Home Karnataka State Politics Updates Ramalinga reddy: ವಾಹನ ಸವಾರರಿಗೆ ಮಹತ್ವದ ಸುದ್ದಿ – ಸಾರಿಗೆ ಸಚಿವರು ಕೊಟ್ರು ನೋಡಿ ಬಿಗ್...

Ramalinga reddy: ವಾಹನ ಸವಾರರಿಗೆ ಮಹತ್ವದ ಸುದ್ದಿ – ಸಾರಿಗೆ ಸಚಿವರು ಕೊಟ್ರು ನೋಡಿ ಬಿಗ್ ಅಪ್ಡೇಟ್

Hindu neighbor gifts plot of land

Hindu neighbour gifts land to Muslim journalist

Ramalinga reddy: ಕೆಲವು ದಿನಗಳಿಂದ ರಾಜ್ಯದಲ್ಲಿ ಅಕ್ಟೋಬರ್ ಕಾರ್ ಪೂಲಿಂಗ್ ವಿಚಾರ ಬಾರೀ ಸದ್ಧುಮಾಡುತ್ತಿದೆ. ಕಾರ್ ಪೂಲಿಂಗ್ ನಿಷೇಧವಾಗಿದೆ ಎಂಬ ಸುದ್ದಿಗಳು ಎರಡು ದಿನಗಳಿಂದ ವೈರಲ್ ಆಗಿದೆ. ಟ್ಯಾಕ್ಸಿ ಚಾಲಕರ ದೂರಿನ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಬೆಂಗಳೂರು ನಗರದಲ್ಲಿ ಕಾರ್ ಪೂಲಿಂಗ್ ನಿಷೇಧಿಸಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೀಗ ಈ ವಿಚಾರವಾಗಿ ಸಾರಿಗೆ ಸಚಿವ ರಮಾಲಿಂಗರೆಡ್ಡಿಯವರು(Ramalinga reddy) ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಕಾರ್‌ಪೂಲಿಂಗ್ ನಿಷೇಧಿಸಲಾಗಿದೆ ಎನ್ನುವುದು ಸುಳ್ಳು ಸುದ್ದಿ. ಕಾರ್​ಪೂಲಿಂಗ್ ನಿಷೇಧಿಸಿಲ್ಲ. ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅನುಮತಿ ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ? ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ವೈಟ್​ ನಂಬರ್​ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು ಕಾರ್‌ಪೂಲಿಂಗ್ ಉದ್ದೇಶಗಳಿಗಾಗಿ ಬಳಸುವುದು ಕಾನೂನು ಬಾಹಿರವಾಗಿದೆ. ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯ ವಾಹನಗಳನ್ನು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್‌ಪೂಲಿಂಗ್‌ಗೆ ಬಳಸಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಕ್ಲಾರಿಟಿ ಕೊಟ್ಟಿರುವ ಸಚಿವರು ‘ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು ಕಾರ್‌ ಪೂಲಿಂಗ್ ಉದ್ದೇಶಗಳಿಗಾಗಿ ಬಳಸುವುದು ಕಾನೂನುಬಾಹಿರವಾಗಿದೆ. ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯ ವಾಹನಗಳನ್ನು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕಾರ್‌ ಪೂಲಿಂಗ್‌ಗೆ ಬಳಸಬಹುದು’ ಎಂದು ತಿಳಿಸಿದ್ದಾರೆ.

ಏನಿದು ‘ಕಾರ್ ಪೂಲಿಂಗ್’?
ಬೆಂಗಳೂರಿನಂತಹ ಮಹಾನಗರದಲ್ಲಿ ಟ್ರಾಫಿಕ್ ತಪ್ಪಿಸಲು ಕಾರ್ ಪೂಲಿಂಗ್ ಪರ್ಯಾಯ ಮಾರ್ಗವಾಗಿದೆ ಎಂದು ಅಂದಾಜಿಸಲಾಗಿದೆ. ಒಂದೇ ಕಛೇರಿಗೆ ಹೋಗುವ ಹಲವು ಉದ್ಯೋಗಿಗಳು ಒಂದೇ ಕಾರಿನಲ್ಲಿ ಕಾರ್ ಪೂಲಿಂಗ್ ಮೂಲಕ ಸಂಚಾರ ನಡೆಸಿದರೆ ರಸ್ತೆಗೆ ಇಳಿಯುವ ವಾಹನಗಳ ಸಂಖ್ಯೆ ಕಡಿಮೆಯಾಗಲಿದೆ. ಆದರೆ ಬೈಕ್ ಟ್ಯಾಕ್ಸಿ ಸೇವೆ ಜೊತೆಗೆ ಅಪ್ಲಿಕೇಶನ್ ಆಧಾರಿತ ಕಾರ್ ಪೂಲಿಂಗ್ ಸೇವೆಯನ್ನು ಸಹ ರದ್ದಗೊಳಿಸಬೇಕು ಎಂದು ಟ್ಯಾಕ್ಸಿ ಚಾಲಕರು ಸಾರಿಗೆ ಇಲಾಖೆಗೆ ಪದೇ ಪದೇ ಮನವಿ ಮಾಡುತ್ತಿದ್ದರು. ಈ ಹಿನ್ನಲೆಯಲ್ಲಿ ಕಾರ್‌ ಪೂಲಿಂಗ್ ನಿಷೇಧಿಸಲಾಗಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಸದ್ಯ ಸಚಿವರೀಗ ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.

