Gruhalakshmi scheme: ಈ ಯಜಮಾನಿಯರಿಗೆ ಗೃಹಲಕ್ಷ್ಮಿಯ 2ನೇ ಕಂತಿನ ಹಣ ಸಿಗುವುದಿಲ್ಲ – ಸರ್ಕಾರದಿಂದ ಹೊಸ ನಿರ್ಧಾರ
Gruhalakshmi scheme : ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ(Gruhalakshmi scheme) ಚಾಲನೆ ದೊರೆತು ಹೆಚ್ಚಿನ ಮಹಿಳೆಯರ ಖಾತೆಗೆ ಹಣ ಜಮೆಯಾಗಿದೆ. ಆದರೆ ಇನ್ನೂ ಕೆಲವರ ಖಾತೆಗೆ ಹಣ ಬಂದಿಲ್ಲ. ಹೀಗಾಗಿ ಹಣ ಬರದ ಮಹಿಳೆಯರು ಆತಂಕದಲ್ಲಿದ್ದಾರೆ. ಈ ಬೆನ್ನಲ್ಲೇ ಇನ್ನೂ ಹಲವು ಯಜಮಾನಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಗೃಹಲಕ್ಷ್ಮೀಯ ಎರಡನೇ ಕಂತಿನ ಹಣ ಕೂಡ ಅವರಿಗೆ ಬರುವುದಿಲ್ಲ ಎನ್ನಲಾಗಿದೆ.
ಹೌದು, ಕಾಂಗ್ರೆಸ್ ಗ್ಯಾರಂಟಿ(Congress government) ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಗೆ ಆಗಸ್ಟ್ 30 ರಂದು ಅದ್ಧೂರಿಯಾದ ಚಾಲನೆ ಸಿಕ್ಕಿತ್ತು. ಗಣ್ಯರ ಸಮ್ಮುಖದಲ್ಲಿ ಈ ಒಂದು ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಉತ್ತಮ ಸ್ಪಂದನೆ ಸಿಕ್ಕಿತ್ತು. ಈಗಾಗಲೇ ಒಂದು ಕಂತನ್ನು ಪಡೆದಿರುವ ರಾಜ್ಯದ ಬಹುತೇಕ ಮನೆ ಯಜಮಾನಿಯರು ಎರಡನೇ ಕಂತಿನ ಬಗ್ಗೆ ಯೋಚಿಸುತ್ತಿದ್ದಾರೆ. ತಮ್ಮ ಮೊಬೈಲ್ ಗಳನ್ನು ಹಿಡಿದು ಹಣ ಕ್ರೆಡಿಟ್ ಆಗುವ ಮೆಸೇಜ್ ಗಾಗಿ ಕಾಯುತ್ತಿದ್ದಾರೆ. ಇನ್ನು ಕೆಲವರು, ತಾಂತ್ರಿಕ ದೋಷದಿಂದ, ಸರ್ವರ್ ಸಮಸ್ಯೆಗಳಿಂದ, ಕೆವೈಸಿ ಆಗದಿರುವ ಕಾರಣಗಳಿಂದಾಗಿ ಗೃಹಲಕ್ಷ್ಮೀಯ ಮೊದಲ ಕಂತಿನ ಹಣದಿಂದಲೇ ವಂಚಿತರಾಗಿದ್ದಾರೆ. ಎಲ್ಲರಿಗೂ ಸಿಗುತ್ತಿದ್ದು ನಮಗ್ಯಾಕೆ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೀಗ ಮತ್ತೆ ಅಂತವರಿಗೆ ಬಿಗ್ ಶಾಕ್ ಎದುರಾಗಿದ್ದು 2ನೇ ಕಂತಿನ ಹಣವೂ ಅವರಿಗೆ ಬರುವುದಿಲ್ಲ !! ಯಾಕೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಅರ್ಜಿ ತಿರಸ್ಕೃತ:
