Siddaramaiah: ಮುಖ್ಯಮಂತ್ರಿಯ ಫೋಟೋ ಬಳಸಿ ಸೋಶಿಯಲ್​ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್: ಕಾನೂನು ಕ್ರಮಕ್ಕೆ ಕಾಂಗ್ರೆಸ್​ ಒತ್ತಾಯ

Latest news Siddaramaiah Derogatory post on social media using photo of Chief Minister

Siddaramaiah: ಸಿಎಂ ಸಿದ್ದರಾಮಯ್ಯನವರ (Siddaramaiah) ನೂತನ ಸರ್ಕಾರ ರಚನೆಯಾದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಇದೇ ಮೊದಲಲ್ಲ. ಅದಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದವರಿಗೆ ಈ ಮೊದಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.

 

ಅಂತೆಯೇ ಇದೀಗ, ಬಿಜೆಪಿ ಪಕ್ಷದ ದಾವಣಗೆರೆ ಕಾರ್ಯಕರ್ತ ಹೆಸರಿನ ಫೇಸ್ ಬುಕ್​ ಖಾತೆಯಿಂದ ಸಿದ್ದು ಸವಾರಿ ಮಸೀದಿ ಕಡೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಲಾಗಿದ್ದು, ಈ ಪೋಸ್ಟ್​ಗೆ ಮತ್ತಷ್ಟು ಅವಹೇಳನಕಾರಿಯಾಗಿ ಹತ್ತಾರು ಜನ ಕಾಮೆಂಟ್ ಹಾಕಿದ್ದಾರೆ. ಹಾಗಾಗಿ ಪೋಸ್ಟ್​ ಮಾಡಿದ ಹಾಗೂ ಅದಕ್ಕೆ ಕಾಮೆಂಟ್​ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೆಪಿಸಿಸಿ ವಕ್ತಾರ ಡಿ ಬಸವರಾಜ್​ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹೌದು, ಈಗಾಗಲೇ ಸಿಎಂ ಸಿದ್ದರಾಮಯ್ಯರಂತಹ ಒಬ್ಬ ನಾಯಕನ ಬಗ್ಗೆ ಫೇಸ್ ಬುಕ್​ನಲ್ಲಿ ಪೋಸ್ಟ್ ಹಾಕಿದವರ ಹಾಗೂ ಕಾಮೆಂಟ್​ ಮಾಡಿದವರ ವಿರುದ್ಧ ‌ಕ್ರಮಕ್ಕೆ ಕಾಂಗ್ರೆಸ್​ ಒತ್ತಾಯಿಸಿದೆ.

 

ಇದನ್ನು ಓದಿ: ವಿಟ್ಲ: ಸೇತುವೆಗೆ ಬೈಕ್ ಡಿಕ್ಕಿ ಹೊಡೆದು 40 ಅಡಿ ಆಳದ ನದಿಗೆ ಬಿದ್ದ ಸವಾರ !

Leave A Reply

Your email address will not be published.