BJP MP ಮೇನಕಾ ಗಾಂಧಿ ವಿರುದ್ಧ ಇಸ್ಕಾನ್ ಹೂಡಿತು 100 ಕೋಟಿ ರೂ. ಮಾನನಷ್ಟ ಮೊಕದ್ದಮೆ!
national news maneka gandhi cheat remark iskcon sends rs.100 crore defamation notice
Maneka Gandhi Defamation Notice: ಇತ್ತೀಚೆಗೆ ಮೇನಕಾ ಗಾಂಧಿ ಅವರು ಹೇಳಿದ ಮಾತಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಇಸ್ಕಾನ್ ತನ್ನ ಗೋಶಾಲೆಯ ಹಸುಗಳನ್ನು ಕಟುಕರಿಗೆ ಮಾರುತ್ತದೆ ಎಂದು ಹೇಳಿರುವಂತಹ ವೀಡಿಯೋವೊಂದು ಬಹಳ ವೈರಲ್ ಆಗಿತ್ತು. ಈ ಕುರಿತಾಗಿ ISKCON (ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್) (ಇಸ್ಕಾನ್) ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರಿಗೆ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದೆ.
ಇಸ್ಕಾನ್ ವಿರುದ್ಧದ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಮೇನಕಾ ಗಾಂಧಿ ಅವರು ಮಾಡಿರುವಂತ ಆರೋಪಕ್ಕೆ ಅವರಿಗೆ ನೋಟಿಸ್ ಕಳುಹಿಸಿದ್ದೇವೆ. ಮೇನಕಾ ಅವರ ಆರೋಪದಿಂದ ಇಸ್ಕಾನ್ ಭಕ್ತರು, ಬೆಂಬಲಿಗರು ಮತ್ತು ಹಿತೈಷಿಗಳು ತೀವ್ರ ದುಃಖಿತರಾಗಿದ್ದಾರೆ. ಮೇನಕಾ ಅವರ ಆರೋಪ ದುರುದ್ದೇಶದಿಂದ ಕೂಡಿದೆ ಎಂದು ಇಸ್ಕಾನ್ ಸಂಸ್ಥೆಯ ಉಪಾಧ್ಯಕ್ಷ ರಾಧಾರಮನ್ ದಾಸ್ ಹೇಳಿದ್ದಾರೆ.
ಕೇಂದ್ರದ ಮಾಜಿ ಸಚಿವೆ ಮೇನಕಾ ಅವರು ಯೂಟ್ಯೂಬ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ಇಸ್ಕಾನ್ ಗೋಶಾಲೆಗಳನ್ನು ಸ್ಥಾಪಿಸಿದ್ದು, ಸರ್ಕಾರದಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದರು. ಅವರು ದೊಡ್ಡ ಭೂಮಿಯನ್ನು ಪಡೆಯುತ್ತಾರೆ. ಹೀಗಿದ್ದರೂ ಹಾಲು ಕೊಡದ ಹಸುಗಳನ್ನು ಕಟುಕರಿಗೆ ಒಪ್ಪಿಸುತ್ತಾರೆ. ಅವರ ದನದ ಕೊಟ್ಟಿಗೆಯಲ್ಲಿ ಒಂದೇ ಒಂದು ಕರು ಅಥವಾ ಹಾಲು ಕೊಡದ ಹಸು ಕೂಡ ಇಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದರು.
ನಾನು ಆಂಧ್ರಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್‌ನ ಗೋಶಾಲೆಗೆ ಹೋಗಿದ್ದೆ. ಅಲ್ಲಿ ನೋಡಿದಾಗ, ದನದ ಕೊಟ್ಟಿಗೆಯಲ್ಲಿ ಹಾಲು ಕೊಡದ ಒಂದು ಹಸುವೂ ಕಾಣಲಿಲ್ಲ, ಕರುವೂ ಕಾಣಲಿಲ್ಲ. ಇದರರ್ಥ ಅವರು (ಇಸ್ಕಾನ್) ಹಾಲು ನೀಡದ ಹಸುಗಳು ಮತ್ತು ಕರುಗಳನ್ನು ಮಾರಾಟ ಮಾಡುತ್ತಾರೆ ಎಂದು ಹೇಳಿರುವ ವೀಡಿಯೋವೊಂದು ಭಾರೀ ಸಂಚಲನ ಉಂಟು ಮಾಡಿತ್ತು.
ಮೇನಕಾ ಗಾಂಧಿ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಇಸ್ಕಾನ್ ವಕ್ತಾರ ಯುಧಿಷ್ಠಿರ್ ಗೋವಿಂದ್ ದಾಸ್ ಮಾತನಾಡಿ, ಆಂಧ್ರಪ್ರದೇಶದ ಅನಂತಪುರದಲ್ಲಿರುವ ಗೋಶಾಲೆಯ ಬಗ್ಗೆ ಮೇನಕಾ ಗಾಂಧಿ ಹೇಳುತ್ತಿದ್ದಾರೆ, ಹಾಲು ನೀಡದ 250 ಕ್ಕೂ ಹೆಚ್ಚು ಹಸುಗಳಿವೆ. ಅಲ್ಲಿ ನೂರಾರು ಕರುಗಳೂ ಇವೆ. ಅವರ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ.
ಇಸ್ಕಾನ್ ಗೋವುಗಳ ರಕ್ಷಣೆ ಮತ್ತು ಆರೈಕೆಯಲ್ಲಿ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮುಂಚೂಣಿಯಲ್ಲಿದೆ ಎಂದು ಯುಧಿಷ್ಠರ್ ಹೇಳಿದರು. ಇಸ್ಕಾನ್ ಸ್ಪಷ್ಟೀಕರಣ ಪತ್ರವನ್ನೂ ನೀಡಿದೆ.