School Timings: ಪೋಷಕರೇ ಗಮನಿಸಿ, ಶಾಲಾ ಸಮಯದಲ್ಲಿ ಬದಲಾವಣೆ!!!

Bengaluru news education news timings change dicision latest news

School Timings: ಬೆಂಗಳೂರು: ಇತ್ತೀಚೆಗೆ ಶಾಲಾ ಮಕ್ಕಳ ಸಮಯ ಬದಲಾವಣೆ ಕುರಿತು ಭಾರೀ ಚರ್ಚೆಯೊಂದು ನಡೆದಿತ್ತು. ಇದೀಗ ಬಂದ ಮಾಹಿತಿ ಪ್ರಕಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಶಾಲಾ ಸಮಯ ಬದಲಾವಣೆ(School Timings) ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಲು ಚಿಂತನೆ ನಡೆದಿದೆ. ಈ ಬಗ್ಗೆ ಖಾಸಗಿ, ಸರಕಾರಿ ಶಾಲೆಗಳ ಮುಖ್ಯಸ್ಥರೊಂದಿಗೆ ಸಭೆ ಮಾಡಿದ ಶಿಕ್ಷಣ ಇಲಾಖೆ ಪ್ರತಿನಿತ್ಯ 30ನಿಮಿಷ ಮೊದಲು ಆರಂಭಿಸಲು ತೀರ್ಮಾನಿಸಲಾಗುತ್ತಿದೆ.

ಹೈಕೋರ್ಟ್‌ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಂಚಾರ ದಟ್ಟನೆ ತಗ್ಗಿಸಲು ಶಾಲಾ ಸಮಯವನ್ನು ಬೇಗನೇ ಮಾಡುವಂತೆ ಸೂಚನೆ ನೀಡಿತ್ತು. ಈ ಆದೇಶ ಬಂದ ಬೆನ್ನಲ್ಲೇ ರಾಜ್ಯ ಶಿಕ್ಷಣ ಇಲಾಖೆಯು ಖಾಸಗಿ ಶಾಲಾ ಒಕ್ಕೂಟದ ಜೊತೆ ಸಭೆ ನಡೆಸಿ ಚರ್ಚೆ ನಡೆಸಿದೆ. ಹಾಗಾಗಿ ಬೆಳಗ್ಗೆ 8.45 ರಿಂದ 3.30ರವರೆಗೆ ತರಗತಿಗಳು ಇಲ್ಲಿಯವರೆಗೆ ನಡೆಯುತ್ತಿತ್ತು. ಇದನ್ನು ಮೂವತ್ತು ನಿಮಿಷಕ್ಕೆ ಇಳಿಕೆ ಮಾಡಿದರೆ ಹೇಗೆ ಎಂಬುವುದರ ಕುರಿತು ಶಿಕ್ಷಣ ಇಲಾಖೆ ಆಲೋಚನೆ ಮಾಡಿದೆ. ಟ್ರಾಫಿಕ್‌ ದಟ್ಟಣೆ ಕಡಿಮೆ ಮಾಡಲು ಶಾಲಾ ಅವಧಿ ಬೇಗ ಮಾಡುವುದು ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ ಎಂಬ ಆಕ್ಷೇಪಕ್ಕೆ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಉವ ಪ್ರದೇಶದಲ್ಲಿ ಸಮಯ ಬದಲಾವಣೆಗೆ ಶಿಕ್ಷಣ ಇಲಾಖೆ ಮುಂದಾಗಿದೆ ಎನ್ನಲಾಗಿದೆ.

ಖಾಸಗಿ ಶಾಲೆಗಳ ಒಕ್ಕೂಟ, ಶಾಲಾ ವಾಹನಗಳ ಸಂಘ, ಪೋಷಕರ ಜೊತೆ ಶಿಕ್ಷಣ ಇಲಾಖೆ ಮಹತ್ವದ ಸಭೆ ನಡೆಸಲಿದೆ. ಈ ತಿಂಗಳ 5 ನೇ ತಾರೀಕು 11 ಗಂಟೆಗೆ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಆಯುಕ್ತರ ನೇತ್ರತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಮಹತ್ವದ ಮಾಹಿತಿ ಹೊರಬೀಳಲಿದೆ.

ಇದನ್ನೂ ಓದಿ:  Devaraj Arasu Education Loans 2023-24: ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಶಿಕ್ಷಣಕ್ಕಾಗಿ ಸಾಲ! 5 ರಿಂದ 20 ಲಕ್ಷವರೆಗೆ ಶೈಕ್ಷಣಿಕ ಸಾಲ!

Leave A Reply

Your email address will not be published.