Kolar: ಹೆದ್ದಾರಿಯಲ್ಲೇ 15 ಅಡಿಯ ಮುಸ್ಲಿಂ ಕತ್ತಿಯ ಬ್ಯಾನರ್, ಹಸಿರು ಬಟ್ಟೆ !! ಅಷ್ಟಕ್ಕೂ ಅಲ್ಲಿ ಉರ್ದು ಭಾಷೆಯಲ್ಲಿ ಏನು ಬರೆದಿದೆ ಗೊತ್ತೇ ?!
Installation of Muslim sword, green cloth and Urdu script banner in Kolar
Kolar: ಕೋಲಾರ(Kolar)ನಗರದ ಮದ್ಯದಲ್ಲೇ ಉರ್ದು ಭಾಷೆಯ ಬರಹಗಳನ್ನೊಳಗೊಂಡ ಸುಮಾರು 15 ಅಡಿ ಉದ್ದ 2 ಅಡಿ ಅಗಲದ ಖಡ್ಗ, ಹಸಿರು ಬಾವುಟಗಳು, ಹಸಿರು ಬಟ್ಟೆಗಳು ಮತ್ತು ಖುರಾನ್ ಶ್ಲೋಕಗಳನ್ನು ಬರೆದಿರುವ ಬಟ್ಟೆಯ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.
ಕೋಲಾರ ನಗರದ ಕ್ಲಾಕ್ ಟವರ್ ವೃತ್ತದಲ್ಲಿ ಉದ್ದವಾದ ಎರಡು ಕತ್ತಿಗಳನ್ನು ರಸ್ತೆಯ ಮೇಲುಭಾಗದಲ್ಲಿ ಎಲ್ಲರಿಗೂ ಕಾಣುವಂತೆ ಉರ್ದು ಅಕ್ಷರಗಳಲ್ಲಿ ಬರೆದಿರುವ 15 ಅಡಿ ಉದ್ದದ ದೊಡ್ಡ ಖಡ್ಗಗಳನ್ನು ಅಳವಡಿಸಲಾಗಿದೆ. ಹಿಂದೂ ಸಂಘಟನೆಗಳಿಂದ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಈ ವೃತ್ತ ನಗರಸಭೆ ವ್ಯಾಪ್ತಿಗೆ ಬರುವ ಜಾಗವಾಗಿದ್ದು, ಪೊಲೀಸರ ಭದ್ರತೆಯಲ್ಲಿ ಕತ್ತಿಗಳನ್ನು ತೆರವು ಮಾಡಲು ತೀರ್ಮಾನ ಮಾಡಲಾಗಿದೆ.
ಈದ್ ಮಿಲಾದ್ ಹಿನ್ನೆಲೆಯಲ್ಲಿ ಕ್ಲಾಕ್ ಟವರ್ ಬಳಿ ಆಚರಣೆಗೆ ಕತ್ತಿಯನ್ನು ಹಾಗೂ ಖುರಾನ್ ಶ್ಲೋಕಗಳುಳ್ಳ ಬ್ಯಾನರ್‌ಗಳನ್ನು ಅಳವಡಿಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಇನ್ನು ಇದೇ ವೃತ್ತದ ಬಳಿ ಬಟ್ಟೆಯ ಬ್ಯಾನರ್‌ಗಳನ್ನು ಅಳವಡಿಕೆ ಮಾಡಿದ್ದು, ಅದರಲ್ಲಿ ಮುಸ್ಲಿಂ ಶ್ಲೋಕಗಳನ್ನು ಬರೆಯಲಾಗಿದೆ. ಕೋಲಾರ ಜಿಲ್ಲಾ ಪೊಲೀಸರಿಂದ ಯಾವುದೇ ಅನುಮತಿ ಪಡೆಯದೇ ಖಡ್ಗಗಳನ್ನು ಅಳವಡಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ರೀತಿ ಖಡ್ಗಗಳನ್ನು ಅಳವಡಿಸಿರುವ ಹಿನ್ನೆಲೆ ಹಿಂದೂ – ಮುಸ್ಲಿಂ ಬಣಗಳ ನಡುವೆ ನಡುವೆ ಘರ್ಷಣೆಗೆ ಕಾರಣವಾಗಬಹುದು ಎಂಬ ಹಿನ್ನೆಲೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ತೆರವುಗೊಳಿಸಲು ತೀರ್ಮಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: Blaupunkt 55 TV: ಊಹಿಸದಷ್ಟೂ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ 55 ಇಂಚಿನ ಸ್ಮಾರ್ಟ್ ಟಿವಿ – ಕೊಳ್ಳಲು ಮುಗಿಬಿದ್ದ ಜನ