CockFight: ಕೋಳಿ ಪಂದ್ಯದಲ್ಲಿ ಎರಡು ಗುಂಪಿನ ಮಧ್ಯೆ ಗಲಾಟೆ! ಕಾರಣ ಏನು ಗೊತ್ತೇ?

Karnataka district Yadgiri news fight between 2 groups for cockfight latest news

Share the Article

CockFight: ಕೋಳಿ ಪಂದ್ಯದ ವೇಳೆ ಹುಂಜಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿಯೊಂದು ನಡೆದಿರುವ ಘಟನೆಯೊಂದು ಯಾದಗಿರಿ ಜಿಲ್ಲೆಯ ಹುಣಸಗಿ(Hunasgi) ತಾಲೂಕಿನ ಸಿದ್ದಾಪುರ (Siddapur) ಗ್ರಾಮದ ಬಳಿ ನಡೆದಿದೆ.

ರಾಜ್ಯದಲ್ಲಿ ಕೋಳಿ ಪಂದ್ಯ(CockFight) ಬ್ಯಾನ್‌ ಇದ್ದರೂ ಕೂಡಾ ಇಲ್ಲಿ ಕೋಳಿ ಪಂದ್ಯ ನಡೆಸಲಾಗಿದೆ ಎಂದು ವರದಿಯಾಗಿದೆ. ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಹುಂಜಗಳ ಕಾಳಗ ನಡೆಯುತ್ತದೆ ಎನ್ನಲಾಗಿದೆ. ಇಲ್ಲಿ ಹುಂಜಗಳ ಕಾಲಿಗೆ ಕತ್ತಿ ಕಟ್ಟಲಾಗುವುದು ಮತ್ತು ಯಾವ ಹುಂಜ ಸಾಯುತ್ತದೆಯೋ ಆ ಕಡೆಯುವರು ಸೋತವರು ಎಂದರ್ಥ.

ಈ ಹುಂಜಗಳ ಮೇಲೆ ಸಾವಿರಾರು ರೂ. ಹಣ ಬೆಟ್ಟು ಕಟ್ಟಲಾಗುತ್ತದೆ. ಬೇರೆ ಬೇರೆ ಊರುಗಳಿಂದ ಹುಂಜಗಳನ್ನು ತಂದು ಇಲ್ಲಿ ಪಂದ್ಯ ಕಟ್ಟಲಾಗುತ್ತದೆ ಎಂದು ವರದಿಯಾಗಿದೆ. ಸಿದ್ದಾಪುರ ಗ್ರಾಮದಲ್ಲಿ ನಡೆದ ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೋತವರು ಹಣ ನೀಡದ ಕಾರಣ ಜಗಳ ಆರಂಭವಾಗಿದ್ದು, ನಂತರ ಎರಡೂ ಗುಂಪಿನ ಮಧ್ಯೆ ಮಾರಾಮಾರಿ ನಡೆದಿದೆ. ಈ ಘಟನೆ ಸಂಬಂಧ ಹುಣಸಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Belthangady News: ಧರ್ಮಸ್ಥಳ ಸಮೀಪ ಮತ್ತೆ ಬಂದಿದೆ ಕಾಡಾನೆಗಳ ಹಿಂಡು?! ಅರಣ್ಯ ನರ್ಸರಿ ಧ್ವಂಸ!!!

Leave A Reply