Nanu Nandini Song: ರೀಲ್ಸ್ ಪ್ರಿಯರೇ ನಿಮಗೊಂದು ಗುಡ್ ನ್ಯೂಸ್- ‘ನಾನು ನಂದಿನಿ’ ಹಾಡಿಗೆ ರೀಲ್ಸ್ ಮಾಡಿ, 1 ಲಕ್ಷದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗಿಫ್ಟ್ ಆಗಿ ಪಡೆಯಿರಿ
Trending news reels to nanu nandini song and get 1 lakh electric scooter as a gift
NANU NANDINI SONG: ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವ ವರ್ಲ್ಡ್ ಫೇಮಸ್ ನಾನು ನಂದಿನಿ..ಹಾಡು ಎಲ್ಲರ ಹಾಟ್ ಫೇವರೆಟ್ ಆಗಿಬಿಟ್ಟಿದೆ. ಬೆಂಗಳೂರಿನ ವಿಕ್ಕಿಪೀಡಿಯಾ ಎನ್ನುವ ಸಾಮಾಜಿಕ ಜಾಲತಾಣದ ಖಾತೆ ಹೊಂದಿರುವ ” ನಾನು ನಂದಿನಿ… ಬೆಂಗಳೂರಿಗೆ ಬಂದೀನಿ.. ಪಿಜಿಲಿ ಇರ್ತೀನಿ..”(Nanu Nandini song)ಎಂಬ ಹಾಡು ವೈರಲ್ ಆಗಿ ಹೊಸ ಟ್ರೆಂಡ್ ಸೃಷ್ಟಿಸಿದ್ದು ಗೊತ್ತಿರುವ ಸಂಗತಿ. ಇದೀಗ,ರೀಲ್ಸ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ ನೋಡಿ. ‘ನಾನು ನಂದಿನಿ’ ಹಾಡಿಗೆ ರೀಲ್ಸ್ ಮಾಡಿ, 1 ಲಕ್ಷದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗಿಫ್ಟ್ ಪಡೆಯಲು ಸುವರ್ಣ ಅವಕಾಶ ಇಲ್ಲಿದೆ!!
ಕನ್ನಡದ ಕೆಲವೇ ಕೆಲವು ಸೆನ್ಸಿಬಲ್ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಒಬ್ಬರಾಗಿರುವ ವಿಕಿಪೀಡಿಯಾ ಹೆಸರಿನಲ್ಲಿ ಖ್ಯಾತಿ ಗಳಿಸಿರುವ ವಿಕಾಸ್ ಮತ್ತು ತಂಡ ‘ನಾನು ನಂದಿನಿ.. ಬೆಂಗ್ಳೂರಿಗೆ ಬಂದೀನಿ’ ಹಾಡಿನ ಸೃಷ್ಟಿಕರ್ತರಾಗಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ(Bengaluru)ಐಟಿ ಉದ್ಯೋಗಿಗಳನ್ನೇ ಗುರಿ ಮಾಡಿಕೊಂಡು ಬರೆದಿರುವ ಹಾಡು ನಾನು ನಂದಿನಿ.. ವೈರಲ್ ಆಗಿ ಮಿಲಿಯನ್ ವ್ಯೂಸ್ ಪಡೆದುಕೊಂಡಿದೆ. ಅಷ್ಟೆ ಅಲ್ಲದೇ ಬೇರೆ ಸಿನಿಮಾದ ಹಾಡು ಹಾಗೂ ಮ್ಯೂಸಿಕ್ ಮೀರಿಸುವಂತೆ ಟ್ರೆಂಡ್ ಆಗುತ್ತಿದ್ದು, ರೀಲ್ಸ್‌ಗಳನ್ನು ಮಾಡಲು, ಗಣೇಶ ಹಬ್ಬದಲ್ಲಿ ಡಿಜೆ ಸಾಂಗ್ ಹಾಕಿಕೊಂಡು ಕುಣಿಯಲು, ಪಬ್‌ಗಳಲ್ಲಿ ಡಿಸ್ಕೋ ಹಾಡಾಗಿ ಕೂಡ ಈ ಹಾಡನ್ನು ಬಳಕೆ ಮಾಡಲಾಗುತ್ತಿದೆ. ಈ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಗಳಿಸಿದೆ.
