Diamond Search: ರಸ್ತೆಯಲ್ಲಿ ಬಿತ್ತು ವಜ್ರದ ಪ್ಯಾಕೆಟ್! ಸುದ್ದಿ ಕೇಳಿ ಹುಡುಕಲು ಮುಗಿಬಿದ್ದ ಜನರು, ಆದರೆ…
Diamond Search: ವಜ್ರದ ಪ್ಯಾಕೆಟ್‌ವೊಂದು ಸೂರತ್‌ನ ವರಾಚಾ ಪ್ರದೇಶದಲ್ಲಿ ಆಕಸ್ಮಿಕವಾಗಿ ಬಿದ್ದಿದೆ ಎಂಬ ಸುದ್ದಿ ಹಬ್ಬಿದ್ದು, ಅಲ್ಲಿ ನೆರೆದಿರುವ ಜನರು ಅವುಗಳನ್ನು ಹುಡುಕಲು ಬೀದಿಗಿಳಿದಿದ್ದು, ರಸ್ತೆ ತುಂಬಾ ಜನ ಜಮಾಯಿಸಿರುವ ಘಟನೆಯೊಂದು ನಡೆದಿದೆ. ಜನರು ಬೀದಿಗಳಲ್ಲಿ ವಜ್ರಗಳನ್ನು ಹುಡುಕುತ್ತಿರುವುದು (Diamond Search) ಕಂಡು ಬಂದಿದೆ. ಕೆಲವರು ರಸ್ತೆ ಬದಿಯ ಧೂಳನ್ನು ಎತ್ತಿಕೊಂಡು ಕೂಡಾ ವಜ್ರ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ರಸ್ತೆಯಲ್ಲಿ ಬಿದ್ದಿರುವ ವಜ್ರಗಳನ್ನು ಜನರು ಎತ್ತಿಕೊಳ್ಳುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಸ್ತೆಯಲ್ಲಿ ಜನರು ವಜ್ರಗಳನ್ನು ಹೇಗೆ ಹುಡುಕುತ್ತಿದ್ದಾರೆ ಎಂಬುದನ್ನು ವೈರಲ್ ವೀಡಿಯೊದಲ್ಲಿ ಕಾಣಬಹುದು. ಆದರೆ ಸತ್ಯ ಬಯಲಿಗೆ ಬಂದ ಕೂಡಲೇ ಜನ ಆಕ್ರೋಶಗೊಂಡರು. ಅಷ್ಟೊತ್ತಿನ ತನಕ ವಜ್ರಗಳನ್ನು ಪಡೆದವರು ನಾವು ಅಷ್ಟೊತ್ತಿನ ತನಕ ಹುಡುಕಿದ್ದು, ನಕಲಿ ವಜ್ರ ಎಂದು ತಿಳಿದು ನಿರಾಸೆಗೊಂಡರು. ಯಾರೋ ನಮ್ಮಲ್ಲಿ ತಮಾಷೆ ಮಾಡಿದ್ದಾರೆ ಎಂದು ಹೇಳಿದರು.
ವರದಿಗಳ ಪ್ರಕಾರ, ವಜ್ರಗಳು ಕೋಟಿ ಮೌಲ್ಯದವು ಎಂಬ ಸಂದೇಶವೊಂದು ಹರಿದಾಡಿತ್ತು. ಕಾಣೆಯಾದ ವಜ್ರಗಳನ್ನು ಹುಡುಕುತ್ತಿರುವ ಜನರ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಡಿದೆ.
ಆದಾಗ್ಯೂ, ಪತ್ತೆಯಾದ ವಜ್ರಗಳು ವಾಸ್ತವವಾಗಿ ಅಮೇರಿಕನ್ ವಜ್ರಗಳು ಎಂದು ನಂತರ ತಿಳಿಯಿತು. ಇದನ್ನು ಅನುಕರಣೆ ಆಭರಣ ಅಥವಾ ಸೀರೆ ಕೆಲಸದಲ್ಲಿ ಬಳಸಲಾಗುತ್ತದೆ. ಶೋಧಕರಲ್ಲಿ ಒಬ್ಬರಾದ ಅರವಿಂದ್ ಪನ್ಸೇರಿಯಾ ಅವರು ಸಾರ್ವಜನಿಕರ ಗಮನವನ್ನು ಸೆಳೆಯಲು ಈ ತಮಾಷೆಯನ್ನು ಯಾರೋ ಮಾಡಿದ್ದಾರೆ ಎಂದು ಹೇಳಿದರು. ಅಂದ ಹಾಗೆ ಈ ಘಟನೆ ಸೆಪ್ಟೆಂಬರ್ 24 ರಂದು ನಡೆದಿದೆ.