PFI ಕಾರ್ಯಕರ್ತರಿಂದ ಯೋಧನ ಅಪಹರಣ, ಥಳಿತ; ಬಟ್ಟೆ ಹರಿದು ಬೆನ್ನಮೇಲೆ ಬರೆದರು ಚಿತ್ರ, ಏನದು?

Share the Article

PFI Attack: ಕೊಲ್ಲಂ (ಕೇರಳ): ಭಾರತೀಯ ಸೇನಾಪಡೆಯ ಯೋಧರೊಬ್ಬರನ್ನು ಸೆರೆಹಿಡಿದು ಥಳಿಸಿರುವ ಘಟನೆಯೊಂದು ನಡೆದಿದೆ. ಪಿಎಫ್‌ಐ ಸಂಘಟನೆಯವರು ಯೋಧರೊಬ್ಬರನ್ನು ಸೆರೆಹಿಡಿದು ಥಳಿಸಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಪಿಎಫ್‌ಐ ನ ಆರು ಮಂದಿ ಕಾರ್ಯಕರ್ತರು ಯೋಧನನ್ನು ಸೆರೆಹಿಡಿದು ಮನೆ ಸಮೀಪದ ಕಾಡಿನೊಳಗೆ ಕರೆದೊಯ್ದು ಆತನ ಕೈ ಕಟ್ಟಿ ಹಾಕಿ ಬೆನ್ನಿನ ಮೇಲೆ ಪಿಎಫ್‌ಐ ಎಂದು ಪೈಂಟ್‌ ಬಳಸಿ ಬರೆದು ಥಳಿಸಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಹಸಿರು ಪೈಂಟ್‌ನಿಂದ ಪಿಎಫ್‌ಐ ಎಂದು ಬರೆದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆರು ಮಂದಿ ಪಿಎಫ್‌ಐ ನವರು ಯೋಧ ಶೈನ್‌ ಕುಮಾರ್‌ನನ್ನು ಅಪಹರಿಸಿ ಕಡಕ್ಕಲ್‌ ಸಮೀಪದ ಕಾಡಿನೊಳಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

Leave A Reply