Chaitra Fraud Case: ವಂಚನೆ ಪ್ರಕರಣ, ಚೈತ್ರಾ ಆಂಡ್‌ ಗ್ಯಾಂಗ್‌ಗೆ ಕೈದಿ ನಂಬರ್‌! ಅಂದ ಹಾಗೆ ಚೈತ್ರಗೆ ಯಾವ ಕೈದಿ ನಂಬರ್‌ ನೀಡಲಾಗಿದೆ ಗೊತ್ತಾ?

Chaitra kundapur fraud case Bengaluru news jail officer gives prisoner pincode for chaitra and gang latest news

Chaitra Fraud Case: ಉದ್ಯಮಿಗೆ ಎಂಎಲ್‌ಎ ಟಿಕೆಟ್‌ ನೀಡುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದೆ ಚೈತ್ರಾ ಆಂಡ್‌ ಟೀಂ ಗೆ ಇದೀಗ ಕೈದಿ ನಂಬರ್‌ ನೀಡಲಾಗಿದೆ. ಇದೀಗ ಈ ವಂಚನೆ ಟೀಂ ಪರಪ್ಪನ ಅಗ್ರಹಾರದಲ್ಲಿದ್ದು, ಜೈಲಾಧಿಕಾರಿಗಳು ಕೈದಿ ನಂಬರ್‌ ನೀಡಿದ್ದಾರೆ. ಪ್ರಕರಣಟದ ಎ1 ಆರೋಪಿಯಾದ ಚೈತ್ರಾಗೆ 9737, ಇನ್ನುಳಿದ ಆರೋಪಿಗಳಾದ ಮೋಹನ್ ಕುಮಾರ್ ಕೈದಿ ನಂಬರ್ 9738, ರಮೇಶ್-9739 ಚೆನ್ನಾನಾಯ್ಕ-9740, ಧನರಾಜ್-9741 ಎಂದು ವಿಚಾರಣಾಧೀನ ನಂಬರ್ ನೀಡಲಾಗಿದೆ ಎಂದು ಟಿವಿ9 ಕನ್ನಡ ಪ್ರಕಟ ಮಾಡಿದೆ.

 

ಗೋವಿಂದ ಬಾಬು ಪೂಜಾರಿಗೆ 5 ಕೋಟಿ ವಂಚನೆ ಕೇಸ್​ನಲ್ಲಿ ಸಿಲುಕಿದ್ದ ಚೈತ್ರಾ ಗ್ಯಾಂಗ್​ನ್ನ ಸಿಸಿಬಿ ಪೊಲೀಸರು 10 ದಿನಗಳಿಂದ ತಮ್ಮ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದರು. ಆದ್ರೆ ನಿನ್ನೆ(ಸೆಪ್ಟೆಂಬರ್ 23) ಕಸ್ಟಡಿ ಅಂತ್ಯವಾಗಿದ್ದರಿಂದ ಬೆಂಗಳೂರಿನ 3ನೇ ಎಸಿಎಂಎಂ ಕೋರ್ಟ್​ಗೆ ವಂಚಕರ ಗ್ಯಾಂಗ್​ನ್ನ ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದರು. ನ್ಯಾಯಾಲಯವೂ ಚೈತ್ರಾ ಹಾಗೂ ಆಕೆಯ ಗ್ಯಾಂಗ್​​ನ ಗಗನ್ ಕಡೂರ್, ಧನರಾಜ್, ರಮೇಶ್, ಶ್ರೀಕಾಂತ್ ಮತ್ತು ಚೆನ್ನನಾಯ್​​​​ಗೆ 14 ದಿನಗಳು ಅಂದ್ರೆ ಅಕ್ಟೋಬರ್​ 6 ರ ತನಕ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಆ ವೇಳೆ ಚೈತ್ರಾ ನ್ಯಾಯಾಧೀಶರ ಎದುರು ಗಳಗಳನೆ ಕಣ್ಣೀರು ಹಾಕಿದ್ದಳು. ನಂತರ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಚೈತ್ರಾ(Chaitra Fraud Case) ಆಂಡ್‌ ಗ್ಯಾಂಗನ್ನು 10 ದಿನ ಕಸ್ಟಡಿಯಲ್ಲಿಟ್ಟಿದ್ದ ಸಿಸಿಬಿ ಪೊಲೀಸರು, ನಿನ್ನೆ ಅಂದರ ಸೆ.23 ರಂದು ಕಸ್ಟಡಿ ಅಂತ್ಯಗೊಂಡಿದ್ದರಿಂದ ಬೆಂಗಳೂರಿನ 3ನೇ ಎಸಿಎಂಎಂ ಕೋರ್ಟ್‌ಗೆ ಈ ಗ್ಯಾಂಗನ್ನು ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದು, ನ್ಯಾಯಾಲಯವು ಇವರಿಗೆ ಅಕ್ಟೋಬರ್‌ 6ರ ವರೆಗೆ ನ್ಯಾಯಾಂಗ ಬಂಧನ ನೀಡಿದೆ. ಅಂದರೆ ಇನ್ನೂ 14ದಿನ ನ್ಯಾಯಾಂಗ ಬಂಧನದಲ್ಲಿ ಈ ಗ್ಯಾಂಗ್‌ ಇರಲಿದೆ. ಇನ್ನು ವಂಚನೆ ಕೇಸ್​​ನಲ್ಲಿ ಮೂರನೇ ಆರೋಪಿ ಹಾಲಶ್ರೀಗೆ ಸೆಪ್ಟೆಂಬರ್29 ರವರೆಗೆ CCB ಕಸ್ಟಡಿಗೆ ನೀಡಲಾಗಿದೆ.

