನ; ಮನೆ, ಕಚೇರಿಯಿಂದ ಹೊರಗೋಡಿ ಬಂದ ಜನ!
National news Massive tremors in Delhi after 6.2 magnitude earthquake in Nepal latest news
Earthquake: ದೆಹಲಿ ಎನ್‌ಸಿಆರ್‌ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಬಲ ಭೂಕಂಪನದ(Earthquake) ಅನುಭವಾಗಿದೆ. ಭೂಕಂಪನದ ತೀವ್ರತೆ 6.2 ಆಗಿತ್ತು ಎಂದು ವರದಿಯಾಗಿದೆ. ಭೂಕಂಪನದ ತೀವ್ರತೆ ಎಷ್ಟಿತ್ತು ಎಂದರೆ ಜನರು ತಮ್ಮ ತಮ್ಮ ಮನೆ ಕಚೇರಿಗಳಿಂದ ಭಯದಿಂದ ಹೊರಬಂದಿದ್ದಾರೆ.
ವಿಜ್ಞಾನಿಗಳ ಪ್ರಕಾರ, ಭೂಮಿಯೊಳಗೆ ಆಗಾಗ್ಗೆ ಪ್ರಕ್ಷುಬ್ಧತೆ ಇರುತ್ತದೆ, ಅದು ಹೊರಗಿನಿಂದ ಶಾಂತವಾಗಿ ಕಾಣುತ್ತದೆ. ಭೂಮಿಯೊಳಗೆ ಇರುವ ಫಲಕಗಳು ಒಂದಕ್ಕೊಂದು ಡಿಕ್ಕಿಯಾಗುತ್ತಲೇ ಇರುತ್ತವೆ, ಈ ಫಲಕಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಭೂಕಂಪ ಸಂಭವಿಸುತ್ತದೆ.
Earthquake of Magnitude:6.2, Occurred on 03-10-2023, 14:51:04 IST, Lat: 29.39 & Long: 81.23, Depth: 5 Km ,Location:Nepal for more information Download the BhooKamp App https://t.co/rBpZF2ctJG @ndmaindia @KirenRijiju @Indiametdept @Dr_Mishra1966 @Ravi_MoES pic.twitter.com/tOduckF0B9
— National Center for Seismology (@NCS_Earthquake) October 3, 2023
ಭೂಕಂಪನದ ತೀವ್ರ ಕಂಪನದ ನಂತರ ಜನರಲ್ಲಿ ಭೀತಿ ಉಂಟಾಗಿದ್ದು, ಕೆಲವು ಸೆಕೆಂಡುಗಳ ಕಾಲ ಭೂಕಂಪದ ಪ್ರಬಲ ಕಂಪನಗಳ ಅನುಭವವಾಗಿದೆ. ಭೂಕಂಪದ ತೀವ್ರತೆ 6.2 ಇತ್ತು. ಭೂಕಂಪದಿಂದಾಗಿ ಭೂಮಿ ಕಂಪಿಸುತ್ತಲೇ ಇತ್ತು. ಭೂಕಂಪದ ಕಂಪನದ ಅಬ್ಬರ ಎಷ್ಟು ಪ್ರಬಲವಾಗಿದೆಯೆಂದರೆ ಜನರು ತಮ್ಮ ಮನೆ ಮತ್ತು ಕಚೇರಿಗಳಿಂದ ಹೊರಬಂದಿದ್ದು, ಎರಡು ಕಂಪನಗಳು ಸಂಭವಿಸಿವೆ ಎಂದು ಭೂಕಂಪನ ಇಲಾಖೆ ಮಾಹಿತಿ ನೀಡಿದೆ.