Mahindra Company: ಉಗ್ರರ ಪರ ವಕಾಲತ್ತು ವಹಿಸಿದ ಕೆನಡಾ – ಸಖತ್ತಾಗೆ ಶಾಕ್ ಕೊಟ್ಟ ಭಾರತದ ಮಹೀಂದ್ರಾ !!
Mahindra Company: ಕೆನಡಾದ(Canada)ಆರ್ಥಿಕತೆಗೆ ಭಾರತವೇ ಮೂಲವಾಗಿದ್ದರು ಕೂಡ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಖಲಿಸ್ತಾನ ಉಗ್ರರ ಪರವಾಗಿ ನಿಂತು ದ್ವೇಷ ಕಾರುತ್ತಿದೆ. ಹೀಗಾಗಿ, ಖಲಿಸ್ತಾನಿ ಉಗ್ರರ ಬೆನ್ನಿಗೆ ನಿಂತಿರುವ ಕೆನಡಾಕ್ಕೆ ಭಾರತೀಯ ಕಂಪನಿಗಳು(Indian Companies)ಶಾಕ್ ನೀಡುತ್ತಿವೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಖಲಿಸ್ತಾನ್ ವಿಷಯದ ಕುರಿತಂತೆ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಉಲ್ಬಣ ಗೊಂಡಿದೆ. ಇದರಿಂದಾಗಿ, ಎರಡೂ ದೇಶಗಳ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳುತ್ತಿದೆ.TCS, Infosys, Wipro ರೀತಿಯ 30 ಭಾರತೀಯ ಕಂಪನಿಗಳು ಕೆನಡಾದಲ್ಲಿ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿದ್ದು, ಈ ಕಂಪನಿಗಳಿಂದ ಕೆನಡಾದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಲಭಿಸಿದ್ದು,ಸದ್ಯ ಈ ಉದ್ವಿಗ್ನತೆಯ ಪರಿಣಾಮ ಉಭಯ ದೇಶಗಳ ನಡುವಿನ ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಭಯೋತ್ಪಾದಕ ಖಲಿಸ್ತಾನ ಪರ ಹೇಳಿಕೆ ನೀಡಿದ ನಂತರ ಕೆನಡಾದಲ್ಲಿನ ಒಂದೊಂದೇ ಭಾರತೀಯ ಕಂಪನಿಗಳು ಆ ದೇಶದೊಂದಿಗಿನ ವ್ಯವಹಾರಕ್ಕೆ ಕೈ ಹಾಕಲು ಹಿಂದೇಟು ಹಾಕುತ್ತಿವೆ.ಖಲಿಸ್ತಾನಿಗಳ ಮತ ಬ್ಯಾಂಕ್‌ಗಾಗಿ ಭಾರತದೊಂದಿಗೆ ಸಂಬಂಧ ಕಡಿದುಕೊಂಡಿರುವ ಕೆನಡಾಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಇದೀಗ, ಮಹೀಂದ್ರಾ ಅಂಡ್ ಮಹೀಂದ್ರ ಕಂಪನಿ (Mahindra And Mahindra Company) ಮಹತ್ತರ ಹೆಜ್ಜೆ ಇರಿಸಿದೆ. ಭಾರತೀಯ ಆಟೋಮೊಬೈಲ್ ದೈತ್ಯ ಮಹೀಂದ್ರಾ ಮತ್ತು ಮಹೀಂದ್ರಾ ಕೆನಡಾದಲ್ಲಿ ತನ್ನ ವ್ಯವಹಾರವನ್ನು ಮುಚ್ಚಲು ತೀರ್ಮಾನ ಕೈಗೊಂಡಿದೆ.
ಮಹೀಂದ್ರಾ ಕಂಪೆನಿ ಕೆನಡಾದ ಸಂಸ್ಥೆಯಾಗಿರುವ ರೇಸನ್ ಏರೋಸ್ಪೇಸ್ ಕಾರ್ಪೊರೇಶನ್(Resson Aerospace Corporation)ನೊಂದಿಗಿನ ಪಾಲುದಾರಿಕೆಯನ್ನು ಹೊಂದಿತ್ತು. ಜಸ್ಟಿನ್ ಟ್ರುಡೋ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಿದ ಬಳಿಕ ಆ ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಮಹೀಂದ್ರಾ ಮತ್ತು ಮಹೀಂದ್ರಾ ಕಂಪೆನಿ ಮುಕ್ತಾಯಗೊಳಿಸಿದೆ. ಇದರ ಬೆನ್ನಲ್ಲೇ ಕೆನಡಾದ ಕಂಪನಿ ಟೆಕ್ ರಿಸೋರ್ಸಸ್‌ನ ಉಕ್ಕಿನ ಉತ್ಪಾದನಾ ಘಟಕ ಮತ್ತು ಕಲ್ಲಿದ್ದಲು ಘಟಕದಲ್ಲಿ ಪಾಲುದಾರನಾಗಲೂ ಮುಂದಾಗಿದ್ದ ಭಾರತೀಯ ಸಂಸ್ಥೆ JSW ಸ್ಟೀಲ್ ಲಿಮಿಟೆಡ್ ಸಹ ಕೆನಡಾದ ಕಂಪನಿ ಟೆಕ್ ರಿಸೋರ್ಸಸ್ ನೊಂದಿಗೆ ತನ್ನ ಒಪ್ಪಂದವನ್ನು ನಿಲ್ಲಿಸಲು ತೀರ್ಮಾನ ಕೈಗೊಂಡಿದೆ ಎಂದು ವರದಿಯಾಗಿದೆ.