ಚೈತ್ರಾ ನಿದ್ದೆಯಿಲ್ಲದೇ ಪರಪ್ಪನ ಅಗ್ರಾಹಾರದ ಜೈಲಿನಲ್ಲಿ ಕಣ್ಣೀರು ಹಾಕುತ್ತಾ ರಾತ್ರಿ ಕಳೆದಿರುವುದಾಗಿ ವರದಿಯಾಗಿದೆ. ನಿನ್ನೆ ಸಂಜೆ 6ಕ್ಕೆ ಜೈಲು ಸೇರಿದ್ದ ಚೈತ್ರಾ ಗ್ಯಾಂಗ್‌ ಜೈಲಿನ ಪಾದ ತುಳಿದಿದೆ. ಚೈತ್ರಾ ಅವಳನ್ನು ಪ್ರತ್ಯೇಕ ಕ್ವಾರಂಟೈನ್‌ ಸೆಲ್‌ನಲ್ಲಿ ಇಡಲಾಗಿದೆ. ನಿನ್ನೆ ರಾತ್ರಿ ಚಪಾತಿ, ಅನ್ನ, ಸಾಂಬಾರ್‌ ಸೇವಿಸಿರುವ ಚೈತ್ರಾ, ಇಂದು ಬೆಳಗ್ಗೆ (ಸೆ.24) ಬೆಳಿಗ್ಗೆ ನೀಡಿದ ಪಲಾವ್‌ ತಿಂದಿದ್ದಾಳೆ. 9 ದಿನ ಹೊಸ ಬಂಧಿಖಾನೆಯಲ್ಲೇ ಉಳಿಯಲಿರುವ ಚೈತ್ರಾಳನ್ನು ಬಳಿಕ ಹಳೆ ಬಂಧಿಖಾನೆಗೆ ಶಿಫ್ಟ್ ಮಾಡಲಾಗುತ್ತದೆ ಎಂದ ಟಿವಿ9 ಕನ್ನಡ ವರದಿ ಮಾಡಿದೆ.

ಇದನ್ನೂ ಓದಿ: ಉರಗತಜ್ಞನಿಗೇ ಕಚ್ಚಿದ ಕಾಳಿಂಗಸರ್ಪ! ಬೈಕ್‌ನಲ್ಲೇ ಹೋಗುವಾಗ ನಡೆಯಿತು ಭೀಕರ ಘಟನೆ, ಸ್ಥಳದಲ್ಲೇ ಸಾವು!! ವೀಡಿಯೋ ವೈರಲ್‌

Leave A Reply

Your email address will not be published.