Gruhalakshmi scheme: ಇನ್ನೂ ಗೃಹಲಕ್ಷ್ಮೀ ಹಣ ಬಂದಿಲ್ಲವೇ? ಹಾಗಿದ್ರೆ ಇಲ್ಲಿ ಹೇಳಿದಂತೆ ಮಾಡಿ, 2ಕಂತಿನ ಹಣವನ್ನು ಒಟ್ಟೊಟ್ಟಿಗೆ ಪಡೆಯಿರಿ
Congress guarantee are you not received the Gruhalakshmi Yojana money yet then do this and get 2 installment Money together
Gruhalakshmi Yojana money: ಗೃಹಲಕ್ಷ್ಮೀ ಯೋಜನೆ(Gruha lakshmi) ಈಗಾಗಲೇ ಜಾರಿಯಾಗಿದ್ದು, ಫಲಾನುಭವಿ ಮಹಿಳೆಯರ ಖಾತೆಗೆ ಈಗಾಗಲೇ 2 ತಿಂಗಳಳಿಗೆ 2-2 ಸಾವಿರ ರೂಪಾಯಿಯಂತೆ 4 ಸಾವಿರ ಜಮೆ ಆಗಿದೆ. ಆದರೆ ಅದೆಷ್ಟೋ ಗೃಹಲಕ್ಷ್ಮಿಯರಿಗೆ ಇನ್ನೂ ಹಣ ಬಂದಿಲ್ಲ. ಕೆಲವರಿಗಂತೂ ಮೊದಲ ಕಂತಿನ ಹಣ ಕೂಡ ಬಂದಿಲ್ಲ. ನಿಮಗೂ ಹಣ ಇನ್ನೂ ಬಂದಿಲ್ಲವೇ? ಹಾಗಿದ್ರೆ ಜಸ್ಟ್ ಹೀಗ್ ಮಾಡಿ. ಎರಡೂ ಕಂತಿನ ಹಣವನ್ನು ಒಟ್ಟೊಟ್ಟಿಗೆ ಪಡೆಯಿರಿ.
ಹಣ ಬರದಿರಲು ಕಾರಣವೇನು?
ಗೃಹನಿಯರೇ, ನಿಮ್ಮ ಬ್ಯಾಂಕ್ ಖಾತೆ(Bank account) ಗೃಹಲಕ್ಷ್ಮಿ ಹಣ( Gruhalakshmi Yojana money)ಬಾರದೇ ಇರೋರು ಎರಡು ಸಾವಿರ ಹಣ ಜಮೆ ಆಗದೇ ಇರಲು ಕಾರಣವೇನು? ಡಿಬಿಡಿ ಸ್ಟೇಟಸ್ ಚೆಕ್ ಮಾಡೋದೇಗೆ? ಎಂಬ ಪ್ರಶ್ನೆಗೆ ಡಿಬಿಟಿ ಕರ್ನಾಟಕ ಆಪ್ ಮೂಲಕ ಡಿಬಿಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿದೆ. ಅದನ್ನು ನೋಡಲು ಹೀಗೆ ಮಾಡಿ.
• ನಿಮ್ಮ ಮೊಬೈಲ್ ಆಪ್ ನಲ್ಲಿ ಡಿಬಿಡಿ ಕರ್ನಾಟಕ ಆಪ್ ಡೌನ್ ಲೋಡ್ ಮಾಡಿ.
• ಆನಂತರ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಕೊಟ್ರೆ ಒಟಿಪಿ ಬರುತ್ತೆ.
• ಆನಂತರ ಅನ್ನಭಾಗ್ಯ ಡಿಬಿಟಿ ಚೆಕ್ ಮಾಡಬೇಕಾದರೆ ಬಿಪಿಎಲ್ ಕಾರ್ಡ್ ಸಂಖ್ಯೆ ಹಾಕಿ ಪರಿಶೀಲಿಸಿ.
• ಗೃಹಲಕ್ಷ್ಮಿ ಪರಿಶೀಲಿಸಲು ಅರ್ಜಿ ಸಂಖ್ಯೆ ಹಾಕಿದರೆ ಸ್ಟೇಟಸ್ ಸಿಗಲಿದೆ.
