Home News Shivamogga: ಶಿವಮೊಗ್ಗದ ಬೀದಿ ಬೀದಿಗಳಲ್ಲಿ ಪಾಕಿಸ್ತಾನ, ಅಖಂಡ ಮುಸ್ಲಿಂ ಭಾರತ, ಸಾಬ್ರು ಸಾಮ್ಯಾಜ್ಯ ಎಂಬ ದ್ವಾರ...

Shivamogga: ಶಿವಮೊಗ್ಗದ ಬೀದಿ ಬೀದಿಗಳಲ್ಲಿ ಪಾಕಿಸ್ತಾನ, ಅಖಂಡ ಮುಸ್ಲಿಂ ಭಾರತ, ಸಾಬ್ರು ಸಾಮ್ಯಾಜ್ಯ ಎಂಬ ದ್ವಾರ ಬಾಗಿಲು ಅಳವಡಿಕೆ !! ಇದೇನು ಭಾರತವೋ ಇಲ್ಲಾ, ಪಾಕಿಸ್ತಾನವೋ ?!

Shivamogga

Hindu neighbor gifts plot of land

Hindu neighbour gifts land to Muslim journalist

Shivamogga: ಶಿವಮೊಗ್ಗ(Shivamogga) ಈದ್ ಮಿಲಾದ್ ಹಬ್ಬದ ದಿನ ರಾಗಿ ಗುಡ್ಡ ಕಲ್ಲು ತೂರಾಟ ಮತ್ತು ಹಿಂಸಾಚಾರ ಪ್ರಕರಣವು ದೇಶದ ಗಮನಸೆಳೆದಿದೆ. ಈ ಸಂಬಂಧ 40ಕ್ಕೂ ಹೆಚ್ಚು ಶಂಕಿತರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ(C M Siddaramaiah)ಹೇಳಿದ್ದಾರೆ. ಅಲ್ಲದೆ ಎಲ್ಲಾ ಪಕ್ಷಗಳ ನಾಯಕರು ಈ ಪ್ರಕರಣದ ಕುರಿತು ಮನಬಂದಂತೆ ಹೇಳಿಕೆ ನೀಡುತ್ತಿದ್ದು, ಪ್ರಕರಣದ ತೀವ್ರತೆಯೂ ಹೆಚ್ಚುತ್ತಿದೆ. ಇನ್ನು ಇದೆಲ್ಲದರ ನಡುವೆ ಈ ಎಲ್ಲಾ ಪ್ರಕರಣಗಳಿಗೂ ಇನ್ನಷ್ಟು ತುಪ್ಪ ಸುರಿದು ಬೆಂಕಿ ಹಚ್ಚುವಂತೆ ಶಿವಮೊಗ್ಗ ನಗರ ವಿಚಿತ್ರವಾಗಿ ಸಿಂಗಾರಗೊಂಡಿರುವುದು ಎಲ್ಲರಿಗೂ ಶಾಕ್ ನೀಡಿದೆ.

ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಮೊನ್ನೆ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿ ಯುವಕರ ಗುಂಪು ಪೊಲೀಸರ ಮೇಲೆ ಕಲ್ಲು ಎಸೆದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಇಂದು ಪರಿಸ್ಥಿತಿ ಕೊಂಚ ಮಟ್ಟಿಗೆ ಸುಧಾರಿಸಿದೆ. ಆದರೆ ಇದರ ನಡುವೆ ಶಿವಮೊಗ್ಗ ನಗರದಲ್ಲಿ ಭಾನುವಾರ ಸಂಜೆ ನಡೆದ ಈದ್‌ ಮಿಲಾದ್‌ ಮೆರವಣಿಗೆಗೆ ಹಾಕಲಾಗಿದ್ದ ಬ್ಯಾನರ್‌ಗಳು, ಕಟೌಟ್‌ಗಳು ಹಾಗೂ ದ್ವಾರಬಾಗಿಲುಗಳು ಇದೇನು ಭಾರತದ ಭಾಗವೋ ಅಥವಾ ಪಾಕಿಸ್ತಾನದ ಭಾಗವೋ ಎಂಬ ಅನುಮಾನವನ್ನು ಹುಟ್ಟು ಹಾಕುವಂತಿದ್ದವು.

