Shivamogga: ಮಸೀದಿ ಮುಂದೆ ಗಣಪತಿಗೆ ನಡೆಯಿತು ಮಹಾ ಮಂಗಳಾರತಿ- ಮುಂದೆ ನಡೆದದ್ದೇ ವಿಚಿತ್ರ !!

national news mangalarti opposite the mosque case complaint latest news

Share the Article

Shivamogga:ಶಿವಮೊಗ್ಗದ (Shivamogga)ರಾಗಿಗುಡ್ಡದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ಸಂದರ್ಭ ದುಷ್ಕರ್ಮಿಗಳು ಕಲ್ಲು ತೂರಿ ಕೋಮುಗಲಭೆ ಎಬ್ಬಿಸಿರುವ ಘಟನೆ ನಡೆದಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಇಲಾಖೆ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ವರದಿ ನೀಡಿದ್ದಾರೆ.

ಮಹಾತ್ಮಗಾಂಧಿ ವೃತ್ತದ ಬಳಿಯ ಜಾಮೀಯ ಮಸೀದಿ ಮುಂಭಾಗ ಗಣೇಶಮೂರ್ತಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ತರಲಾಗಿತ್ತು. ಈ ವೇಳೆ, ಹಿಂದೂಪರ ಸಂಘಟನೆಯ ಕೆಲ ಪ್ರಮುಖರು ಮಸೀದಿ ಮುಂಭಾಗವೇ ನಿಂತು ಮಂಗಳಾರತಿ ಮಾಡಿ, ‘ಜೈ ಶ್ರೀರಾಮ್’ ಎಂದೂ ಘೋಷಣೆ ಕೂಗಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಘಟನೆ ಎಂದು ಆರೋಪ ಮಾಡಿದ್ದು, ಈ ಕುರಿತಂತೆ ಹಿಂದೂಪರ ಸಂಘಟನೆಯ ಐವರು ಮತ್ತು ಇತರರ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಹಿಂದೂ ಮಹಾಮಂಡಳಿಯವರು ಗಣೇಶ ವಿಸರ್ಜನೆ ಸಂದರ್ಭ ನಗರದ ಜಾಮೀಯ ಮಸೀದಿ ಮುಂಭಾಗ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹಿಂದೂಪರ ಸಂಘಟನೆಯ ಕಾರ್ಯಕರ್ತರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಲಾಗಿದೆ. ಈ ಘಟನೆಯ ಕುರಿತಂತೆ ಎಷ್ಟು ಜನರನ್ನು ಬಂಧಿಸಲಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಕೃತ್ಯ ನಡೆಸಿರುವವರು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ರೀತಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕೆಂದು ಸೂಚಿಸಲಾಗಿದೆ.

 

ಇದನ್ನು ಓದಿ: Bengaluru Accident: ಬೆಂಗಳೂರಲ್ಲಿ ರಸ್ತೆ ಅವಘಡ: ಎರಡು ವರ್ಷದ ಪುಟ್ಟ ಮಗು ಸೇರಿ ಇಬ್ಬರು ಮೃತ್ಯು!

Leave A Reply