Chandrayan-3: ‘ಶಿವಶಕ್ತಿ’ ಪಾಯಿಂಟ್ ಮೇಲೆ ಸಂಭವಿಸಿದೆ ಯಾರು ಊಹಿಸದ ಘಟನೆ- ಪ್ರಜ್ಞಾನ್, ವಿಕ್ರಮ್ ಎಚ್ಚರವಾಗದಿರಲು ರೋಚಕ ಕಾರಣ ಬಹಿರಂಗ !!

Latest news Chandrayan-3 Isro revealed the reason Vikram and Pragyan didn't wake up

Chandrayan-3: ಭಾರತದ ಚಂದ್ರಯಾನ-3 (Chandrayan-3) ಯೋಜನೆ ಅಭೂತಪೂರ್ವ ಯಶಸ್ಸು ಕಂಡಿದೆ. ಅಂದುಕೊಂಡಂತೆ ಸಾಫ್ಟ್ ಲ್ಯಾಂಡ್ ಆಗುವಲ್ಲಿಂದ ಹಿಡಿದು ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಗಳು 15 ದಿನಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಮಾಹಿತಿ ರವಾನಿಸಿವೆ. ಒಟ್ಟಿನಲ್ಲಿ ಅಂದುಕೊಂಡಂತೆ ಎಲ್ಲವೂ ಯಶಸ್ವಿಯಾಗಿದೆ. ಆದರೆ ಮತ್ತೆ ಮುಂದಿನ ದಿನಗಳಲ್ಲೂ ಈ ನೌಕೆಗಳು ಕಾರ್ಯನಿರ್ವಹಿಸುತ್ತವೆ ಎಂಬ ಭರವಸೆಗೆ, ನಂಬಿಕೆಗೆ ಕೊಂಚ ಹಿನ್ನಡೆಯಾಗಿದ್ದು ಸ್ಲೀಪ್ ಮೋಡ್ ಅಲ್ಲಿರುವ ನೌಕೆಗಳನ್ನು ಎಬ್ಬಿಸಲು ಇಸ್ರೋ ನಿರಂತರವಾಗಿ ಶ್ರಮ ಹಾಕುತ್ತಿದೆ. ಆದರೆ ಇದುವರೆಗೂ ಏನೂ ಪ್ರಯೋಜನ ಆಗಿಲ್ಲ. ಆದರೀಗ ಇದಕ್ಕಿದ್ದಂತೆ ಇಸ್ರೋ ವಿಕ್ರಮ್ ಮತ್ತು ಪ್ರಗ್ಯಾನ್ ಎಚ್ಚರಗೊಳ್ಳದಿರಲು ರೋಚಕ ಕಾರಣವನ್ನು ಬಹಿರಂಗಗೊಳಿಸಿದೆ.

 

ಹೌದು, ಚಂದ್ರನ ರಾತ್ರಿಯ ಹಿಂದಿನ ಚಕ್ರದಲ್ಲಿ ವಿಕ್ರಮ್ ಹಾಗೂ ಪ್ರಗ್ಯಾನ್ ಇಬ್ಬರೂ ಬದುಕುಳಿಯಬಹುದೆಂಬ ಭರವಸೆಯಲ್ಲಿ ಬಹು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಲ್ಯಾಂಡರ್-ರೋವರ್ ಜೋಡಿಯು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿತ್ತು ಮತ್ತು ಸ್ಲೀಪ್ ಮೋಡ್‌ಗೆ ಸೇರಿಸಲಾಯಿತು. ಬೆಂಗಳೂರಿನ ಕೌರೌ ಮತ್ತು ISTRAC ನಲ್ಲಿರುವ ಯುರೋಪಿಯನ್ ನಿಲ್ದಾಣಗಳು ಪಿಂಗ್ ಮಾಡುತ್ತಿದ್ದರೂ ಯಾವುದೇ ಫಲಿತಾಂಶವಿಲ್ಲ. ಆದರೆ ಇದೀಗ ಈ ನೌಕೆಗಳು ಯಾಕೆ ಎಚ್ಚರವಾಗುತ್ತಿಲ್ಲ ಎಂದು ಇಸ್ರೋ ಸ್ಪೋಟಕ ಸತ್ಯವೊಂದನ್ನು ಹೊರಹಾಕಿದೆ.

ಶಿವ ಶಕ್ತಿ ಪಾಯಿಂಟ್ ಧೀರ್ಘವಾದ ನೆರಳು?!
ಚಂದ್ರನ ಭೂದೃಶ್ಯದ ಮೇಲೆ ಸೂರ್ಯನು ಅಸ್ತಮಿಸುತ್ತಿದ್ದಂತೆ, ಅದು ಭಾರತದ ಚಂದ್ರಯಾನ-3 ಮಿಷನ್‌ನ ಐತಿಹಾಸಿಕ ಲ್ಯಾಂಡಿಂಗ್ ತಾಣವಾದ ಶಿವಶಕ್ತಿ ಪಾಯಿಂಟ್‌ನ ಮೇಲೆ ದೀರ್ಘವಾದ ನೆರಳುಗಳನ್ನು ಬೀಳಿಸುತ್ತದೆ. ಹೀಗಾಗಿ ಅಲ್ಲಿ ದೊಡ್ಡದಾದ ಕರಿನೆರಳುಗಳು ಆವರಿಸಿವೆ. ಆದ್ದರಿಂದ ಸೂರ್ಯನ ಕಿರಣಗಳು ತಾಗದ ಕಾರಣ ಭಾರತದ ಚಂದ್ರಯಾನ-3 ಈ ನೌಕೆಗಳು ಎಚ್ಚರವಾಗುತ್ತಿಲ್ಲ ಎಂದು ಇಸ್ರೋ ಹೇಳಿದೆ.

 

ಇದನ್ನು ಓದಿ: Darshan Dhruva Sarja:  ದರ್ಶನ್‌ರನ್ನು ಮಾತನಾಡಿಸದ ಧ್ರುವ – ಅಸಲಿ ವಿಚಾರ ಬಿಚ್ಟಿಟ್ಟ ಪ್ರಥಮ್‌

Leave A Reply

Your email address will not be published.