ಈ ಹಾಡು ಜನಪ್ರಿಯಗೊಂಡ ಬೆನ್ನಲ್ಲೇ ಮತ್ತಷ್ಟು ಜನರನ್ನು ತಲುಪುವ ದೆಸೆಯಲ್ಲಿ ಹಾಡಿಗೆ ರೀಲ್ಸ್ ಮಾಡುವ ಟಾಪ್ 3 ಜನರಿಗೆ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಇದೀಗ ಇದೇ ಹಾಡಿನ ಅಪ್‌ಡೇಟ್ ವರ್ಷನ್ ಮೂಲಕ ಮತ್ತಷ್ಟು ಜನರನ್ನು ತಲುಪಲು ವಿಕಿಪೀಡಿಯಾ ಆಂಡ್ ಟೀಂ ಯೋಜನೆ ಹಾಕಿಕೊಂಡಿದೆಯಂತೆ. ಇದು ಕಮರ್ಷಿಯಲ್ ಜಾಹೀರಾತಾಗಿದ್ದು, ಆದರೆ ಇದರಲ್ಲಿ ಜನರಿಗೆ ಒಂದು ಲಕ್ಷ ಮೌಲ್ಯದ ಬಹುಮಾನವನ್ನು ಘೋಷಣೆ ಮಾಡಲಾಗಿದೆ. ಕ್ಟ್ರಿಕ್ ನಂದಿನಿ ಹೆಸರಲ್ಲಿ ಎಲೆಕ್ಟ್ರಿಕ್ ಬೈಕ್ ಗಳಿಗೆ ಪ್ರೋತ್ಸಾಹ ನೀಡುವ ದೆಸೆಯಲ್ಲಿ ಕಂಪನಿಯೊಂದರ ಜಾಹೀರಾತು ಮಾಡಿರುವ ವಿಕಿಪೀಡಿಯಾ ತಂಡ ಹೊಸ ವರ್ಷನ್ ಹಾಡು, ‘ನಾನು ನಂದೀನಿ ಶೋರೂಂಗೆ ಬಂದೀನಿ.. ಬೌನ್ಸ್ ಸ್ಕೂಟರ್ ತಗೋತೀನಿ, ರೆಡ್ ಕಿಕ್ ಮಾಡ್ತೀನಿ’ ಹಾಡಿಗೆ ರೀಲ್ಸ್ ಮಾಡಲು ಜನರಿಗೆ ಅವಕಾಶ ಕಲ್ಪಿಸಿದೆ.
ಈ ಹಾಡಿಗೆ ಬೆಸ್ಟ್ ರೀಲ್ಸ್ ಮಾಡಿದವರಿಗೆ ಬೊಂಬಾಟ್ ಬಹುಮಾನ ಸಿಗಲಿದ್ದು, ಇಬ್ಬರು ವಿಜೇತರಿಗೆ 1 ಲಕ್ಷ ಮೌಲ್ಯದ ಎಲೆಕ್ಟ್ರಿಕ್ ಬೈಕ್‌ಗಳನ್ನು ನೀಡುವುದಾಗಿ ಘೋಷಣೆ ಮಾಡಲಾಗಿದೆ. ಈ ಹಾಡಿಗೆ ರೀಲ್ಸ್ ನೀವೇನಾದರೂ ರೀಲ್ಸ್ ಮಾಡ್ತೀರಾ? ಹಾಗಿದ್ರೆ ಏನೆಲ್ಲ ನಿಯಮಗಳಿವೆ ಎಂದು ಯೋಚಿಸುತ್ತಿದ್ದರೆ, ವಿಶೇಷ ನಿಯಮವೇನೂ ಇಲ್ಲ!!ನಿಮ್ಮಲ್ಲಿರುವ ಯಾವುದಾದರೂ ಬೈಕ್ ಜೊತೆ ಹೊಸ ವರ್ಷನ್ ಹಾಡು, ‘ನಾನು ನಂದೀನಿ ಶೋರೂಂಗೆ ಬಂದೀನಿ.. ಬೌನ್ಸ್ ಸ್ಕೂಟರ್ ತಗೋತೀನಿ, ರೆಡ್ ಕಿಕ್ ಮಾಡ್ತೀನಿ’ ಹಾಡಿಗೆ ರೀಲ್ಸ್ ಮಾಡಬಹುದು ಎಂದು ತಂಡ ತಿಳಿಸಿದೆ. ಅಕ್ಟೋಬರ್ 3ನೇ ತಾರೀಕಿನವರೆಗೆ ಈ ಹಾಡಿಗೆ ರೀಲ್ಸ್ ಮಾಡಲು ತಂಡ ಅವಕಾಶ ಕಲ್ಪಿಸಿದೆ. ಆ ದಿನವೇ ಉತ್ತಮವಾಗಿ ರೀಲ್ಸ್ ಮಾಡಿದ ಇಬ್ಬರು ವಿಜೇತರಿಗೆ ಒಂದು ಲಕ್ಷ ಮೌಲ್ಯದ ಎಲೆಕ್ಟ್ರಿಕ್ ಬೈಕ್‌ಗಳನ್ನು ಬಹುಮಾನದ ರೀತಿಯಲ್ಲಿ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಹಾಗಿದ್ರೆ, ಮತ್ತೇಕೆ ತಡ!! ನೀವು ಕೂಡ ಈ ಹಾಡಿಗೆ ಬೆಸ್ಟ್ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ!!