Remove Damp in Wall: ಪಾಚಿಕಟ್ಟಿ ಗೋಡೆಗಳ ಅಂದ ಕೆಟ್ಟಿದೆಯೇ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ
Latest news Here are some tips remove damp stains in Wall
Remove Damp in Wall: ಮಳೆಗಾಲದಲ್ಲಿ ಹೊರಗೆ ನಿಂತ ನೀರು, ಹುಳು ಹುಪ್ಪಟೆಗಳ ಕಾಟದ ಜೊತೆಗೆ ಗೋಡೆ ಅಂಚು, ಸಂಧಿಗಳಲ್ಲಿ ನಮಗೆ ತಿಳಿಯದಂತೆ ನೀರು ಸೋರುತ್ತದೆ ಇದರಿಂದ ಎಲ್ಲೆಂದರಲ್ಲಿ ನೆಲ, ಮೆಟ್ಟಿಲು, ಗೋಡೆಗಳ ಮೇಲೆ ಪಾಚಿ ಕಟ್ಟಿ ಇದರಿಂದ ಮನೆಯ ಗೋಡೆಗಳ ಅಂದ ಕೆಡುತ್ತದೆ. ಬಹಳ ಮನೆಯಲ್ಲಿ ಈ ಸಮಸ್ಯೆ ಇರಬಹುದು. ಕೆಲವೊಮ್ಮೆ ಇದು ಪಾಚಿ ಕಟ್ಟಿದಂತೆ ಅಸಹ್ಯವಾಗಿ ಕಾಣಿಸಬಹುದು. ಹಾಗಾದರೆ ತೇವದಿಂದ ಉಂಟಾದ ಕಲೆಗಳನ್ನು ತೆಗೆದುಹಾಕಲು (Remove Damp in Wall) ಏನು ಮಾಡಬಹುದು? ಇಲ್ಲಿದೆ ಕೆಲವು ಟಿಪ್ಸ್.
ಮುಖ್ಯವಾಗಿ ಗೋಡೆಗಳ ಮೇಲೆ ತೇವಾಂಶ ಹೆಚ್ಚಾದ ಕಾರಣದಿಂದ ಕಲೆಗಳು ಕಾಣಿಸಿಕೊಳ್ಳುತ್ತವೆ. ತಜ್ಞರ ಪ್ರಕಾರ ಇದಕ್ಕೆ ಮುಖ್ಯ ಕಾರಣವೆಂದರೆ ಗೋಡೆಯ ರಾಸಾಯನಿಕ ಸಂಯೋಜನೆ ಎನ್ನುತ್ತಾರೆ.
ಇನ್ನು ಮನೆ ಕಟ್ಟುವಾಗ ಸೋಡಿಯಂ ಸಲ್ಫೇಟ್, ಕ್ಯಾಲ್ಸಿಯಂ ಕಾರ್ಬೋನೇಟ್, ಮೆಗ್ನೀಷಿಯಂ ಸಲ್ಫೇಟ್, ಕ್ಲೋರೈಡ್, ನೈಟ್ರೇಟ್ ಇತ್ಯಾದಿಗಳನ್ನು ಅತಿಯಾಗಿ ಬಳಸಿದರೆ ಗೋಡೆಗಳಿಗೆ ಬಿಳಿ ಲೇಪನ ಬರುತ್ತದೆ. ಅಲ್ಲದೆ, ಕೋಣೆಯೊಳಗೆ ಗಾಳಿಯಾಡದೇ ಇದ್ದರೆ, ತೇವದ ಕಾರಣದಿಂದ ಕಲೆಯಾಗುತ್ತದೆ.
ಆದ್ದರಿಂದ ಮನೆಗೆ ಬಣ್ಣ ಬಳಿಯುವಾಗ ಜಾಗರೂಕರಾಗಿರಿ. ಅಕ್ರಿಲಿಕ್ ಎಮಲ್ಷನ್ ಜೊತೆಗೆ ಪ್ಲಾಸ್ಟಿಕ್ ಪೇಂಟ್ ಬಳಸಿ. ಇದು ತೇವಾಂಶದ ಸಮಸ್ಯೆಯನ್ನು ನಿವಾರಿಸುತ್ತದೆ. ಆದಾಗ್ಯೂ, ಎರಡು ಮೂರು ವರ್ಷಗಳಿಗೊಮ್ಮೆ ಗೋಡೆಗೆ ಪೇಂಟ್ ಮಾಡುವುದು ಅವಶ್ಯ.
ತೇವಾಂಶ ಹೆಚ್ಚಿರುವ ಕಾರಣದಿಂದ ಗೋಡೆಯ ಮೇಲೆ ಕಲೆಗಳು ಉಂಟಾದರೆ, ಮೊದಲು ಕೊಠಡಿಯಲ್ಲಿ ಗಾಳಿಯಾಡುವಂತೆ ಮಾಡಬೇಕು. ಕಿಟಕಿ, ಬಾಗಿಲುಗಳು ತೆರೆದಿರುವುದು ಬಹಳ ಮುಖ್ಯ. ಮನೆಯೊಳಗಡೆ ಸಾಕಷ್ಟು ಗಾಳಿಯಾಡುವ ವ್ಯವಸ್ಥೆ ಮಾಡಬೇಕು.
