ಪುತ್ತೂರು: ಕಾಂಗ್ರೆಸ್ ಮುಖಂಡನ ಮನೆ ದರೋಡೆ ಪ್ರಕರಣ , ಆರು ಮಂದಿಯ ಬಂಧನ

puttur news Congress leader's home robbery case arrest of six people

Puttur : ತಾಲೂಕಿನ ಬಡಗನ್ನೂರು ಗ್ರಾ.ಪಂ.ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಅವರ ಮನೆ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಸೆ.6ರಂದು ರಾತ್ರಿ ಕುದ್ಕಾಡಿಯ ಮನೆಯಲ್ಲಿ ಗುರುಪ್ರಸಾದ್ ರೈ ಹಾಗೂ ತಾಯಿ ಕಸ್ತೂರಿ ಅವರನ್ನು ಕಟ್ಟಿ ಹಾಕಿ ಚಿನ್ನಾಭರಣ-ನಗದು ಹಣ ದರೋಡೆ ನಡೆಸಲಾಗಿತ್ತು.

ಆರೋಪಿಗಳು ಮಾರಕಾಯುಧಗಳನ್ನು ಹಿಡಿದು ಬೆದರಿಸಿ ಇಬ್ಬರನ್ನೂ ಸೋಫಾದಲ್ಲಿ ಕುಳ್ಳಿರಿಸಿ, ಚಿನ್ನದ ಸರ, 4 ಚಿನ್ನದ ಬಳೆಗಳ ಸಹಿತ ಒಟ್ಟು ರೂ.2.40 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ರೂ.30ಸಾವಿರ ನಗದುಹಣ ದರೋಡೆ ಮಾಡಿ ,ಬೆದರಿಕೆ ಹಾಕಿದ್ದರು.

ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ವಿಟ್ಲ ಪೆರುವಾಯಿಯ ಸುಧೀರ್ ಮಣಿಯಾಣಿ,ಕೇರಳದ ಇಚ್ಲಂಗೋಡು ಗ್ರಾಮದ ಪಚ್ಚಂಗಳದ ರವಿ, ಪೈವಳಿಕೆ ಸಮೀಪದ ಅಟ್ಟಿಗೋಳಿಯ ಕಿರಣ್, ಸೀತಾಂಗೊಳ್ಳಿ ಸಮೀಪದ ಬಾಡೂರಿನ ವಸಂತ್, ಕೇರಳದ ಫೈಝಲ್ ಮತ್ತು ಕಾಸರಗೋಡಿನ ಎಡನಾಡ್ ಗ್ರಾಮದ ರಾಜೀವ ಗಾಂಧಿ ನಗರದ ಅಬ್ದುಲ್ ಸಿಸಾರ್ ಎಂದು ಗುರುತಿಸಲಾಗಿದೆ.

 

ಇದನ್ನು ಓದಿ: Samyuktha Hegde:ಸಂಯುಕ್ತಾ-ಕಿಶನ್ ಹಾಟ್ ಫೋಟೋಸ್ ವೈರಲ್- ಫೋಟೋ ಅಮೇಲೆ, ಮೊದಲು ಚಡ್ಡಿ ಹಾಕಿ ಎಂದ ನೆಟಿಜೆನ್ಸ್

Leave A Reply

Your email address will not be published.