QR Code: QR ಕೋಡ್ ಸ್ಕ್ಯಾನ್ ಮಾಡಿ ಹಣ ಹಾಕುತ್ತೀರಾ ?! ಹಾಗಿದ್ರೆ ಎಚ್ಚರ, ಇದೊಂದು ತಪ್ಪು ಮಾಡಿದ್ರೆ ನಿಮ್ಮ ಖಾತೆಯೇ ಖಾಲಿಯಾಗುತ್ತೆ !!
Latest news Shocking news Be careful if you are paying by scanning the QR code
QR Code: ಆನ್‌ಲೈನ್ ಪಾವತಿ (online payment) ಪ್ರಕ್ರಿಯೆ ಆರಂಭವಾದಾಗಿನಿಂದ ಸಾಮಾನ್ಯ ಜನರಲ್ಲಿ ಕ್ಯೂಆರ್ ಕೋಡ್ (QR Code) ಎಂಬ ಮಾತು ಕೇಳಿ ಬರಲಾರಂಭಿಸಿದೆ. ಶಾಪಿಂಗ್ ಅಥವಾ ಯಾವುದೇ ರೆಸ್ಟೋರೆಂಟ್‌ನಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪಾವತಿಯನ್ನು ಸುಲಭವಾಗಿ ಮಾಡಬಹುದು. ಇದರೊಂದಿಗೆ ಚಿಲ್ಲರೆ ಹಣ ಜೊತೆಗೊಯ್ಯುವ ಚಿಂತೆ ಇರುವುದಿಲ್ಲ. ಅಥವಾ ಕ್ಯಾಶ್ ನಿಮ್ಮೊಂದಿಗೆ ಸಾಗಿಸುವ ಅಗತ್ಯವಿಲ್ಲ. ನಿಮ್ಮ ಫೋನ್ ಸಹಾಯದಿಂದ ಪಾವತಿ ಸುಲಭವಾಗುತ್ತದೆ.
ಆದರೆ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಾವತಿ ಮಾಡುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕಿಂಗ್ ವಂಚನೆಯ ಪ್ರಕರಣಗಳು ಸಹ ವೇಗವಾಗಿ ಹೆಚ್ಚಿವೆ. ನೀವು ಕೂಡ QR ಕೋಡ್ ಸ್ಕ್ಯಾನ್ ಮಾಡಿ ಹಣ ಹಾಕುತ್ತೀರಾ ?! ಹಾಗಿದ್ರೆ ಎಚ್ಚರ, ಇದೊಂದು ತಪ್ಪು ಮಾಡಿದ್ರೆ ನಿಮ್ಮ ಖಾತೆಯೇ ಖಾಲಿಯಾಗುತ್ತೆ !!
ಸೈಬರ್ ಅಪರಾಧಿಗಳು ಕ್ಯೂಆರ್ ಕೋಡ್ ಹೊಂದಿರುವ ಫಿಶಿಂಗ್ ಇಮೇಲ್ ಗಳ ಮೂಲಕ ಜನರನ್ನು ವಂಚಿಸಿದ ಅನೇಕ ಪ್ರಕರಣಗಳು ನಡೆದಿವೆ. ಇದರಲ್ಲಿ ಸೈಬರ್ ವಂಚಕರು ಲಿಂಕ್ ಹೊಂದಿರುವ ಸಂದೇಶವನ್ನು ಕಳುಹಿಸುತ್ತಾರೆ, ಇದನ್ನು ಸ್ಕ್ಯಾನ್ ಮಾಡಿದರೆ ನಿಮ್ಮ ಬ್ಯಾಂಕ್ ನ ಸಂಪೂರ್ಣ ಮಾಹಿತಿ ಅವರಿಗೆ ಹೋಗುತ್ತದೆ. ಬ್ಯಾಂಕ್ ವಿವರಗಳು ಮತ್ತು ವೈಯಕ್ತಿಕ ವಿವರಗಳು ಸೈಬರ್ ಅಪರಾಧಿಗಳನ್ನು
ತಲುಪುತ್ತದೆ.
ಹಾಗೇ ಅಪರಿಚಿತ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ. ಅಥವಾ ನಿಮ್ಮ ಯುಪಿಐ ಪಿನ್ ಅನ್ನು ನಮೂದಿಸಬೇಡಿ. ಒಂದು ವೇಳೆ ಸ್ಕ್ಯಾನ್ ಮಾಡಿ ಯುಪಿಐ (UPI) ಪಿನ್ ನಮೂದಿಸಿದರೆ ನಿಮ್ಮ ಖಾತೆಯಿಂದ ಎಲ್ಲಾ ಹಣ ಖಾಲಿ ಆಗುತ್ತದೆ. ಹಣವನ್ನು ಕಳುಹಿಸುವ ಮೊದಲು ಯಾವಾಗಲೂ ಮೊಬೈಲ್ ಸಂಖ್ಯೆ ಹೆಸರು ಮತ್ತು UPI ಐಡಿಯನ್ನು ಪರಿಶೀಲಿಸಿ. ತಪ್ಪಾಗಿ ಪದೇ ಪದೇ UPI ಪಿನ್ ಎಂಟ್ರಿ ಮಾಡಬೇಡಿ, ಹಣ ವರ್ಗಾವಣೆಗಾಗಿ ಸ್ಕ್ಯಾನರ್ ಅನ್ನು ಸರಿಯಾಗಿ ಬಳಸಿ.