ಹೌದು, ಶಿವಮೊಗ್ಗದ ನಗರದ ಬಡಾವಣೆಯೊಂದಕ್ಕೆ ಅಖಂಡ ಭಾರತ ಸಾಮ್ರಾಜ್ಯ ಕಟ್ಟಿದ್ದ ಮಹಾನ್‌ ದೊರೆ ಔರಂಗಜೇಬ್‌ ಎಂದು ಪಾಕಿಸ್ತಾನ ಒಳಗೊಂದ ಭಾರತ ದೇಶದ ನಕ್ಷೆಯನ್ನು ಅಳವಡಿಕೆ ಮಾಡಲಾಗಿತ್ತು. ಜೊತೆಗೆ ಟಿಪ್ಪು ಸುಲ್ತಾನ್‌ ಹಿಂದೂ ವಿರೋಧಿ ನೀತಿ ಅನುಸರಿಸುತ್ತಾ ಹಿಂದೂ ಸೈನಿಕರನ್ನು ಕೊಂದು ಅವರ ಕಾಲಿಟ್ಟಿರುವ ಬೃಹತ್‌ ಕಟೌಟ್‌ ನಿರ್ಮಿಸಿ ಅಳವಡಿಸಲಾಗಿದೆ. ಟಿಪ್ಪು ಸುಲ್ತಾನ್‌ ಖಡ್ಗವನ್ನು ಹಿಡಿದು ದಾಳಿ ಮಾಡುವಂತಹ ಸುಮಾರು 50 ಅಡಿ ಎತ್ತರದ ಬೃಹತ್‌ ಕಟೌಟ್‌ ನಿರ್ಮಾಣ ಮಾಡಿ ಅದರ ಮೇಲೆ ಮುಸ್ಲಿಂ ಬಾವುಟ ಅಳಡಿಸಲಾಗಿದೆ. ಇದೆಲ್ಲವೂ ಶಿವಮೊಗ್ಗ ಜನತೆಗಷ್ಟೇ ಅಲ್ಲದೆ ನೋಡುಗರಿಗೆಲ್ಲರಿಗೂ ಇದು ಭಾರತವೋ ಇಲ್ಲಾ ಶಿವಮೊಗ್ಗವೋ ಎಂಬ ಅನುಮಾನ ಹುಟ್ಟುಹಾಕಿ, ಎಲ್ಲರಿಗೂ ಆತಂಕವನ್ನು ತಂದೊಡ್ಡಿತ್ತು.

ಇನ್ನೂ ಇದಷ್ಟೆ ಅಲ್ಲದೆ ಶಿವಮೊಗ್ಗ ನಗರದ ರಾಗಿಗುಡ್ಡ ಬಡಾವಣೆಯ ಪ್ರವೇಶ ದ್ವಾರಕ್ಕೆ ಸಾಬ್ರು ಸಾಮ್ರಾಜ್ಯ ಎಂದು ದೊಡ್ಡ ದ್ವಾರವನ್ನು ನಿರ್ಮಾಣ ಮಾಡಲಾಗಿದೆ. ನಗರದ ಮಧ್ಯ ಭಾಗದಲ್ಲಿಯೇ ಟಿಪ್ಪು ಸಾಮ್ರಾಜ್ಯ ಎಂದು ಬೃಹತ್‌ ಬ್ಯಾನರ್‌ ಅಳವಡಿಕೆ ಮಾಡಾಗಿದೆ. ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್‌ ಹಾಗೂ ಔರಂಗಜೇಬ್‌ ಅವರ ಬೃಹತ್‌ ಕಟೌಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ
ಶಿವಮೊಗ್ಗದ ಗಾಂಧಿ ನಗರದಲ್ಲಿ ಭಾನುವಾರ ಸಂಜೆ ನಡೆದ ಈದ್‌ ಮಿಲಾದ್‌ ಹಬ್ಬದ ಮೆರವಣಿಗೆಯಲ್ಲಿ ಯುವಕರ ಗುಂಪೊಂದು ಖಡ್ಗ ಪ್ರದರ್ಶನ ಮಾಡಿದೆ.