ಗೃಹಲಕ್ಷ್ಮೀ ಯೋಜನೆಗೆ APL ಕಾರ್ಡು (APL Card) ದಾರರು ಬಹುತೇಕರು ಅರ್ಜಿ ಹಾಕಿದ್ದು ಅಂತವರ ಸಾಲಿನ ಪರಿಶೀಲನೆ ಆಗಿ ಅರ್ಜಿ ತಿರಸ್ಕೃತ ಆಗಿದೆ. ಕಳೆದ 14ದಿನದಲ್ಲಿ 53ಸಾವಿರ ಅರ್ಜಿ ಸಲ್ಲಿಕೆ ಮಾಡಲಾಗಿದ್ದು ಈ ಹಿಂದೆ 1.18ಲಕ್ಷ ಜನರ ರೇಶನ್ ತಿದ್ದುಪಡಿ ಬಾಕಿ ಇದೆ. ಒಟ್ಟಯ 3ಲಕ್ಷಕ್ಕೂ ಅಧಿಕ ಬಾಕಿ ಇದ್ದು ತಿದ್ದು ಪಡಿ ಮಾಡಿ 1.17ಲಕ್ಷ ರೇಶನ್ ಕಾರ್ಡ್ ತಿದ್ದು ಪಡಿಗೆ ಆಹಾರ ಇಲಾಖೆ ಸಮ್ಮತಿ ಸೂಚಿಸಿದ್ದಾರೆ. ರೇಶನ್ ಬದಲಾಯಿಸಿದ್ದವರು ಹಾಗೂ ಬದಲಾಯಿಸಲು ಅರ್ಜಿ ಸಲ್ಲಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ರೇಶನ್ ಕಾರ್ಡ್ ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ. ಒಟ್ಟಾರೆಯಾಗಿ ಅರ್ಜಿ ಹಾಕಿದ್ದ1.13ಕೋಟಿ ಮಹಿಳೆಯರಲ್ಲಿ 82ಲಕ್ಷ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆ ಆಗಿದೆ ಇನ್ನುಳಿದವರಿಗೆ ಆಗಿಲ್ಲ ಎಂಬುದು ತಿಳಿದಿದೆ. ಹಾಗಾಗಿ ಅನರ್ಹರಿಗೆ ಈ ಗೃಹಲಕ್ಷ್ಮೀ ಭಾಗ್ಯ ಸಿಗೊಲ್ಲ ಎಂಬುದು ಪಕ್ಕಾ ಆಗಿದೆ.
ಕೆಲವರಿಗೆ 4 ಸಾವಿರ ಒಟ್ಟಿಗೆ ಕೈ ಸೇರಲಿದೆ:
ಗೃಹಲಕ್ಷ್ಮೀ ಹಣ (Gruha Lakshmi Money) ಬರಲು ರೇಶನ್ ಕಾರ್ಡ್ (Ration Card) ಮನೆಯ ಮಹಿಳೆ ಹೆಸರಲ್ಲಿ ಇರಬೇಕು ಎಂಬ ನಿಯಮ ಇದೆ ಎಂಬ ಕಾರಣಕ್ಕೆ ಗಂಡನ , ಮಾವನ, ಅಪ್ಪನ ಹೆಸರಿಗೆ ಯಜಮಾನರ ಬದಲು ಮಹಿಳೆ ಯಜಮಾನಿಯಾಗಿ ಸ್ಥಾನ ಪಡೆಯಲು ತಿದ್ದುಪಡಿ ವಿಧಾನಕ್ಕೆ ಅರ್ಜಿ ಹಾಕಲಾಗಿದೆ. ಆದರೆ ಈ ತಿದ್ದು ಪಡಿ ವಿಧಾನ ಬಾಕಿ ಇದ್ದ ಕಾರಣ ಗೃಹಲಕ್ಷ್ಮೀ ಹಣ (Gruha Lakshmi Money) ಫಲಾನುಭವಿಗಳ ಕೈ ಸೇರಿಲ್ಲ ಇನ್ನು ಕೆಲವರ ಬ್ಯಾಂಕ್ ಖಾತೆ (Bank Account) ಕೂಡ ಸರಿ ಇಲ್ಲ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಎರಡು ಪ್ರಕ್ರಿಯೇ ಶೀಘ್ರ ಆದವರಿಗೆ ಮರು ಕಂತಿನಲ್ಲಿ ಒಟ್ಟಿಗೆ ಎರಡು ಕಂತಿನ ಹಣ ಎಂದರೆ 4 ಸಾವಿರ ಮೊತ್ತ ಫಲಾನುಭವಿಗಳ ಕೈ ಸೇರಲಿದೆ.
ಅಂದಹಾಗೆ ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆ ಅಬಲೆಯಲ್ಲ, ಸಬಲೆ ಎನ್ನುವಂತಾಗಿದ್ದು, ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಯೋಜನೆ ತರಲಾಗಿದೆ. ಮಹಿಳೆಯರು ಪರಾವಲಂಬಿಗಳಾಗಬಾರದು, ಯಾರ ಬಳಿಯೂ ಕೈಚಾಚಿ ನಿಲ್ಲುವಂತಾಗಬಾರದು ಎನ್ನುವ ಉದ್ದೇಶದಿಂದ ವಾರ್ಷಿಕ 30 ಸಾವಿರ ಕೋಟಿ ವ್ಯಯವಾಗುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ತರಲಾಗಿದೆ.