RBI ನಿಂದ ಈ ಬ್ಯಾಂಕ್‌ಗಳು ಕ್ಲೋಸ್‌! ನಿಮ್ಮ ಅಕೌಂಟ್ ಇದೆಯಾ ಚೆಕ್‌ ಮಾಡಿ, ಗ್ರಾಹಕರಿಗೆ ದೊರಕಲಿದೆ 5 ಲಕ್ಷ ರೂ.!!!

Bank news list of RBI cancelled license of these bank in 2023

RBI: ಭಾರತೀಯ ರಿಸರ್ವ್‌ ಬ್ಯಾಂಕ್‌ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ವರದಿಯ ಪ್ರಕಾರ, ಆರ್‌ಬಿಐ ಮತ್ತೊಂದು ಬ್ಯಾಂಕ್‌ನ ಪರವಾನಗಿಯನ್ನು ರದ್ದುಗೊಳಿಸಿದೆ. ಹಾಗಾಗಿ ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಸಮಸ್ಯೆ ಎದುರಾಗಲಿದೆ. ʼದಿ ಕಪೋಲ್‌ ಕೋ-ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ʼ ಪರವಾವನಗಿಯನ್ನು ರದ್ದುಗೊಳಿಸಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಹೇಳಿರುವ ಪ್ರಕಾರ, ಬ್ಯಾಂಕ್‌ ನ ಬಳಿ ಯಾವುದೇ ರೀತಿಯ ಬಂಡವಾಳ ಇಲ್ಲ. ಇನ್ನು ಗಳಿಕೆ ಯಾವುದೇ ರೀತಿಯಿಂದ ಸಾಧ್ಯವಿಲ್ಲ ಎಂದು ಹೇಳಿದೆ. ಆರ್‌ಬಿಐ ಬ್ಯಾಂಕ್‌ ಹಾಗಾಗಿ ಈ ಬ್ಯಾಂಕ್‌ನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿದೆ.

ಪರವಾನಗಿ ರದ್ಧತಿಯೊಂದಿಗೆ ಸಹಕಾರಿ ಬ್ಯಾಂಕ್‌ ನ್ನು ತಕ್ಷಣವೇ ಬ್ಯಾಂಕಿಂಗ್‌ ವ್ಯವಹಾರ ನಿಷೇಧ ಮಾಡಲಾಗಿದೆ, ಹಾಗಾಗಿ ಇನ್ನು ಮುಂದೆ ಈ ಬ್ಯಾಂಕ್‌ನಲ್ಲಿ ಠೇವಣಿಗಳನ್ನು ಇಡುವುದು ಹಾಗೂ ಹಿಂಪಡೆಯುವುದು ಸಾಧ್ಯವಾಗುವುದಿಲ್ಲ. ಬ್ಯಾಂಕ್‌ಗೆ ಲಿಕ್ವಿಡೇಟರ್‌ ನೇಮಿಸಲು ಆದೇಶ ನೀಡಲಾಗಿದೆ.

DICGC ನಿಂದ 5 ಲಕ್ಷ ರೂ.ವರೆಗಿನ ಠೇವಣಿ ವಿಮಾ ಕ್ಲೈಮ್‌ ಮೊತ್ತವನ್ನು ಪಡೆಯಲು ಠೇವಣಿದಾರರು ಅರ್ಹರಾಗಿರುತ್ತಾರೆ ಎಂದು ರಿಸರ್ವ್‌ ಬ್ಯಾಂಕ್‌ ಹೇಳಿದೆ.

ಇದು ಮಾತ್ರವಲ್ಲದೇ, ಅಹಮದಾಬಾದ್‌ ಮೂಲದ ಕಲರ್‌ ಮರ್ಚೆಂಟ್ಸ್‌ ಕೋ ಅಪರೇಟಿವ್‌ ಬ್ಯಾಂಕ್‌ನ ಹದಗೆಡುತ್ತಿರುವ ಆರ್ಥಿಕ ಸ್ಥಿತಿಯನ್ನು ಗಮನದ್ದಲಿಟ್ಟು ಆರ್‌ಬಿಐ ಹಲವು ನಿರ್ಬಂಧಗಳನ್ನು ವಿಧಿಸಿದೆ. ಇಲ್ಲಿ ಗ್ರಾಹಕರು ತಮ್ಮ ಖಾತೆಯಿಂದ ಕೇವಲ 50,000 ರೂ. ತೆಗೆಯಲು ಅನುಮತಿ ನೀಡಿದೆ. ಬ್ಯಾಂಕಿಂಗ್‌ ವ್ಯವಹಾರ ಸೆ.25 ರಂದು ಬ್ಯಾಂಕಿಂಗ್‌ ವ್ಯವಹಾರ ಮುಚ್ಚುವುದರೊಂದಿಗೆ ನಿರ್ಬಂಧ ಜಾರಿಗೆ ಬಂದಿವೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಈ ನಿರ್ಬಂಧ ಆರು ತಿಂಗಳವರೆಗೆ ಜಾರಿಯಲ್ಲಿರುತ್ತವೆ.

ಹಾಗೆನೇ ಈ ಬ್ಯಾಂಕ್‌ ಅನುಮತಿ ಇಲ್ಲದೆ ಸಾಲ ನೀಡುವಂತಿಲ್ಲ. ಹಳೆಯ ಸಾಲ ನವೀಕರಿಸುವಂತಿಲ್ಲ, ಹೂಡಿಕೆ ಮಾಡದಂತೆ, ಹೊಸ ಠೇವಣಿ ಸ್ವೀಕರಿಸುವುದನ್ನು ನಿರ್ಭಂಧಿಸಿ ಕೇಂದ್ರ ಬ್ಯಾಂಕ್‌ ಆದೇಶ ಹೊರಡಿಸಿದೆ. ಹಾಗೆನೇ ಠೇವಣಿದಾರರು ಒಟ್ಟು ಠೇವಣಿಗಳಿಂದ 50,000 ರೂ. ಗಿಂತ ಹೆಚ್ಚಿನ ಹಣ ಹಿಂಪಡೆಯಲು ಅನುಮತಿ ಇಲ್ಲ ಎಂದು ಕೂಡಾ ಆರ್‌ಬಿಐ ಹೇಳಿದೆ.

ಇದನ್ನೂ ಓದಿ: ಪೊಲೀಸ್‌ ಯೂನಿಫಾರ್ಮ್‌ ತೊಟ್ಟವರ ಮೇಲೆ ದಾಳಿ ಮಾಡುವಂತೆ ನಾಯಿಗಳಿಗೆ ಸಖತ್‌ ಟ್ರೇನಿಂಗ್;‌ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಕುತಂತ್ರ ಬುದ್ಧಿಗೆ ಖಾಕಿ ಬೇಸ್ತು!!!

Leave A Reply

Your email address will not be published.