iPhone : ಈ ಮೊಬೈಲ್ ಖರೀದಿಸಿದ್ರೆ ಅರ್ಧ ವರ್ಷದ ರಿಚಾರ್ಜ್ ಪ್ರೀ- ಕೊಳ್ಳಲು ಮುಗಿಬಿದ್ದ ಜನ !

Latest news technology news iphone If you buy this mobile recharge is free for half a year

iPhone : ಆಪಲ್‌ (iPhone) ಸಂಸ್ಥೆಯ ಐಫೋನ್‌ಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿವೆ. ಎಲ್ಲರೂ ಐಫೋನ್ ಖರೀದಿಗೆ ಮುಗಿಬೀಳುತ್ತಿದ್ದಾರೆ. ಆದರೆ ಇದರ ಬೆಲೆ ಕೈಗೆಟುಕದಷ್ಟು ಎತ್ತರದಲ್ಲಿದೆ. ಜನ ಸಾಮಾನ್ಯರಂತೂ ಇದನ್ನು ಕೊಳ್ಳುವ ಕನಸು ಕಾಣಬೇಕೇ ಹೊರತು ಖರೀದಿಸಲು ಸಾಧ್ಯವಾಗೋದಿಲ್ಲ, ಅಷ್ಟು ಬೆಲೆ ಇದೆ. ಆದರೆ ಇದೀಗ ಈ ಮೊಬೈಲ್ ಖರೀದಿಸಿದ್ರೆ ಅರ್ಧ ವರ್ಷದ ರಿಚಾರ್ಜ್ ಪ್ರೀ, ಈ ಹಿನ್ನೆಲೆ ಈ ಫೋನ್ ಕೊಳ್ಳಲು ಜನ ಮುಗಿಬಿದ್ದಿದ್ದಾರೆ.

ಸದ್ಯ iPhone 15 ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಇದೀಗ ಬಹಳಷ್ಟು ಸದ್ದು ಮಾಡುತ್ತಿದೆ. ಜೊತೆಗೆ ಗ್ರಾಹಕರಿಗೆ iPhone 15 ಅನ್ ಲೈನ್ ಮಾರುಕಟ್ಟೆಯಲ್ಲಿ ಸಹ ಲಭ್ಯವಿದೆ. ಐಫೋನ್ 15 ಖರೀದಿ ಮಾಡಲು ಅನೇಕ ಬ್ಯಾಂಕ್ ಗಳು ಸಹ ರಿಯಾಯಿತಿಗಳನ್ನು ಮತ್ತು ವಿನಿಮಯ ಕೊಡುಗೆಗಳನ್ನು ನೀಡುತ್ತಿದೆ. ಅಲ್ಲದೆ iPhone 15 ಇದೀಗ EMI ಆಯ್ಕೆಯಲ್ಲಿ ಸಹ ಲಭ್ಯವಿದೆ.

iPhone 15 ಮೇಲೆ ಗ್ರಾಹಕರಿಗೆ ಸುಮಾರು 2,394 ರೂಗಳ ಪ್ರಯೋಜನವೂ ಸಹ ಲಭ್ಯವಿದೆ. Reliance Retail Stores, Reliance Digital, ಅಥವಾ ನೀವು Jiomart ನಿಂದ iPhone 15 ಅನ್ನು ಖರೀದಿ ಮಾಡಿದರೆ ನಿಮಗೆ ಸುಮಾರು 6 ತಿಂಗಳ ಕಾಲ ಪ್ರತಿ ತಿಂಗಳಿಗೆ ಸುಮಾರು 399 ರೂಗಳ (3 GB/day, unlimited voice, 100 SMS/day) ರೀಚಾರ್ಜ್ ಪ್ಲಾನ್ ಪ್ರಯೋಜನವನ್ನು ಪಡೆಯಬಹುದು.

ಇದು ನಿಮಗೆ ಸುಮಾರು 2,394 ರೂಗಳ ಪ್ರಯೋಜನವನ್ನು ಒದಗಿಸುತ್ತಿದೆ. ಈ ಆಯ್ಕೆಯೂ ಸುಮಾರು 149/- ರೂಗಳಿಗೆ ಅಥವಾ ಅದಕ್ಕಿಂತ ಹೆಚ್ಚಿನ ದರಕ್ಕೆ ಪ್ರಿಪೇಯ್ಡ್ ಆಯ್ಕೆಗಳಿಗೆ ಲಭ್ಯವಿದೆ. ಹಾಗೇ ಜಿಯೋ ಉಪಯೋಗಿಸದ ಗ್ರಾಹಕರು ಹೊಸ ಜಿಯೋ ಸಿಮ್ ಪಡೆದು ಈ ಲಾಭವನ್ನು ಪಡೆಯಬಹುದು.

ನೀವು iPhone 15 ಪಡೆದು ಅದರಲ್ಲಿ ಜಿಯೋ ಪ್ರಿಪೇಯ್ಡ್ ಸಿಮ್ ಅನ್ನು ಸೇರಿಸಿದ 72 ಗಂಟೆಗಳ ಒಳಗೆ ಈ ಆಯ್ಕೆಯು ಸ್ವಯಂ ಚಾಲಿತವಾಗುತ್ತದೆ. ಈ ಕುರಿತು ಮಾಹಿತಿ ನಿಮಗೆ ಇ-ಮೇಲ್ ಅಥವಾ ಎಸ್ ಎಂ ಎಸ್ ನಿಂದ ತಿಳಿಯುತ್ತದೆ. ಈ ಪ್ರಯೋಜನವನ್ನು ನೀವು ಕೇವಲ iPhone 15 ಸ್ಮಾರ್ಟ್ ಫೋನ್ ನಲ್ಲಿ ಮಾತ್ರ ಪಡೆಯಬಹುದಾಗಿದೆ.

 

ಇದನ್ನು ಓದಿ: Whatsapp Update: ಈ ಮೊಬೈಲ್ ಗಳಲ್ಲಿ ಇನ್ನು ‘ವಾಟ್ಸಪ್’ ವರ್ಕ್ ಆಗಲ್ಲ !! ನಿಮ್ಮ ಫೋನ್ ಕೂಡ ಉಂಟಾ? ಈಗಲೇ ಚೆಕ್ ಮಾಡಿ

Leave A Reply

Your email address will not be published.