Bank Strike: ಬ್ಯಾಂಕ್ ಗ್ರಾಹಕರೇ ಗಮನಿಸಿ, 13ದಿನ ಬ್ಯಾಂಕ್ ಸೇವೆಗಳಲ್ಲಿ ಇರಲಿದೆ ವ್ಯತ್ಯಯ! ಕಾರಣವೇನು ಗೊತ್ತಾ?

Bank will be closed for 13days and reasons are here

Bank Strike: ಈಗ ಮುಂಚಿನಂತೆ ಗಂಟೆಗಟ್ಟಲೆ ಬ್ಯಾಂಕ್ ನಲ್ಲಿ(Bank) ಕ್ಯೂ(Que) ನಿಂತು ಹಣ ಪಡೆಯಬೇಕಾಗಿಲ್ಲ ಆದರೂ ಕೂಡಾ ಕೆಲವೊಮ್ಮೆ ಬ್ಯಾಂಕ್ ಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದಾಗ ರಜೆಯ ಬಗ್ಗೆ ಮಾಹಿತಿ ತಿಳಿಯದೆ ಭೇಟಿ ಕೊಟ್ಟರೆ ಕಾಲಹರಣ ಆಗುವ ಜೊತೆಗೆ ಅಂದುಕೊಂಡ ಕೆಲಸ ಕೂಡ ಆಗುವುದಿಲ್ಲ. ಹೀಗಿದ್ದಾಗ ಬ್ಯಾಂಕ್ ರಜೆಯ ಬಗ್ಗೆ ತಿಳಿದಿದ್ದರೆ ಒಳ್ಳೆಯದು.

ಬ್ಯಾಂಕ್ ಸಿಬ್ಬಂದಿಗಳ ನೇಮಕಾತಿ ಕುರಿತ ಬೇಡಿಕೆ ಈಡೇರಿಕೆಗಾಗಿ(Bank Strike)ಡಿಸೆಂಬರ್, ಜನವರಿಯಲ್ಲಿ ಬ್ಯಾಂಕ್ ಸಿಬ್ಬಂದಿ ಹಂತ ಹಂತವಾಗಿ 13 ದಿನಗಳ ಕಾಲ ಮುಷ್ಕರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಉದ್ದೇಶಪೂರ್ವಕವಾಗಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಿರುವ ಹಿನ್ನೆಲೆ ಬ್ಯಾಂಕಿನ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯ ಮಾಡಿದ್ದು, ಇದರಿಂದಾಗಿ ಗ್ರಾಹಕರ ಸೇವೆಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಬ್ಯಾಂಕ್ಗಳು ಹೇಳಿಕೊಂಡಿವೆ. ನಿಯಮಿತ ಉದ್ಯೋಗಗಳನ್ನು ಹೊರಗುತ್ತಿಗೆ ನೀಡುವುದನ್ನು ಸಂಘಟನೆಗಳು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಿದೆ.ಇದರೊಂದಿಗೆ ಇನ್ನುಳಿದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಂತ ಹಂತವಾಗಿ 13ದಿನಗಳ ಕಾಲ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ ಎನ್ನಲಾಗಿದೆ.

ಹಾಗಿದ್ರೆ ಬ್ಯಾಂಕ್ ಮುಷ್ಕರ ಯಾವಾಗ??
# ಡಿಸೆಂಬರ್ 11ರಂದು ಖಾಸಗಿ ಬ್ಯಾಂಕುಗಳ ನೌಕರರು ಮುಷ್ಕರ ಮಾಡಲಿದ್ದಾರೆ.ಡಿಸೆಂಬರ್ 4ರಿಂದ ಮುಷ್ಕರ ಶುರುವಾಗಿದ್ದು, ಜನವರಿ 20ರವರೆಗೆ ವಿವಿಧ ಹಂತಗಳಲ್ಲಿ ಮುಂದುವರೆಯಲಿದೆ ಎನ್ನಲಾಗಿದೆ.
# ಡಿಸೆಂಬರ್ 4ರಂದು ಎಸ್.ಬಿ.ಐ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಉದ್ಯೋಗಿಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
# ಡಿಸೆಂಬರ್ 5 ರಂದು ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಮುಷ್ಕರ ನಡೆಸಲಿದ್ದಾರೆ.
# ಡಿಸೆಂಬರ್ 6 ರಂದು ಕೆನರಾ ಬ್ಯಾಂಕ್, ಯುಕೋ ಬ್ಯಾಂಕ್ ನೌಕರರು ಮುಷ್ಕರ ಕೈಗೊಳ್ಳಲಿದ್ದಾರೆ.
# ಡಿಸೆಂಬರ್ 7 ರಂದು ಇಂಡಿಯನ್ ಬ್ಯಾಂಕ್, ಯುಕೋ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ.
# ಡಿಸೆಂಬರ್ 8 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ನೌಕರರು ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
# ಜನವರಿ 2 ರಂದು ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಬ್ಯಾಂಕುಗಳ ನೌಕರರು ಮುಷ್ಕರ ಕೈಗೊಂಡಿದ್ದಾರೆ.
# ಜನವರಿ 19, 20 ರಂದು ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳ ಉದ್ಯೋಗಿಗಳು ವಿವಿಧ ಬೇಡಿಕೆ ಈಡೇರಿಕೆಗೆ ರಾಷ್ಟ್ರವ್ಯಾಪಿ ಮುಷ್ಕರ ಕೈಗೊಳ್ಳಲಿದ್ದಾರೆ.

 

ಇದನ್ನು ಓದಿ: Pakistan Flag: ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಾಟ! ತಂದೆ ಮಗನ ಬಂಧನ

Leave A Reply

Your email address will not be published.