Gold new rule: ಪ್ರತಿ ಮನೆಗಳಿಗೆ ಚಿನ್ನದ ಲಿಮಿಟ್ ಘೋಷಿಸಿದ ಮೋದಿ ಸರ್ಕಾರ- ಇನ್ನು ಎಲ್ಲರ ಮನೆಯಲ್ಲಿ ಇಷ್ಟು ಮಾತ್ರ ಚಿನ್ನವಿರಬೇಕು !!

Gold new rule: ಚಿನ್ನ (Gold) ಅಂದ್ರೆ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ. ಹಬ್ಬ ಹರಿದಿನ ಬಂದ್ರೆ ಸಾಕು ತಮ್ಮ ಸೌಂದರ್ಯ ಹೆಚ್ಚಿಸಲು ಚಿನ್ನವನ್ನು ಧರಿಸದೇ ಇರೋರೇ ಇಲ್ಲ. ಒಂದಷ್ಟು ಜನರು ಚಿನ್ನ ಧರಿಸಲು ಇಷ್ಟಪಟ್ಟರೇ ಇನ್ನೊಂದಷ್ಟು ಜನರು ಚಿನ್ನ ಆದಾಯ ಮೂಲಕ್ಕಾಗಿಯೂ ಚಿನ್ನವನ್ನು ಹೊಂದಲು ಮುಂದಾಗುತ್ತಾರೆ. ಇದೀಗ ಚಿನ್ನ ಚಿನ್ನಾಭರಣ ಪ್ರಿಯರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಹೊಸ ರೂಲ್ಸ್‌ (Gold New Rule) ಜಾರಿಗೆ ತಂದಿದೆ.

ಅಷ್ಟಕ್ಕೂ ಅರೇ ಬೆಲೆ ಕಡಿಮೆ (gold rate), ಜಾಸ್ತಿ ಆಯ್ತಾ? ಅಂತಾ ಯೋಚ್ನೆ ಮಾಡ್ತಿದ್ದೀರಾ? ಅಲ್ವೇ ಅಲ್ಲ. ಮೋದಿ ಸರ್ಕಾರ ಪ್ರತಿ ಮನೆಗಳಿಗೆ ಚಿನ್ನದ ಲಿಮಿಟ್ ಘೋಷಿಸಿದೆ. ಇನ್ನು ಎಲ್ಲರ ಮನೆಯಲ್ಲಿ ಇಷ್ಟು ಮಾತ್ರ ಚಿನ್ನವಿರಬೇಕು. ಹೌದು, ಇತ್ತೀಚೆಗಷ್ಟೇ ಸರ್ಕಾರ ಚಿನ್ನ ಖರೀದಿಯಲ್ಲಿ ಹಾಲ್ ಮಾರ್ಕ್ (Gold Hallmark) ಅನ್ನು ಕಡ್ಡಾಯಗೊಳಿಸಿದೆ. ಕಾನೂನಿನ ನಿಯಮದಲ್ಲಿ ಚಿನ್ನ ಖರೀದಿಯಲ್ಲಿ ಮಿತಿಯನ್ನು ಅಳವಡಿಸಲಾಗಿದೆ.

ಮಹಿಳೆಯರಿಗೆ ಹಾಗೂ ಪುರುಷರಿಗೆ ಚಿನ್ನ ಸಂಗ್ರಹಣೆಯ ವಿಷಯದಲ್ಲಿ ಬೇರೆ ಬೇರೆ ನಿಯಮವನ್ನು ಸರ್ಕಾರ ಜಾರಿಗೊಳಿಸಿದೆ. ವಿವಾಹಿತ ಮಹಿಳೆಯರು ತಮ್ಮ ಬಳಿ ಕನಿಷ್ಠ 500 ಗ್ರಾಂ ಚಿನ್ನವನ್ನು ಸಂಗ್ರಹಿಸಿಡಲು ಸರ್ಕಾರ ಅನುಮತಿ ನೀಡಿದೆ. ಅವಿವಾಹಿತ ಮಹಿಳೆಯರು 250 ಗ್ರಾಂ ಚಿನ್ನವನ್ನು ಸಂಗ್ರಹಿಸಿಡಬಹುದು. ಪುರುಷರು ತಮ್ಮ ಬಳಿ 500 ಗ್ರಾಂ ಚಿನ್ನವನ್ನು ಇರಿಸಲು ಸರ್ಕಾರ ಸಮ್ಮತಿಸಿದೆ.

