ಮಂಗಳೂರು: ಈದ್ ಮಿಲಾದ್ ಹಬ್ಬದಂದು ವ್ಯಾಪಾರ ನಡೆಸಿದರೆ ಬಹಿಷ್ಕಾರ, ಬ್ಯಾನರ್ ಹಿಂದಿನ ಅಸಲಿ ಸತ್ಯ ಬಯಲು !

Share the Article

ನಿನ್ನೆಯಿಂದ ಮಂಗಳೂರು ಬಂದರಿನಲ್ಲಿ ಹಸಿ ಮೀನು ವ್ಯಾಪಾರಸ್ಥರ ಸಂಘವೊಂದು ಹಾಕಿರುವ ಬ್ಯಾನರೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ಇದಕ್ಕೆ ಪರ-ವಿರೋಧ ಚರ್ಚೆಗಳು ನಡೆಯುತ್ತ ಇದೆ. ಇದೀಗ ಇದೊಂದು ಕೋಮು ಭಾವನೆ ಪ್ರಚೋದಿಸುವ ಕೆಲಸ ಮಾಡಲಾಗುತ್ತಿದೆ ಎಂಬ ಆರೋಪವೊಂದು ಕೇಳಿ ಬರುತ್ತಿದೆ.

ಈದ್‌ಮಿಲಾದ್‌ಗೆ ಕಡ್ಡಾಯವಾಗಿ ರಜೆ ಮಾಡದಿದ್ದರೆ ಹಸಿ ಮೀನು ವ್ಯಾಪಾರಸ್ಥರಿಗೆ ದಂಡ ವಿಧಿಸುವುದು, ಜೊತೆಗೆ ಒಂದು ತಿಂಗಳು ವ್ಯಾಪಾರ ಮಾಡದಂತೆ ಬಹಿಷ್ಕಾರ ಹಾಕಿದ ಬ್ಯಾನರ್‌ ಸುದ್ದಿಯ ಅಸಲಿ ಸತ್ಯ ಏನೆಂದು ಇಲ್ಲಿದೆ.

ಅಸಲಿಗೆ ಮಂಗಳೂರು ಬಂದರಿನಲ್ಲಿ ಈ ಹಿಂದಿನಿಂದಲೂ ವರ್ಷದಲ್ಲಿ ಒಂಭತ್ತು ದಿನ ರಜೆ ಇರುತ್ತದೆ. ಇದರಲ್ಲಿ ಹಿಂದೂಗಳ ಹಬ್ಬಕ್ಕೆ ನಾಲ್ಕು ದಿನ, ಮುಸ್ಲಿಮರ ಹಬ್ಬಕ್ಕೆ ಮೂರು ದಿನ, ಕ್ರಿಶ್ಚಿಯನ್ನರ ಹಬ್ಬಕ್ಕೆ ಎರಡು ದಿನ ರಜೆ ಇರುತ್ತದೆ. ಹಾಗೆ ನೋಡಿದರೆ ಹಸಿಮೀನು ವ್ಯಾಪಾರಸ್ಥರ ಸಂಘದಲ್ಲಿ ಎಲ್ಲಾ ಸಮುದಾಯವರು ಇದ್ದಾರೆ. ಆದರೆ ಇತ್ತೀಚೆಗೆ ಚೌತಿ ದಿನದಂದು ರಜೆ ನೀಡಿದ್ದರೂ ಕೆಲವರು ನಿಯಮ ಮೀರಿ ವ್ಯಾಪಾರ ಮಾಡಿದ ಕಾರಣ ಈ ಬೋರ್ಡ್‌ ಹಾಕಲಾಗಿದೆ ಎಂದು ಹೇಳಲಾಗಿದೆ.

ಆದರೆ ಈ ಬ್ಯಾನರ್‌ ಹಾಕುವ ನಿರ್ಧಾರ ಎಲ್ಲಾ ಸಮುದಾಯವರನ್ನು ಒಳಗೊಂಡ ಹಸಿ ಮೀನು ವ್ಯಾಪಾರಸ್ಥರ ಸಂಘ ತೀರ್ಮಾನ ಮಾಡಿದ್ದು ಎಂದು ವರದಿಯಾಗಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬಹಿಷ್ಕಾರದಂತಹ ಕ್ರಮ ಕೈಗೊಳ್ಳಬಾರದು ಎಂದು ಅಭಿಪ್ರಯ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಇದನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

 

Leave A Reply