Kukke shri Subrahmanya Temple: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಭಕ್ತಾದಿಗಳಿಗೆ ಮಹತ್ವದ ಸೂಚನೆ
Dakshina Kannada news Important Notice to Devotees from Kukke shri Subrahmanya Temple
Kukke shri Subrahmanya Temple : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಇದರ ವತಿಯಿಂದ ಭಕ್ತಾದಿಗಳಿಗೆ ಮಹತ್ವದ ಸೂಚನೆಯೊಂದು ನೀಡಲಾಗಿದೆ.
ಕಳೆದ ಅನೇಕ ದಿನಗಳಿಂದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ(Kukke shri Subrahmanya Temple) ಸೇವೆಯ ವಿಚಾರವಾಗಿ ಸಾಮಾಜಿಲ ಜಾಲತಾಣ,ವೆಬ್ ನ್ಯೂಸ್ ನಲ್ಲಿ ಸುದ್ದಿಗಳು ಬರುತ್ತಿದ್ದು,ಈ ಹಿನ್ನೆಲೆಯಲ್ಲಿ ಕೋಟ್ಯಾಂತರ ಭಕ್ತರ ಶ್ರದ್ಧೆ,ಭಾವನೆ ದೃಷ್ಟಿಯಿಂದ ಸ್ಪಷ್ಟನೆ ನೀಡಲಾಗಿದೆ.
ದೇವಾಲಯಕ್ಕೆ ಸಂಬಂದ ಪಟ್ಟ ಯಾವುದೇ ಮಠ ಮಾನ್ಯತೆಗಳಿರುವುದಿಲ್ಲ.ದೇವಸ್ಥಾನ ಸಂಪೂರ್ಣವಾಗಿ ರಾಜ್ಯ ಸರಕಾರದ ಮುಜರಾಯಿ ಇಲಾಖೆಯ ಆಡಳಿತಕೊಳಪಟ್ಟ ದೇವಾಲಯವಾಗಿದೆ.
ದೇವಾಲಯಕ್ಕೆ ಸಂಬಂದ ಪಟ್ಟ ಹಿಂದಿನಿಂದಲೂ ಪರಂಪರಾಗತವಾಗಿ ನಡೆಸುವ ಪೂಜೆಗಳು ಕೆಲವು ಸಮಯದಿಂದ ಖಾಸಗಿ ಸ್ಥಳಗಳಲ್ಲಿ ನಡೆಯುತ್ತಿದ್ದು ಇದರ ಬಗ್ಗೆ ಯಾರು ಮೋಸಹೋಗಬಾರದೆಂದು ದೇವಾಲಯದ ಅಂಗಣದಲ್ಲಿ ಮತ್ತು ಅಲ್ಲಲ್ಲಿ ಬರುವ ಭಕ್ತಾದಿಗಳಿಗೆ ಕಾಣುವಂತೆ ಬೋರ್ಡ್ ಗಳನ್ನು ಅಳವಡಿಸಲಾಗಿದೆ ಮತ್ತು ದೇವಾಲಯದ ಪೂಜೆಗಳನ್ನು ನೊಂದಾಯಿಸಲು ಯಾವುದೇ ಖಾಸಗಿ ವೆಬ್ ಸೈಟ್ ಗಳಲ್ಲಿ ಅವಕಾಶಗಳಿಲ್ಲ.
ಸರಕಾರದ http://temples.karnataka.gov.in ನಲ್ಲಿ ಮಾತ್ರ ಸಾಧ್ಯವಿರುತ್ತದೆ ಇದಲ್ಲದೆ ದೇವಾಲಯಕ್ಕೆ ಬೇರೆ ಯಾವುದೇ ವೆಬ್ಸೈಟ್ ಗಳು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Murder Case: ಕುಡಿದು ಮೂತ್ರ ಸಿಡಿಸಿದ ಆಸಾಮಿ- ಪ್ರಶ್ನಿಸಿದಕ್ಕೆ ನಡೆದೇ ಹೋಯ್ತು ಮಾರಾಮಾರಿ, ಬಿದ್ದೆ ಬಿಡ್ತು ಹೆಣ !!