Good News For Farmers: ರೈತರೇ ನಿಮಗೆ ಹೊಡೀತು ಬಂಪರ್ ಲಾಟ್ರಿ- ‘ಪಂಪ್ ಸೆಟ್ ‘ ಬಗ್ಗೆ ಸರ್ಕಾರ ಕೊಡ್ತು ಭರ್ಜರಿ ಗುಡ್ ನ್ಯೂಸ್
Good News For Farmers: ರೈತರಿಗೆ(Farmers)ನೆರವಾಗುವ ನಿಟ್ಟಿನಲ್ಲಿ ಕೇಂದ್ರ(Central Government)ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದೀಗ, ಸರ್ಕಾರ ರೈತರಿಗೆ ಭರ್ಜರಿ ಶುಭ ಸುದ್ದಿ ನೀಡಿದೆ.
ರಾಜ್ಯದ ಅನೇಕ ರೈತರು ಅಕ್ರಮವಾಗಿ ತಮ್ಮ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು.ಇದರ ಜೊತೆಗೆ ಸಕ್ರಮದ ನಿರೀಕ್ಷೆಯಲಿದ್ದರು. ಈ ರೈತರಿಗೆ ಹೊಡೀತು ಬಂಪರ್ ಲಾಟ್ರಿ!! ಯಾಕೆ ಅಂತೀರಾ? ‘ಪಂಪ್ ಸೆಟ್’ (Pumpset) ಕುರಿತು ಸರ್ಕಾರ ಭರ್ಜರಿ ಗುಡ್ ನ್ಯೂಸ್ ಎಂಬ ಹಾಗೆ 2 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಸಕ್ರಮಕ್ಕೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.
ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ 2015ರಿಂದ ಈಚೆಗೆ ರೈತರು ಅಕ್ರಮವಾಗಿ ಅಳವಡಿಕೆ ಮಾಡಿರುವ ಸುಮಾರು 2 ಲಕ್ಷ ಕೃಷಿ ಪಂಪ್ ಸೆಂಟ್ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸಲು ನಿರ್ಧರಿಸಿದೆ.ಹೀಗಾಗಿ, ಕೃಷಿ ಪಂಪ್ ಸೆಟ್ ಗಳಿಗೆ ಅಕ್ರಮ ವಿದ್ಯುತ್ ಸಂಪರ್ಕವನ್ನು ಪಡೆದ ರೈತರಿಗೆ ರಾಜ್ಯ ಸರ್ಕಾರ ಖುಶಿ ಸುದ್ದಿ ನೀಡಿದೆ. ಆದರೆ, ಇಲ್ಲಿ ರೈತರು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸೆ.22ರ ಬಳಿಕ ಅಕ್ರಮವಾಗಿ ಪಡೆಯುವ ಕೃಷಿ ಪಂಪ್ ಸೆಟ್ ವಿದ್ಯುತ್ ಸಂಪರ್ಕಗಳಿಗೆ ಇದು ಅನ್ವಯವಾಗದು.