ಮುಖ್ಯಮಂತ್ರಿಗೆ ತೇಜಸ್ವಿ ಸೂರ್ಯ ಪತ್ರ:
ಇನ್ನು ಕಾರ್ ಪೂಲಿಂಗ್ ನಿಷೇದಿಸಬಾರದೆಂದು ಸಂಸದ ತೇಜಸ್ವಿ ಸೂರ್ಯ ಕೂಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಐಟಿ ಉದ್ಯೋಗಿಗಳಿಗೆ ಅದೇ ಐಟಿ ಪಾರ್ಕ್ ಅಥವಾ ಅದೇ ಪ್ರದೇಶಕ್ಕೆ ಪ್ರಯಾಣಿಸುವ ಮತ್ತು ಕೆಲಸ ಮುಗಿಸಿದ ನಂತರ ಅದೇ ಪ್ರದೇಶಕ್ಕೆ ಮನೆಗೆ ಹಿಂದಿರುಗುವವರಿಗೆ ಕಾರ್​ಪೂಲಿಂಗ್ ಸೂಕ್ತವಾಗಿದೆ. ಇದಕ್ಕಾಗಿಯೇ ಹಲವು ಅಪ್ಲಿಕೇಶನ್‌ಗಳು ಈ ಕಾರ್‌ಪೂಲಿಂಗ್ ಸೇವೆಗಳನ್ನು ನಡೆಸುತ್ತಿವೆ, ಅಲ್ಲಿ 3-4 ವ್ಯಕ್ತಿಗಳು ಒಂದೇ ಕೆಲಸದ ಸ್ಥಳ, ಪ್ರದೇಶ ಅಥವಾ ಐಟಿ ಪಾರ್ಕ್‌ಗೆ ಒಟ್ಟಿಗೆ ಕಾರ್‌ಪೂಲ್ ಮಾಡುತ್ತಾರೆ. ಆದರೆ, ಸಾರಿಗೆ ಇಲಾಖೆಯ ನಿಯಮಗಳನ್ನು ಮುಂದಿಟ್ಟುಕೊಂಡು ಇಂತಹ ಕಾರ್​ಪೂಲಿಂಗ್ ಸೇವೆಗಳನ್ನು ನಿಷೇಧಿಸಿರುವುದು ನಗರದ ಸಂಚಾರ ದಟ್ಟಣೆ ಹಿತಾಸಕ್ತಿಗೆ ಧಕ್ಕೆ ತರುತ್ತಿದ್ದು, ಸಂಚಾರ ದಟ್ಟಣೆ ಇನ್ನಷ್ಟು ಹದಗೆಡಲಿದೆ ಎಂದು ಸಂಸದರು ಹೇಳಿದ್ದರು.

ಅಲ್ಲದೆ ಕಾರ್​ಪೂಲಿಂಗ್ ನಿಷೇಧದಿಂದ ಇನ್ನಷ್ಟು ವಾಹನಗಳು ರಸ್ತೆಗಿಳಿಯಲಿವೆ. ಆ ಕಾರ್‌ಪೂಲಿಂಗ್ ಮಾಡುವ ವ್ಯಕ್ತಿಗಳಲ್ಲಿ ಪ್ರತಿಯೊಬ್ಬರೂ ಕಿಕ್ಕಿರಿದ ಬಸ್ ಸೇವೆ, ಕ್ಯಾಬ್‌ಗಳು, ಆಟೋಗಳು ಅಥವಾ ಅಪೂರ್ಣ ಮೆಟ್ರೋ ನೆಟ್‌ವರ್ಕ್ ಅನ್ನು ಬಳಸುವ ಬದಲು ಕಚೇರಿ ಮತ್ತು ಮನೆಗೆ ತಮ್ಮ ಸ್ವಂತ ವಾಹನದೊಂದಿಗೆ ಪ್ರಯಾಣಿಸಲು ಆಯ್ಕೆ ಮಾಡುತ್ತಾರೆ ಇದರಿಂದ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಲಿದೆ ಎಂದು ತಿಳಿಸಿದ್ದರು.

 

ಇದನ್ನು ಓದಿ: Malaria: ‘ಮಲೇರಿಯಾ’ ಸದೆಬಡಿಯಲು ಬಂತು ಹೊಸ ಅಸ್ತ್ರ- WHO ಕೊಡ್ತು ಸಖತ್ ಗುಡ್ ನ್ಯೂಸ್