U T Khader: ಮುಸ್ಲಿಂ ನಾಯಕ ಯುಟಿ ಖಾದರ್ ಗೆ ಮುಂದಿನ ಸಿಎಂ ಪಟ್ಟ ?! ಕುತೂಹಲ ಕೆರಳಿಸಿದ ಡಿ ಕೆ ಶಿವಕುಮಾರ್ ಹೇಳಿಕೆ !!

Karnataka politics news DK Shivakumar said Muslim leader UT Khader become CM latest news

U T Khader: ನಮ್ಮ ರಾಜ್ಯದಲ್ಲಿ ಈ ಹಿಂದೆ ಸ್ಪೀಕರ್ ಆದವರೆಲ್ಲರೂ ಮುಂದಿನ ದಿನಗಳಲ್ಲಿ ಸಿಎಂ ಪಟ್ಟವನ್ನು ಅಲಂಕರಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪ್ರಸ್ತುತ ಸ್ಪೀಕರ್ ಆಗಿರುವ ಯು ಟಿ ಖಾದರ್(U T Khader) ಅವರು ಮಂದೆ ಸಿಎಂ ಆದರೂ ಆಗಬಹುದು ಎಂದು ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್(D K Shivkumar) ಕುತೂಹಲದ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಬೆಂಗಳೂರಿನಲ್ಲಿ(Bengalore) ಶನಿವಾರ ನಡೆದ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ನಿನ ನೂತನ ಸೌಹಾರ್ದ ಭವನ(Souhard bhavn) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಯು ಟಿ ಖಾದರ್ ಅವರಿಗೆ ಮಂತ್ರಿ ಮಾಡಬೇಕಿತ್ತು. ಮಾಡಬೇಕೆಂದು ಅವರ ಸಮುದಾಯದವರೂ ಒತ್ತಾಯಿಸಿದ್ದಾರೆ. ಆದರೆ ಖಾದರ್ ಅವರೇ ನೀವೇನು ಮಂತ್ರಿ ಆಗ್ಲಿಲ್ಲ ಎಂದು ಚಿಂತೆ ಮಾಡೊದು ಬೇಡ ಎಸ್ ಎಂ ಕೃಷ್ಣ ಅವರು ಸ್ಪೀಕರ್ ಆಗಿದ್ದರು. ಜಗದೀಶ್ ಶೆಟ್ಟರ್ ಅವರು ಸ್ಪೀಕರ್ ಆಗಿದ್ದರು. ಆಮೇಲೆ ಏನಾದ್ರು…? ಯು.ಟಿ.ಖಾದರ್ ಅವರ ಹಣೆ ಬರಹ ಹೇಗಿದ್ಯೋ ಏನೋ? ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಂದೆ ಸಿಎಂ ಆಗುವ ಅವಕಾಶ ಸಿಗಬಹುದು ಎಂದು ಡಿಕೆಶಿ ಹೇಳಿದರು.

ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಬ್ಯಾರಿ ಭಾಷಿಕ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ ಎಂದರು. ಅಲ್ಲದೆ ಈ ವೇಳೆ ನನಗೂ ‘ಬ್ಯಾರಿ’ ಸಮುದಾಯದ ಜೊತೆಗೆ ರಾಜಕೀಯ, ವ್ಯವಹಾರಿಕವಾಗಿ ಸಂಬಂಧ ಇದೆ ಎಂದು ಬ್ಯಾರಿ(Byari) ಸಮುದಾಯವನ್ನು ಹಾಡಿ ಹೊಗಳಿದ ಅವರು ಎಲ್ಲಾ ಧರ್ಮದವರ ಜೊತೆ ಸ್ನೇಹಭಾವದಿಂದ ಇರುವ ಹಾಗೂ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಸೌಹಾರ್ದಯುತ ಗುಣ ಈ ಸಮುದಾಯಕ್ಕೆ ಇದೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆಗೆ ಬ್ಯಾರಿ ಭಾಷಿಕರು ನೀಡಿರುವ ಕೊಡುಗೆ ಸ್ಮರಣೀಯವಾದುದು. ಹೆಣ್ಣುಮಕ್ಕಳು ಒಡವೆ ಹಾಕಿಕೊಂಡರೆ ಸುಂದರವಾಗಿ ಕಾಣುತ್ತಾರೋ, ಬ್ಯಾರಿ ಭಾಷಿಕರು ಕನ್ನಡವನ್ನು ಸುಂದರಗೊಳಿಸಿದ್ದಾರೆ ಎಂದರು.

ಇನ್ನು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಬಿಜೆಪಿಯವರೇಕೆ ಮುಸ್ಲಿಮರನ್ನು ದ್ವೇಷಿಸುತ್ತಾರೆ. ಸಂವಿಧಾನವನ್ನು ಒಪ್ಪದೇ ಇರುವವರು ಪ್ರಜಾಪ್ರಭುತ್ವದಲ್ಲಿರುವುದು ಒಳ್ಳೆಯದಲ್ಲ. ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿ ಕಟ್ಟುವುದು, ಧರ್ಮ, ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವುದು ರಾಜಕಾರಣವಲ್ಲ. ಜನರಿಗಾಗಿ ರಾಜಕಾರಣ ಮಾಡಬೇಕೆ ಹೊರತು ಜನ ಹಾಗೂ ಸಮಾಜವನ್ನು ಬಿಟ್ಟು ರಾಜಕಾರಣ ಮಾಡಬಾರದು ಎಂದು ಹೇಳಿದರು.

ಇದನ್ನೂ ಓದಿ: Gruhalakshmi scheme: ಇನ್ನೂ ಗೃಹಲಕ್ಷ್ಮೀ ಹಣ ಬಂದಿಲ್ಲವೇ? ಹಾಗಿದ್ರೆ ಇಲ್ಲಿ ಹೇಳಿದಂತೆ ಮಾಡಿ, 2ಕಂತಿನ ಹಣವನ್ನು ಒಟ್ಟೊಟ್ಟಿಗೆ ಪಡೆಯಿರಿ

Leave A Reply

Your email address will not be published.