Rajinikanth:ಕಂಡೀಷನ್ ಮೇಲೆ ಕಂಡೀಷನ್ ಹಾಕಿದ ರಜನಿಕಾಂತ್ – ಒಂದೊಂದನ್ನೂ ಕೇಳಿ ಡೈರೆಕ್ಟರೇ ಶಾಕ್

ನಟ ರಜನಿಕಾಂತ್ ಅವರು ಆಪ್ತಮಿತ್ರ-ಚಂದ್ರಮುಖಿ ಡೈರೆಕ್ಟರ್ ಪಿ.ವಾಸು ಅವರಿಗೆ ಕೆಲವು ಕಂಡೀಷನ್ಗಳನ್ನು ಹಾಕಿದ್ದಾರಂತೆ.

Share the Article

Rajinikanth: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ (Jailer Cinema)ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ (Shivaraj Rajkumar)ಅತಿಥಿ ಪಾತ್ರದಲ್ಲಿ ಎಂಟ್ರಿ ಕೊಟ್ಟು ಸಿನಿರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಜೈಲರ್ (Rajinikanth Next Movie) ಚಿತ್ರ ಹಿಟ್ ಆದ ಖುಷಿಯಲ್ಲಿದ್ದಾರೆ. ಈ ನಡುವೆ, ನಟ ರಜನಿಕಾಂತ್ ಅವರು ಆಪ್ತಮಿತ್ರ-ಚಂದ್ರಮುಖಿ ಡೈರೆಕ್ಟರ್ ಪಿ.ವಾಸು ಅವರಿಗೆ ಕೆಲವು ಕಂಡೀಷನ್ಗಳನ್ನು ಹಾಕಿದ್ದಾರಂತೆ.

ಸೂಪರ್ ಸ್ಟಾರ್ ರಜನಿಕಾಂತ್ ಯಾವುದೇ ಸಿನಿಮಾ ಮಾಡುವಾಗಲೂ ಕೂಡ ಪಕ್ಕ ಲೆಕ್ಕ ಹಾಕಿಯೇ ಹೊಸ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಾರೆ. ರಜನಿಕಾಂತ್ ಸೀಕ್ವೆಲ್ ಸಿನಿಮಾಗಳಲ್ಲಿ ನಟಿಸೋದಕ್ಕೆ ದೊಡ್ಡ ಮಟ್ಟದ ಆಸಕ್ತಿ ತೋರುವುದಿಲ್ಲವೇನೋ!? ರಜನಿಕಾಂತ್ ಅವರಿಗೆ ಚಂದ್ರಮುಖಿಯ ಮೇಲೆ ಹೆಚ್ಚು ಆಸಕ್ತಿ ಇರುವಂತೆ ಕಾಣುತ್ತಿಲ್ಲ ಎಂಬುದು ಕೆಲ ಬಲ್ಲವರ ಅನಿಸಿಕೆ. ತಮಿಳಿನಲ್ಲಿ (Chandramukhi 2 Movie News) ಚಂದ್ರಮುಖಿ ಚಿತ್ರಕ್ಕೆ ರಜನೀಕಾಂತ್ ಅವರ ಸ್ಟಾರ್ ಡಮ್ ಜೀವತುಂಬಿದ್ದು ಸುಳ್ಳಲ್ಲ.

ಸಾಮಾನ್ಯವಾಗಿ ಸರಣಿ ಸಿನಿಮಾಗಳು ಗೆಲ್ಲೋದು ಬಹುತೇಕ ಕಡಿಮೆ. ಹೀಗಾಗಿಯೇ ಏನೋ ಸೂಪರ್ ಸ್ಟಾರ್ ರಜನಿಕಾಂತ್ ಸರಣಿ ಸಿನಿಮಾಗಳ ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಂಡಿಲ್ಲ ಎನ್ನಲಾಗುತ್ತದೆ. ಈ ವಿಚಾರ ಗೊತ್ತಿರುವ ಹಿನ್ನೆಲೆ ಸೂಪರ್ ಸ್ಟಾರ್ ರಜನಿಕಾಂತ್ ಸರಣಿ ಸಿನಿಮಾಗಳನ್ನು ಹೆಚ್ಚು ಒಪ್ಪಿಕೊಳ್ಳೋದಿಲ್ಲ. ಹೀಗಾಗಿ, ಚಂದ್ರಮುಖಿ-2 ಸಿನಿಮಾವನ್ನ ರಜನಿಕಾಂತ್ ಒಪ್ಪಿರಲಿಲ್ಲ ಅನಿಸುತ್ತದೆ. ಡೈರೆಕ್ಟರ್ ಪಿ.ವಾಸು ಈ ಸಿನಿಮಾ ಮಾಡಿದ್ದು, ಈ ಚಿತ್ರ ಇದೇ ತಿಂಗಳ 28 ರಂದು ರಿಲೀಸ್ ಆಗುತ್ತಿದೆ.

ಒಂದು ಚಂದ್ರಮುಖಿ-2 ಸಿನಿಮಾ ಸಕ್ಸಸ್ ಆಗಲೇಬೇಕು. ಇದರ ಜೊತೆಗೆ ಇದು ಗೆದ್ದರೂ ಚಂದ್ರಮುಖಿ-3 ಸಿನಿಮಾದ ಕಥೆ ಚೆನ್ನಾಗಿಯೇ ಇರಬೇಕು. ಹಾಗಿದ್ದಾಗ ಮಾತ್ರ ನಾನು ಮಾಡುತ್ತೇನೆ ಎಂದಿದ್ದಾರಂತೆ. ಈ ನಡುವೆ, ರಜನಿಕಾಂತ್ ಚಂದ್ರಮುಖಿ-3 ಚಿತ್ರ ಮಾಡಬೇಕು ಎಂದರೆ ಎರಡು ಕಂಡಿಷನ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಚಂದ್ರಮುಖಿ-2 ಚಿತ್ರ ಸೋತರೇ ಚಂದ್ರಮುಖಿ-3 ಚಿತ್ರ ಮಾಡೋದರಲ್ಲಿ ಯಾವುದೇ ಅರ್ಥ ಕೂಡ ಇರಲ್ಲ. ಒಟ್ಟಿನಲ್ಲಿ ಚಂದ್ರಮುಖಿ-2 ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

Leave A Reply