Assault on dalit lady: ಕೇವಲ 1500 ಬಡ್ಡಿ ಬಾಕಿ- ದಲಿತ ಮಹಿಳೆಯನ್ನು ಬೆತ್ತಲೆ ಮಾಡಿ, ಹಲ್ಲೆ ನಡೆಸಿ ಮೂತ್ರ ಕುಡಿಸಿದ ಪಾಪಿ

Assault on dalit lady: ಬಿಹಾರದ ರಾಜಧಾನಿ ಪಾಟ್ನಾದ ಖುಸ್ರುಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೊಸಿಂಪುರ್ ಗ್ರಾಮದಲ್ಲಿ 1500 ರೂಪಾಯಿ ಸಾಲದ ಬಡ್ಡಿಯನ್ನು ನೀಡದ ಹಿನ್ನೆಲೆ ದಲಿತ ಮಹಿಳೆಯ (Assault on dalit lady) ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಮೂತ್ರ ಕುಡಿಸಿದ ಹೇಯ ಕೃತ್ಯ (Shocking News) ವರದಿಯಾಗಿದೆ.

 

ಸಂತ್ರಸ್ತ ಮಹಿಳೆ ತನ್ನ ಪರಿಚಯಸ್ಥರೊಬ್ಬರಿಗೆ 5-6 ವರ್ಷಗಳ ಹಿಂದೆ ಪ್ರಮೋದ್ ಕುಮಾರ್ ಸಿಂಗ್ ಎಂಬುವವರಿಂದ 6000 ರೂಪಾಯಿಗಳನ್ನು ಸಾಲವಾಗಿ(Loan)ಪಡೆದುಕೊಂಡಿದ್ದಾಳೆ. ಕಳೆದ ವರ್ಷ ಅದನ್ನು ಕಳೆದ ವರ್ಷ ಮರುಪಾವತಿ ಕೂಡ ಮಾಡಿದ್ದಾಳೆ. ಎರಡು ವರ್ಷದ ಹಿಂದೆ ದಲಿತ ಮಹಿಳೆಯ ಗಂಡ 1500 ರೂಪಾಯಿ ಸಾಲವನ್ನು ಪಡೆದುಕೊಂಡಿದ್ದು, ಆ ಹಣವನ್ನು ಕೂಡ ಕೆಲ ದಿನಗಳಲ್ಲೇ ವಾಪಸ್ ನೀಡಲಾಗಿದೆಯಂತೆ. ಆದರೆ ಆದಾಗ್ಯೂ, ಪ್ರಮೋದ್ ಸಿಂಗ್ ಹೆಚ್ಚುವರಿ ಬಡ್ಡಿ ಹಣ ನೀಡುವಂತೆ ನಿರಂತರವಾಗಿ ಬೇಡಿಕೆ ಇಡುತ್ತಿದ್ದನಂತೆ.

Image source Credit: India Today

 

ಬೇಡಿಕೆಯಿಟ್ಟ ಹೆಚ್ಚುವರಿ ಬಡ್ಡಿ ಹಣವನ್ನು ನೀಡಿಲ್ಲ ಎಂಬ ಕಾರಣಕ್ಕೆ ಶನಿವಾರ ತಡರಾತ್ರಿ ಪ್ರಮೋದ್ ಕುಮಾರ್ ಸಿಂಗ್ ಮತ್ತು ಆತನ ಬೆಂಬಲಿಗರು ಮಹಿಳೆಯ ಮನೆಗೆ ಬಂದು ಬಲವಂತವಾಗಿ ಎತ್ತಿಕೊಂಡು ಹೋಗಿ ಆತನ ಮನೆಗೆ ಕರೆದೊಯ್ದು ತೀವ್ರವಾಗಿ ಥಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಭೂಪರು ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ದಲಿತ ಮಹಿಳೆಗೆ ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾರೆ. ಸದ್ಯ ಗಾಯಾಳು ಮಹಿಳೆ ಖುಸ್ರುಪುರ ಪಿಎಚ್‌ಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಪ್ರಕರಣದ ಕುರಿತು, ಗ್ರಾಮದ ಪ್ರಮೋದ್ ಕುಮಾರ್ ಸಿಂಗ್, ಆತನ ಪುತ್ರ ಪಿಯೂಷ್ ಕುಮಾರ್ ಸಮಯ್ ಮತ್ತು ಇತರ ಮೂರ್ನಾಲ್ಕು ಜನರ ವಿರುದ್ಧ ಸಂತ್ರಸ್ತ ಮಹಿಳೆ ಖುಸ್ರುಪುರ್ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಶೀಘ್ರವೆ ಬಂಧಿಸುವ ಭರವಸೆ ನೀಡಿದ್ದಾರೆ.

Leave A Reply

Your email address will not be published.