ಶಾಂತಿ, ಸುವ್ಯವಸ್ಥೆ ನೆಲೆಸಬೇಕಾದ ಮಲೆನಾಡಿನ ನೆಲದಲ್ಲಿ ಈ ರೀತಿಯಾಗಿ ಶಾಂತಿ ಕದಡುವ ಕೆಲಸ ನಡೆಯುತ್ತಿರುವುದು ತುಂಬಾ ವಿಷಾದನೀಯ. ಪ್ರತಿಯೊಬ್ಬರಿಗೂ ಅವರ ಧರ್ಮ, ಆಚರಣೆ, ನಂಬಿಕೆಗಳನ್ನು ಆಚರಿಸಿ ಪಾಲಿಸಲು ಸಂಪೂರ್ಣ ಅವಕಾಶವಿದೆ. ಅದು ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಯಾರೇ ಆಗಿರಲಿ. ಆದರೆ ಇತರ ಧರ್ಮೀಯರ ಭಾವನೆಗಳಿಗೆ ಧಕ್ಕೆ ಆಗುವಂತಹ, ದೇಶದ ಹಿತಗಳಿಗೆ, ದೇಶದ ಕೆಲವು ತತ್ವ, ಸಿದ್ಧಾಂತ, ಸಂವಿದಾನಕ್ಕೆ ಘಾಸಿಯಾಗುವಂತಹ ಆಚರಣೆಗಳಿಗೆ ಅವಕಾಶ ಇಲ್ಲ. ಯಾವ ಧರ್ಮೀಯರೂ ಅದನ್ನು ಮಾಡಬಾರದು. ಆದರೀಗ ಶಿವಮೊಗ್ಗದಲ್ಲಿ ಅಂತಹದು ಸಂಭವಿಸಿದೆ. ಅಂಡ ಮುಸ್ಲಿಂ ದೇಶ, ಪಾಕಿಸ್ತಾನ ಭೂಪಟ, ಸಾಬರ ಸಾಮ್ರಾಜ್ಯ ಎಂದೆಲ್ಲ ಬರೆದುದು ಎಷ್ಟರ ಮಟ್ಟಿಗೆ ಸರಿ? ಇದು ದೇಶವಿರೋದಿ ಚಟುವಚಿಕೆಯಲ್ಲವೇ? ಸರ್ಕಾರ ಇಷ್ಟಾದರೂ ಸುಮ್ಮನಿರುವುದೇಕೆ. ಶಾಂತಿಕದಡುವ ಕೆಲಸಗಳಿಗೆ ಎಂದೂ ಅವಕಾಶ ನೀಡಬಾರದು. ಯಾರೇ ಅದರೂ ಅದನ್ನು ತಡೆದು ಸೂಕ್ತ ಕ್ರಮ ಕೈಗೊಳ್ಳಬೇಕು.

 

ಇದನ್ನು ಓದಿ: B S Yadiyurappa: ಯಡಿಯೂರಪ್ಪರಿಗೆ ಬಂತು ಹೊಸ ಟಾಸ್ಕ್ – ಗೆದ್ದರೆ ಮಾತ್ರ ವಿಜಯೇಂದ್ರನಿಗೆ ಬಿಜೆಪಿ ಅಧ್ಯಕ್ಷ ಪಟ್ಟ !!