Viral video: ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಆಟಗಾರರು – ಕೇಸರಿ ಶಾಲು ಹಾಕಿ ಸ್ವಾಗತ ಕೋರಿದ ಭಾರತೀಯರು !! ವಿಡಿಯೋ ವೈರಲ್

Indians welcomed the Pakistani players arrived in India with saffron shawls

Share the Article

Viral video: ಐಸಿಸಿ ವಿಶ್ವಕಪ್ (ICICI) ಶೀಘ್ರದಲ್ಲೇ ಆರಂಭವಾಗಲಿದೆ. ಇದೇ ಅಕ್ಟೋಬರ್ 5 ರಿಂದ ಭಾರತದಲ್ಲಿ ನಡೆಯಲಿರುವ ಈ ವಿಶ್ವಕಪ್‌ಗಾಗಿ ತಂಡಗಳು ದೇಶಕ್ಕೆ ಬರಲಾರಂಭಿಸಿವೆ. ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದ (Pakistan) ಕ್ರಿಕೆಟ್ ತಂಡ ಬುಧವಾರ ತಡರಾತ್ರಿ ಭಾರತವನ್ನು ತಲುಪಿದೆ. ಈ ವೇಳೆ ಅವರನ್ನು ಭಾರತೀಯರು ಕೇಸರಿ ಶಾಲು ಹಾಕಿ ಸ್ವಾಗತ ಕೋರಿದ್ದಾರೆ. ಸದ್ಯ ಇದರ ವಿಡಿಯೋ ವೈರಲ್ (Viral video) ಆಗಿದೆ.

ಹೌದು, ಪಾಕಿಸ್ತಾನ ಆಟಗಾರರು ಭಾರತಕ್ಕೆ ಬಂದಿಳಿದಿದ್ದು, ಪಾಕ್ ನಾಯಕ ಬಾಬರ್ ಅಜಂ ಮತ್ತು ಇತರ ಆಟಗಾರರನ್ನು ಭಾರತೀಯ ಶೈಲಿಯಲ್ಲಿ ಶಾಲು ಹೊದಿಸಿ ಸ್ವಾಗತಿಸಲಾಯಿತು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿ ನೆಟ್ಟಿಗರಿಂದ ವಿವಿಧ ರೀತಿಯ ಕಾಮೆಂಟ್ ಹರಿದುಬರುತ್ತಿದೆ.

7 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಂಡಿದೆ.
ಪಾಕಿಸ್ತಾನದ ಆಟಗಾರರಿಗೆ ವಿಮಾನ ನಿಲ್ದಾಣಕ್ಕೆ ಭವ್ಯ ಸ್ವಾಗತ ದೊರೆತಿದೆ. ಈ ಬಗ್ಗೆ ಬಾಬರ್ ತನ್ನ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಭಾರತದಲ್ಲಿ ತಮಗೆ ಸಿಕ್ಕಿದ ಸ್ವಾಗತಕ್ಕೆ ಮನಸೋತಿದ್ದೇನೆ’ ಸಂತೋಷ ವ್ಯಕ್ತಪಡಿಸಿದ್ದಾರೆ. ಬೌಲರ್ ಶಾಹೀನ್ ಶಾ ಆಫ್ರಿದಿ ಕೂಡ ಪೋಸ್ಟ್ ಮೂಲಕ ಹರ್ಷದ್ಗಾರ ಮಾಡಿದ್ದಾರೆ.

 

https://x.com/Aarzaai_Ishq/status/1707270917435666765?s=20

 

 

Leave A Reply