ಇನ್ನು ಪಾಚಿ ನಿವಾರಣೆಗೆ, ಸುಣ್ಣದ ಚಿಪ್ಪನ್ನು ಒಂದು ಕಬ್ಬಿಣದ ಬಕೆಟ್‌ನಲ್ಲಿ ಸುರಿಯಿರಿ. ( ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಕೆಟ್ ಬೇಡ) ನಂತರ ಅದರ ಎರಡರಷ್ಟು ನೀರನ್ನು ಸುರಿಯಿರಿ. ಸುಣ್ಣದ ಚಿಪ್ಪು, ನೀರಿನೊಂದಿಗೆ ಬೆರೆತ ನಂತರ ಕುದಿಯಲು ಆರಂಭಿಸುತ್ತದೆ. ಈ ವೇಳೆ ಬಕೆಟ್ ಬಳಿ ಹೋಗದೆ ದೂರ ನಿಲ್ಲಿ. ಸುಣ್ಣದ ನೀರು ಕುದಿಯುವುದನ್ನು ನಿಲ್ಲಿಸಿದ ನಂತರ, ಚಪ್ಪಲಿ ಹಾಗೂ ಕೈಗಳಿಗೆ ಗ್ಲೌಸ್ ಧರಿಸಿ, ಒಂದು ದೊಡ್ಡ ಕೋಲಿನ ಸಹಾಯದಿಂದ ತಳದಲ್ಲಿ ನಿಂತಿರುವ ಸುಣ್ಣದ ಗಟ್ಟಿಯನ್ನು ನಿಧಾನವಾಗಿ ತಿರುವಿ. ನಂತರ ಪಾಚಿ ಇರುವ ಜಾಗದಲ್ಲಿ ಬಕೆಟ್‌ನಿಂದಲೇ ( ಕೈ ಹಾಕಬೇಡಿ) ಚೆಲ್ಲಿ, ನಂತರ ಒಂದು ಕಡ್ಡಿ ಪೊರಕೆ ಸಹಾಯದಿಂದ ಸುತ್ತಲೂ ಹರಡಿ. ಸುಣ್ಣದ ನೀರು ಹಾಕಿದ ನಂತರ ಆ ಸ್ಥಳಕ್ಕೆ ಹೋಗಬೇಡಿ, ಮತ್ತೆ ಮಳೆ ಬಂದಾಗ ಅದು ಪಾಚಿ ಸಹಿತ ಹರಿದುಹೋಗುತ್ತದೆ. ಮಳೆ ಬರದಿದ್ದರೆ ಒಂದು ದಿನದ ನಂತರ ನೀವೇ ಪೊರಕೆ ಸಹಾಯದಿಂದ ತೊಳೆದರೆ, ಸುಲಭವಾಗಿ ಪಾಚಿ ಬಿಡುತ್ತದೆ.
ಪ್ರೆಷರ್ ವಾಶರ್‌ನಿಂದ ಕೂಡಾ ನೀವು ನೆಲದ ಪಾಚಿಯನ್ನು ಸುಲಭವಾಗಿ ತೆಗೆಯಬಹುದು. ಮಾರುಕಟ್ಟೆಯಲ್ಲಿ ಪ್ರೆಷರ್ ವಾಶರ್ ದೊರೆಯುತ್ತದೆ.
ಇನ್ನು ಸ್ವಲ್ಪ ಪ್ರಮಾಣದಲ್ಲಿ ಪಾಚಿ ಇದ್ದರೆ ಸುಣ್ಣದ ನೀರು ಅಥವಾ ಪ್ರೆಷರ್ ವಾಶರ್ ಬದಲಿಗೆ ನೀವು ವಿನೆಗರ್ ಹಾಗೂ ಬೇಕಿಂಗ್ ಸೋಡಾ ಬಳಸಿ ಸುಲಭವಾಗಿ ಪಾಚಿಯನ್ನು ತೆಗೆಯಬಹುದು. ಪಾಚಿ ಕಟ್ಟಿದ ಜಾಗಕ್ಕೆ ವಿನೆಗರ್ ಹಾಕಿ, ಅದರ ಮೇಲೆ ಬೇಕಿಂಗ್ ಸೋಡಾ, ಪುಡಿ ಉಪ್ಪು ನಂತರ ನಿಂಬೆರಸ ಹಾಕಿ ಒಂದು ವೈಪರ್ ಅಥವಾ ಬೇರೆ ವಸ್ತುವಿನ ಸಹಾಯದಿಂದ ಸುತ್ತಲೂ ಹರಡಿ, 20 ನಿಮಿಷ ಬಿಡಿ. ನಂತರ ಬಿಸಿ ನೀರನ್ನು ಚಿಮುಕಿಸಿ ಬ್ರಷ್ ಸಹಾಯದಿಂದ ಉಜ್ಜಿ ಪಾಚಿಯನ್ನು ಕ್ಲೀನ್ ಮಾಡಿ.
ಅಥವಾ ಮರದ ವಸ್ತುಗಳನ್ನು ಇರಿಸಿ. ಯಾಕೆಂದರೆ ಮರದ ವಸ್ತುಗಳು ಹೆಚ್ಚುವರಿ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತವೆ. ಪರಿಣಾಮವಾಗಿ, ಗೋಡೆಗಳ ಮೇಲೆ ತೇವದ ಕಲೆ ಉಳಿಯುವುದಿಲ್ಲ.
ಇದನ್ನು ಓದಿ: Uttar Pradesh:ಜನರು ಕುಳಿತಿದ್ದ ಪ್ಲಾಟ್ ಫಾರ್ಮ್ ಗೆ ಏಕಾಏಕಿ ನುಗ್ಗಿದ ರೈಲು!! ನಂತರ ಆದದ್ದೇನು ?