Maharashtra: 2.5 ಲಕ್ಷ ಬೆಲೆಯ ಚಿನ್ನದ ಸರ ನುಂಗಿದ ಎಮ್ಮೆ – ಹೊಟ್ಟೆಯನ್ನೇ ಸೀಳಿದ ಪಾಪಿ ಮಾಲಿಕ !
Maharashtra: ಎಮ್ಮೆ 2.5 ಲಕ್ಷ ಬೆಲೆಯ ಚಿನ್ನದ ಸರ (gold chain) ನುಂಗಿದ್ದು, ಈ ಕಾರಣಕ್ಕೆ ಮಾಲೀಕ ಎಮ್ಮೆಯ ಹೊಟ್ಟೆಯನ್ನೇ ಸೀಳಿರುವ ಘಟನೆ ಮಹಾರಾಷ್ಟ್ರದ (Maharashtra) ಮಂಗ್ರುಲ್ಪಿರ್ (ವಾಶಿಂ) ನಲ್ಲಿರುವ ಸರ್ಸಿ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಸಾಕಿದ್ದ ಎಮ್ಮೆಗೆ ತರಕಾರಿ ಸಿಪ್ಪೆಯನ್ನು ಹಾಕುವಾಗ ಮಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವು ಆಕಸ್ಮಿಕವಾಗಿ ಕಳಚಿ ಬಿದ್ದಿದೆ. ಇದು ಸುಮಾರು 35 ಗ್ರಾಂನ 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರವಾಗಿದ್ದು, ಅದನ್ನು ಎಮ್ಮೆ ಸಿಪ್ಪೆಯ ಜೊತೆಗೆ ನುಂಗಿಬಿಟ್ಟಿದೆ. ಇದು ಮಹಿಳೆಯ ಗಮನಕ್ಕೆ ಬಂದಿಲ್ಲ.
Football Player Death: ಉದಯೋನ್ಮುಖ ಫುಟ್ಬಾಲ್ ಆಟಗಾರ ಮೃತ್ಯು; ಸಿಎಂ ಸಿದ್ದರಾಮಯ್ಯ ಸಂತಾಪ!!
ಸರ ಕಳೆದುಕೊಂಡ ಮಹಿಳೆ ಎಷ್ಟೇ ಹುಡುಕಾಡಿದರೂ ಸರ ಸಿಗದ ಹಿನ್ನೆಲೆಯಲ್ಲಿ ಗಂಡನಿಗೆ ತಿಳಿಸಿದ್ದಾರೆ. ಆಗ ಮನೆಯಲ್ಲಿ ಎಲ್ಲರೂ ಹುಡುಕಾಡಿದ್ದಾರೆ. ನಂತರ ಎಮ್ಮೆಗೆ ತರಕಾರಿ ಸಿಪ್ಪೆ ತಿನ್ನಿಸಿದ್ದು ನೆನಪಿಗೆ ಬಂದಿದೆ. ಎಮ್ಮೆಯೇ ಸರವನ್ನು ನುಂಗಿರಬೇಕು ಎಂದು ತಿಳಿದು ವೈದ್ಯರ ಬಳಿ ಎಮ್ಮೆಯನ್ನು ಕರೆದೊಯ್ದಿದ್ದಾರೆ. ಆದರೆ, ಸ್ಥಳೀಯವಾಗಿ ಎಮ್ಮೆಯ ಹೊಟ್ಟೆಯಲ್ಲಿರುವ ಚಿನ್ನದ ಸರ ಹೊರಗೆ ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಂತರ ಎಮ್ಮೆಯನ್ನು ಪಟ್ಟಣ ಪ್ರದೇಶ ಮಾವಾಶಿಮ್‌ಗೆ ಕೊಂಡೊಯ್ಯಲು ಎಮ್ಮೆ ಮಾಲೀಕ ಭೋಯರ್‌ಗೆ ಹೇಳಿದ್ದಾರೆ. ಅಲ್ಲಿ ಅನುಭವಿ ಪಶುವೈದ್ಯರು ಎಮ್ಮೆಯ ಹೊಟ್ಟೆಯನ್ನು ಪರೀಕ್ಷಿಸಿದರು. ಮಾವಾಶಿಮ್‌ನ ಹಿರಿಯತ ಪಶು ವೈದ್ಯಾಧಿಕಾರಿ ಲೋಹ ಶೋಧಕ ಯಂತ್ರವನ್ನು ಬಳಸಿ ಚಿನ್ನದ ಸರ ಎಮ್ಮೆಯ ಹೊಟ್ಟೆಯಲ್ಲಿರುವುದನ್ನು ತಿಳಿದುಕೊಂಡಿದ್ದಾರೆ. ಎಮ್ಮೆಯಿಂದ ಚಿನ್ನದ ಸರವನ್ನು ಹೊರ ತೆಗೆಯುವುದಕ್ಕೆ ಪ್ರಯತ್ನ ಮಾಡಿದ್ದಾರೆ.
MS Dhoni: ಎಂ.ಎಸ್ ಧೋನಿ ಅಭಿಮಾನಿ ಆತ್ಮಹತ್ಯೆ
ಶತಪ್ರಯತ್ನ ಪಟ್ಟರೂ ಎಮ್ಮೆಯ ಹೋಟ್ಟೆಯಿಂದ ಚಿನ್ನದ ಸರ ತೆಗೆಯಲಾಗದಿದ್ದಾಗ ಎಮ್ಮೆಯ ಹೊಟ್ಟೆಯನ್ನು ಕೊಯ್ದು ಶಸ್ತ್ರಚಿಕಿತ್ಸೆ ಮಾಡಿ ಹೊರಗೆ ತೆಗೆಯಬೇಕು ಎಂದು ವೈದ್ಯರು ಹೇಳಿದರು. ಇದಕ್ಕೆ ಮಾಲೀಕರು ಕೂಡ ಅನುಮತಿಯ ಮೇರೆಗೆ ಎಮ್ಮೆಯ ಹೊಟ್ಟೆಗೆ ಶಸ್ತ್ರಚಿಕಿತ್ಸೆ ಮಾಡಿ ಚಿನ್ನದ ಸರವನ್ನು ಹೊರ ತೆಗೆದಿದ್ದಾರೆ. ಸದ್ಯ ಎಮ್ಮೆ ಆರೋಗ್ಯವಾಗಿದೆ ಹಾಗೂ ಚಿನ್ನದ ಸರ ಮರಳಿ ಸಿಕ್ಕಿದ್ದು ಮಾಲೀಕನಿಗೆ ಸಂತಸ ಉಂಟಾಗಿದೆ.