LPG : ರಾಜ್ಯದ ಜನತೆಗೆ ಬಂಪರ್ ಲಾಟ್ರಿ- LPG ಸಿಲಿಂಡರ್ ಖರೀದಿಗೆ ರಾಜ್ಯದಿಂದಲೂ ಸಿಗಲಿದೆ ಸಬ್ಸಿಡಿ -ಸಿಎಂ ಸಿದ್ದರಾಮಯ್ಯ ಘೋಷಣೆ !!
LPG: ಹಲವಾರು ತಿಂಗಳುಗಳಿಂದ ಕೇಂದ್ರ ಸರ್ಕಾರ(Central government)ಎಲ್ ಪಿ ಜಿ(LPG) ಸಿಲಿಂಡರ್ ಗೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿತ್ತು. ಇದರಿಂದ ಜನರು ಕೂಡ ಬೇಸತ್ತಿದ್ದರು. ಸಿಲಿಂಡರ್ ನ ದುಪ್ಪಟ್ಟು ಬೆಲೆಯಿಂದ ಕೊಳ್ಳಲು ಸಾಧ್ಯವಾಗದೆ ಸಾಕಷ್ಟು ಜನರು ವ್ಯಥೆ ಪಡುತ್ತಿದ್ದರು. ಇದೀಗ ಕೇಂದ್ರ ಸರ್ಕಾರದ ಸಚಿವ ಸಂಪುಟ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸುಮಾರು 75 ಲಕ್ಷ ಹೊಸ ಎಲ್ ಪಿ ಜಿ ಸಿಲಿಂಡರ್ ಸಂಪರ್ಕ ನೀಡುವ ಬರವಸೆ ನೀಡಿದೆ. ಅಷ್ಟೇ ಅಲ್ಲದೆ ಸಿಲಿಂಡರ್ ದರದಲ್ಲೂ ಕೂಡ 200 ರೂಪಾಯಿಗಳಷ್ಟು ಹಣವನ್ನು ಕಡಿತಗೊಳಿಸುವ ಕುರಿತು ಮಾತನಾಡಿದೆ
ಈಗಾಗಲೇ ದೇಶದಾದ್ಯಂತ ಎಲ್ ಪಿ ಜಿ ಸಿಲಿಂಡರ್ ಬಳಸುವ ಫಲಾನುಭವಿಗಳ ಸಂಖ್ಯೆ ಸುಮಾರು 10 ಕೋಟಿಯಷ್ಟು ದಾಟಿದ್ದು ಇದೀಗ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 75 ಲಕ್ಷ ಹೊಸ ಸಿಲಿಂಡರ್ ಸಂಪರ್ಕವನ್ನು ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ದೇಶದಾದ್ಯಂತ ಎಲ್ ಪಿ ಜಿ ಬಳಸುವ ಫಲಾನುಭವಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ
ಹಾಗೆಯೇ ಪ್ರಧಾನಮಂತ್ರಿ ಉಜ್ವಲ ಯೋಜನೆಯ(Pradhan manti ujwal yojana) ಅಡಿಯಲ್ಲಿ ಸಿಲಿಂಡರ್ ನ ಬೆಲೆಯಲ್ಲಿ 200 ರೂಪಾಯಿಗಳಷ್ಟು ಹಣವನ್ನು ಇಳಿಸುವುದಾಗಿ ತಿಳಿಸಿದ್ದಾರೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಹೊಸ ಸಿಲಿಂಡರ್ ಸಂಪರ್ಕ ನೀಡುವ ಕುರಿತು ಖಾತೆ ಸಚಿವ ಅನುರಾಗ ಠಾಕೂರ್ ಮಾತನಾಡಿದ್ದಾರೆ.
ಇನ್ನೇನು ದೀಪಾವಳಿ ಹಬ್ಬವು ಕೂಡ ಹತ್ತಿರ ಬಂತು. ಹಾಗಾಗಿ ಹೆಚ್ಚುತ್ತಿರುವ ಬೆಲೆಯಲ್ಲಿ ಪ್ರತಿ ವಸ್ತುವಿನ ಬೆಲೆಯನ್ನು ಮೂರರಿಂದ ಐದು ರೂಪಾಯಿಯವರೆಗೆ ಕಡಿಮೆ ಮಾಡುವದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಇದರ ಜೊತೆಗೆ ಎಲ್ ಪಿ ಜಿ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡುವ ಕುರಿತು ಭರವಸೆಯನ್ನು ನೀಡಿದೆ
ಎಲ್ ಪಿಜಿ ಸಿಲಿಂಡರ್ ಪ್ರತಿ ಮನೆಯಲ್ಲೂ ಅಡುಗೆ ಮಾಡುವುದರಿಂದ ಹಿಡಿದು ಸಾಕಷ್ಟು ಕೆಲಸಗಳಿಗೆ ಉಪಯೋಗವಾಗುತ್ತಿದೆ. ಇದರಿಂದ ಒಲೆಯಿಂದ ಬಿಡುಗಡೆಯಾಗುತ್ತಿದ್ದ ಅನಿಲಗಳನ್ನು ಕೂಡ ತಗ್ಗಿಸಲಾಗಿದೆ. ಪರಿಸರಕ್ಕೂ ಕೂಡ ಒಳಿತಾಗುತ್ತಿದೆ 15 ಕೆಜಿ ಸಿಲಿಂಡರ್ ನ ಬೆಲೆ 1200 ದಾಟಿದ್ದು ಇದೀಗ ಕೇಂದ್ರ ಸರ್ಕಾರ ಇದರಲ್ಲಿ 200 ರೂಪಾಯಿ ಕಡಿಮೆ ಮಾಡುವುದಾಗಿ ತಿಳಿಸಿದೆ
ಬಿಪಿಎಲ್ ಕುಟುಂಬ ,ಅಂತ್ಯೋದಯ ಕುಟುಂಬ, ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳು , ಎಸ್ ಸಿ/ ಎಸ್ ಟಿ ಸಮುದಾಯಗಳು, ಅರಣ್ಯ ವಾಸಿ, ಗ್ರಾಮೀಣ ಮನೆಗಳಿಗೂ ಅವಕಾಶವನ್ನು ನೀಡಲಾಗಿದೆ ಹಲವಾರು ತಿಂಗಳುಗಳಿಂದ ಕೇಂದ್ರ ಸರ್ಕಾರ ಇದರ ಕುರಿತು ಮಾತನಾಡುತ್ತಿದ್ದು ಇನ್ನೂ ಇದನ್ನು ಕಾರ್ಯಾಗತಗೊಳಿಸಿಲ್ಲ. ಹಾಗಾಗಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಸಬ್ಸಿಡಿ ನೀಡದಿದ್ದರೆ ನಾವೇ ನೀಡುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.