ಯಾವುದೇ ಕಾಗದ ಮತ್ತು ಪುರಾವೆಗಳಿಲ್ಲದೆ ಚಿನ್ನವನ್ನು ಇಡಲು ಮಿತಿ ಇದೆ. ಒಂದು ವೇಳೆ ಸರ್ಕಾರ ಅನುಮತಿ ನೀಡಿದ್ದಕ್ಕಿಂತ ಹೆಚ್ಚು ಚಿನ್ನ ನಿಮ್ಮ ಮನೆಯಲ್ಲಿ ಪತ್ತೆಯಾದರೆ ಅದರ ಪ್ರೂಫ್ ಮತ್ತು ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಯಾವುದೇ ದಾಖಲೆಗಳು ನಿಮ್ಮ ಬಳಿ ಇಲ್ಲದಿದ್ದರೆ ಆಗ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು. ವಿವಾಹಿತ ಅಥವಾ ಅವಿವಾಹಿತ ಪುರುಷರು ಗರಿಷ್ಠ 100 ಗ್ರಾಂ ಚಿನ್ನವನ್ನು ಕಾಗದಗಳಿಲ್ಲದೆ ಇರಿಸಿಕೊಳ್ಳಲು ಅನುಮತಿ ನೀಡಲಾಗಿದೆ.

ನೀವು ಎಷ್ಟು ಬೇಕಾದರೂ ಚಿನ್ನವನ್ನು ಈಗ ಮೇಲೆ ತಿಳಿಸಿದ ಲಿಮಿಟ್ ಗಿಂತ ಜಾಸ್ತಿ ಇಡಬಹುದು ಆದರೆ ಅದಕ್ಕೆ ಸೂಕ್ತವಾದ ಆದಾಯ ಮೂಲವನ್ನು ನೀವು ತೋರಿಸಬೇಕಾಗುತ್ತದೆ. ಆದಾಯಕ್ಕಿಂತ ಹೆಚ್ಚು ಚಿನ್ನ ನಿಮ್ಮ ಬಳಿ ಇದ್ದರೆ ಆದಾಯ ತೆರಿಗೆ 1961 ರ ಸೆಕ್ಷನ್ 132 ರಲ್ಲಿ, ಆದಾಯ ತೆರಿಗೆ ಅಧಿಕಾರಿಯು ನಿಮ್ಮ ಮನೆಯಲ್ಲಿ ಚಿನ್ನದ ಮೊತ್ತದ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಇತ್ತೀಚಿಗೆ ಉಡುಗೊರೆಯಾಗಿ ಬಂದ ಚಿನ್ನದ ಬಗ್ಗೆ ಹಾಗೂ ವಂಶ ಪಾರಂಪರ್ಯವಾಗಿ ಬಂದ ಚಿನ್ನದ ಮೇಲಿನ ನಿಯಮಗಳನ್ನು ಸ್ವಲ್ಪ ಸಡಿಲಗೊಳಿಸಲಾಗಿದೆ ಎನ್ನಲಾಗಿದೆ. ಅಲ್ಲದೆ ಚಿನ್ನವನ್ನು 3 ವರ್ಷಗಳಿಗಿಂತ ಹೆಚ್ಚು ಕಾಲ ಹಿಡಿದಿಟ್ಟುಕೊಂಡರೆ ಅದು 20 ಪ್ರತಿಶತದಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ.

2 Comments
  1. escape room says

    You actually make it appear really easy along with your presentation however I find this matter to be really something that I believe
    I would by no means understand. It sort of feels too complex and extremely large for me.
    I’m having a look forward for your subsequent post, I will try
    to get the dangle of it! Escape room lista

  2. Osvaldo.T says

    I was looking at some of your content on this internet site and I believe this website is rattling informative!
    Continue putting up.!

Leave A Reply

Your email address will not be published.