ಎರಡೂ ಕಂತಿನ ಹಣ ಬೇಕಂದ್ರೆ ಈ ರೀತಿ ಮಾಡಿ:
1) ನೀವು ಮೊದಲು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮೂರರಲ್ಲಿ ಕೂಡ ಕುಟುಂಬದ ಮುಖ್ಯಸ್ಥೆಯ ಹೆಸರು ಒಂದೇ ರೀತಿ ಇರಬೇಕು. ಇದನ್ನು ಮೊದಲು ಚೆಕ್ ಮಾಡಿಕೊಳ್ಳಿ. ಉದಾಹರಣೆಗೆ : ಸರೋಜಾದೇವಿ ಎಂದು ಆಧಾರ್ ಕಾರ್ಡ್ ನಲ್ಲಿ ಇರುತ್ತೆ, ರೇಷನ್ ಕಾರ್ಡ್ ನಲ್ಲಿ ಸರೋಜಾ ಎಂದು ಮಾತ್ರ ಇರುತ್ತದೆ. ಇಂತಹ ತಪ್ಪುಗಳು ಆಗಿದ್ದಲ್ಲಿ ಕೂಡಲೇ ಸರಿಪಡಿಸಿಕೊಳ್ಳಿ.ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರದಲ್ಲಿ ಮಾಹಿತಿಗಳು ಹೊಂದಾಣಿಕೆ ಆಗಿರಬೇಕು.
2) ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಆಗಿದೆಯೇ ಎನ್ನುವುದನ್ನು ಧೃಡಪಡಿಸಿಕೊಳ್ಳಬೇಕು. ಹಾಗೂ ನಿಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿದೆ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು.
3) ಇ ಕೆವೈಸಿ ಆಗದೇ ಇದ್ದರೆ ಹತ್ತಿರದ ಸೇವಾ ಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗಿ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿ ನೀಡಿ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಕೊಳ್ಳಿ.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಆಧಾರ್ ಲಿಂಕ್ ಮಾತ್ರವಲ್ಲ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಕೂಡ ಆಗಿರಬೇಕು.
4) ಹಣ ವರ್ಗಾವಣೆ ಮಾಡುವಾಗ ಅವರ ಖಾತೆಗಳು ಎರರ್ ಬರುತ್ತಿವೆ ಎನ್ನಲಾಗಿದೆ. ಮಹಿಳೆಯರು ಅವರ ಖಾತೆಗಳನ್ನು ಬಳಕೆ ಮಾಡದ ಕಾರಣ ಅವುಗಳು ಕ್ಲೋಸ್ ಆಗಿದೆ. ಹಾಗಾಗಿ ಎರರ್ ಬರುತ್ತಿದೆ ಎನ್ನಲಾಗಿದೆ.
5) ಬ್ಯಾಂಕ್ ಖಾತೆ ರದ್ದಾಗಿರುವ ಕಾರಣದಿಂದ ಅಂತಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಹಣ ಬಾರದ ಮಹಿಳೆಯರು ಕೂಡಲೇ ತಮ್ಮ ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಬ್ಯಾಂಕ್ ಗೆ ತೆರಳಿ ಈ ಬಗ್ಗೆ ಪರಿಶೀಲನೆ ಮಾಡಿಸಿ.
ಅರ್ಜಿ ಸ್ಟೇಟಸ್ ಚೆಕ್ ಮಾಡಿ:
ದೃಢಪಡಿಸಿಕೊಳ್ಳಿ.ಇತ್ತೀಚೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ತಮ್ಮ ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು. ಆದರೆ ಅದೀಗ ಸ್ಥಗಿತಗೊಂಡಿದ್ದು, ಗೃಹಲಕ್ಷ್ಮಿ ಮಂಜೂರಾತಿ ಪತ್ರ ಅಥವಾ ಪಡಿತರ ಚೀಟಿ ಸಂಖ್ಯೆಯನ್ನು ತೆಗೆದುಕೊಂಡು ಹೋಗಿ ಹತ್ತಿರದಲ್ಲಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಗ್ರಾಮ ಒನ್ ಸೇವಾಕೇಂದ್ರಗಳಲ್ಲಿ ಗೃಹಲಕ್ಷ್ಮೀ ಯೋಜನೆ ಸ್ಟೇಟಸ್ ಚೆಕ್ ಮಾಡಿಸಿಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನರಿಗೆ ಮಾಸಿಕ 2 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತಿದ್ದು, ಈ ಯೋಜನೆಗಾಗಿ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಅವಧಿಗೆ 4600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.ಮಹಿಳೆಯರು ತಮ್ಮ ಖಾತೆಗಳಿಗೆ ಆಧಾರ್ ಲಿಂಕ್ ಆಗಿಲ್ಲ ಎಂದರೆ ಅಥವಾ ಆಧಾರ್ ಲಿಂಕ್ ಆಗಿದ್ದರು ಆ ಖಾತೆ ಆಕ್ಟಿವ್ ಆಗಿಲ್ಲ ಎಂದರೆ ಇದನ್ನು ಸರಿಪಡಿಸಿಕೊಳ್ಳಬೇಕು.
ಇದನ್ನೂ ಓದಿ: D K Shivkumar: ಬ್ಯಾರಿಗಳಿಗೂ ನನಗೂ ‘ಆ ಟೈಪ್’ ಸಂಬಂಧವಿದೆ !! ಅಚ್ಚರಿ ಹೇಳಿಕೆ ನೀಡಿದ ಡಿ ಕೆ ಶಿವಕುಮಾರ್