Mangalore: ಮಂಗಳೂರು: ಈದ್‌ಮಿಲಾದ್ ದಿನ ದಕ್ಕೆಯಲ್ಲಿ ವ್ಯಾಪಾರ ನಡೆಸಿದರೆ ಬಹಿಷ್ಕಾರ ಬ್ಯಾನರ್- ಹಿಂದೂ ಸಂಘಟನೆ ಆಕ್ರೋಶ!!
ಈದ್ ಮಿಲಾದ ಹಬ್ಬವು ಸೆ.28ರಂದು ನಡೆಯಲಿದೆ. ಆದರೆ ದಕ್ಕೆಯಲ್ಲಿ ಹಸಿಮೀನು ವ್ಯಾಪರಸ್ಥರ ಸಂಘದ ಹೆಸರಲಿನಲ್ಲಿ ಬ್ಯಾನರೊಂದು ಹಾಕಲಾಗಿದ್ದು, ಇದರಲ್ಲಿ ಮೀನು ವ್ಯಾಪಾರಿಗಳು ಆ ದಿನ ಕೆಲಸ ಮಾಡದೇ ಕಡ್ಡಾಯ ರಜೆ ಮಾಡಬೇಕು. ತಪ್ಪಿದ್ದಲ್ಲಿ ಅಂಥವರ ವಿರುದ್ಧ ಸಂಘದ ವತಿಯಿಂದ ಒಂದು ತಿಂಗಳ ಕಾಲ ಬಂದರು ಧಕ್ಕೆಯಲ್ಲಿ ವ್ಯಾಪಾರ ಮಾಡದಂತೆ ನಿಷೇಧ ಹೇರಲಾಗುವುದು ಎಂದು ಬ್ಯಾನರಿನಲ್ಲಿ ಹಾಕಲಾಗಿದೆ. ಈ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ಬಜರಂಗದಳ, ವಿಶ್ವಹಿಂದು ಪರಿಷತ್ ನಾಯಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಧಕ್ಕೆಯಲ್ಲಿ ಈ ರೀತಿ ದಂಡನೆ ವಿಧಿಸಲು ಷರಿಯತ್ ಕಾನೂನು ಇಲ್ಲಿ ಜಾರಿಯಲ್ಲಿದೆಯೇ? ಎಂದು ಬಜರಂಗದಳ ಮುಖಂಡ ಶರಣ್ ಪಂಪ್‌ವೆಲ್ ಪ್ರಶ್ನೆ ಮಾಡಿದ್ದಾರೆ. ಇಂತಹ ಬೆದರಿಕೆಗಳಿಗೆ ಹಿಂದು ವ್ಯಾಪಾರಿಗಳು ಮಣಿಯರಬಾರದು. ನಿಮ್ಮ ಜೊತೆಗೆ ಹಿಂದು ಸಮಾಜ ಇದೆ. ಹಾಗಾಗಿ ಪೊಲೀಸ್ ಇಲಾಖೆ ತಕ್ಷಣ ಈ ಬ್ಯಾನರನ್ನು ತೆರವು ಮಾಡಬೇಕೆಂಬ ಆಗ್ರಹ ಮಾಡಿದ್ದಾರೆ.