KPSC Chairman and Members Pension:ರಾಜ್ಯದ ಈ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ – ಪಿಂಚಣಿಯನ್ನು 2 ಪಟ್ಟು ಹೆಚ್ಚಿಸಲು ಅಸ್ತು ಎಂದ ಸರ್ಕಾರ !!

karnataka news kpsc chairman and members pension aproved by cabinet

KPSC Chairman and Members Pension: ರಾಜ್ಯದ ಈ ನೌಕರರಿಗೆ ಗುಡ್ ನ್ಯೂಸ್!! ಪಿಂಚಣಿಯನ್ನು ಎರಡು ಪಟ್ಟು ಹೆಚ್ಚಿಸಲು ಸರ್ಕಾರ ನೀಡಿದೆ ಗ್ರೀನ್ ಸಿಗ್ನಲ್! ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರು ಮತ್ತು ಸದಸ್ಯರ ಪಿಂಚಣಿಯನ್ನು (KPSC Chairman and Members Pension)ಎರಡು ಪಟ್ಟಿಗಿಂತಲೂ ಹೆಚ್ಚು ಮೊತ್ತದಷ್ಟು ಏರಿಕೆ ಮಾಡುವ ಪ್ರಸ್ತಾವಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರ ಪಿಂಚಣಿ ಹೆಚ್ಚಳಕ್ಕೆ ಅನುವು ಮಾಡಿಕೊಡುವ ‘ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಷರತ್ತುಗಳು) (ತಿದ್ದುಪಡಿ) ನಿಯಮಗಳು-2023’ಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಆಯೋಗದ ಅಧ್ಯಕ್ಷರು ಅಥವಾ ಸದಸ್ಯರಾಗಿ ಆರು ವರ್ಷಗಳ ಪೂರ್ಣಾವಧಿಯವರೆಗೆ ಕಾರ್ಯನಿರ್ವಹಿಸಿದವರಿಗೆ ಪಿಂಚಣಿ(Pension)ಹೆಚ್ಚಳಕ್ಕೆ ತಿದ್ದುಪಡಿ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.ಇನ್ನು ಮುಂದೆ ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರಾಗುವವರಿಗೆ ಹೊಸ ಪಿಂಚಣಿ ಯೋಜನೆಯ ಅಡಿಯಲ್ಲಿ ಪಿಂಚಣಿ ಪಾವತಿಸುವ ಕುರಿತು ಪರಿಗಣಿಸಲು ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.

ಕೆಪಿಎಸ್‌ಸಿ ಅಧ್ಯಕ್ಷರಾಗಿ ನಿವೃತ್ತರಾದವರಿಗೆ ಈಗ ತಿಂಗಳಿಗೆ 29,640 ಪಿಂಚಣಿ ಸಿಗುತ್ತಿದ್ದು, ಇದನ್ನು ತಿಂಗಳಿಗೆ 1 67,500ಕ್ಕೆ ಏರಿಕೆ ಮಾಡಲಾಗಿದೆ. ಕೆಪಿಎಸ್‌ಸಿ ಸದಸ್ಯರಾಗಿ ನಿವೃತ್ತರಾದ ನೌಕರರಿಗೆ ತಿಂಗಳಿಗೆ 7 24,960 ಪಿಂಚಣಿ ನೀಡಲಾಗುತ್ತಿದ್ದು, ಇದನ್ನು ತಿಂಗಳಿಗೆ 7 61,500ಕ್ಕೆ ಏರಿಕೆ ಮಾಡಲು ನಿಯಮಗಳಿಗೆ ತಿದ್ದುಪಡಿ ತರಲು ಸಮ್ಮತಿ ಸೂಚಿಸಲಾಗಿದೆ.

ಇದನ್ನೂ ಓದಿ: Government Scheme For Unmarried Women: ಮಹಿಳೆಯರೇ, ನಿಮಗೆ 21 ವರ್ಷ ಆಗಿದ್ರೆ ಈ ಯೋಜನೆಯಿಂದ ಪ್ರತೀ ತಿಂಗಳು ಸಿಗಲಿದೆ 3 ಸಾವಿರ ರೂ.! ಅರ್ಜಿ ಸಲ್ಲಿಕೆಗೆ ಮುಗಿಬಿದ್ದರು ನಾರಿಯರು

Leave A Reply

Your email address will not be published.