Scholarship: ಹೆಣ್ಣು ಮಗುವಿನ ಪೋಷಕರೇ ಇತ್ತ ಗಮನಿಸಿ, ಮಗಳ ಎಜುಕೇಷನ್​ಗೆ ಹಣ ಕೊಡುತ್ತೆ ಸರ್ಕಾರ! ಅರ್ಜಿ ಸಲ್ಲಿಕೆ ಹೇಗೆ?

CBSE single girl child scholarship 2023 check details here

CBSE Single Girl Child 2023: ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಎಸ್ ಬಿಐ, ಹೆಚ್‌ಡಿಎಫ್‌ಸಿ ಬ್ಯಾಂಕ್ ಗಳು ಹಾಗೆ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಸ್ಕಾಲರ್‌ಶಿಪ್‌ ಮೂಲಕ ಮಕ್ಕಳ ಓದುವ ಕನಸಿಗೆ ಆಸರೆಯಾಗುತ್ತಿದೆ. ಇದೀಗ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2023 ರಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು (CBSE Single Girl Child 2023)ಒದಗಿಸುತ್ತಿದೆ.

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 18 ರವರೆಗೆ ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ನಿಮ್ಮ 10ನೇ ತರಗತಿಯ ಅಂಕಪಟ್ಟಿ , ಇತ್ತೀಚಿನ ಫೋಟೋ, ನಿಮ್ಮ ಪೋಷಕರು/ಪೋಷಕರ ಹೇಳಿಕೆ ಮತ್ತು ರದ್ದುಪಡಿಸಿದ ಚೆಕ್ ಅಥವಾ ಬ್ಯಾಂಕ್ ಪಾಸ್‌ಬುಕ್ ನಕಲು ಅರ್ಜಿ ಸಲ್ಲಿಸಲು ಬೇಕಾಗುತ್ತದೆ.ಈ ವಿದ್ಯಾರ್ಥಿವೇತನವು 11 ಮತ್ತು 12 ನೇ ತರಗತಿಯಲ್ಲಿ ಶಿಕ್ಷಣಕ್ಕೆ ನೆರವಾಗುತ್ತದೆ. ಆದರೆ ವಿದ್ಯಾರ್ಥಿಗಳ ಅಂಕಗಳು ಮತ್ತು ಶುಲ್ಕಗಳಿಗೆ ಸಂಬಂಧಿಸಿದ ಕೆಲವು ಷರತ್ತು ಅನ್ವಯವಾಗುತ್ತದೆ. CBSE-ಸಂಯೋಜಿತ ಶಾಲೆಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತವೆ.

ಅರ್ಹತಾ ಮಾನದಂಡಗಳು ಹೀಗಿವೆ:
# ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ನೀವು 10 ನೇ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
# ಕುಟುಂಬಕ್ಕೆ ಒಂದೇ ಹೆಣ್ಣು ಮಗಳಾಗಿದ್ದು, ಭಾರತೀಯರಾಗಿರಬೇಕು.
# CBSE-ಸಂಯೋಜಿತ ಶಾಲೆಗೆ ಹೋಗುವ ಭಾರತದ ಮಹಿಳಾ ವಿದ್ಯಾರ್ಥಿಯಾಗಿರಬೇಕು.
# ಈ ಶಾಲೆಗಳಲ್ಲಿ ಎನ್‌ಆರ್‌ಐ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು. ಆದರೆ ಅವರ ಬೋಧನಾ ಶುಲ್ಕವು ತಿಂಗಳಿಗೆ 6,000 ರೂ.ಗಿಂತ ಹೆಚ್ಚಿರಬಾರದು.

ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
# ಮೊದಲಿಗೆ CBSE ವೆಬ್‌ಸೈಟ್‌ಗೆ ಭೇಟಿ ನೀಡಿ.
# ಆನ್‌ಲೈನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿಕೊಂಡು ಡಾಕ್ಯುಮೆಂಟ್‌ಗಳು ಮತ್ತು ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಿಕೊಳ್ಳಿ.
# 10 ನೇ ತರಗತಿಯಲ್ಲಿ ನಿಮ್ಮ ಮಾಸಿಕ ಬೋಧನಾ ಶುಲ್ಕವು ರೂ 1,500 ಕ್ಕಿಂತ ಕಡಿಮೆ ಮತ್ತು 11 ಮತ್ತು 12 ನೇ ತರಗತಿಯಲ್ಲಿ 10% ಕ್ಕಿಂತ ಕಡಿಮೆಯಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
# ನೀವು ಅರ್ಜಿ ಸಲ್ಲಿಸಿದ ಬಳಿಕ, ನಿಮ್ಮ ಶಾಲೆಯು ನಿಮ್ಮ ಅರ್ಜಿಯನ್ನು ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 25, 2023 ರ ನಡುವೆ CBSE ವೆಬ್‌ಸೈಟ್‌ನಲ್ಲಿ ಪರಿಶೀಲನೆ ಮಾಡಲಾಗುತ್ತದೆ.

ಇದನ್ನೂ ಓದಿ: Chandrayaan-3: ವಿಕ್ರಮ್, ಪ್ರಗ್ಯಾನ್ ಎಚ್ಚರಗೊಳ್ಳೋದು ಯಾವಾಗ ?! ಬಿಗ್ ಅಪ್ಡೇಟ್ ನೀಡಿದ ಇಸ್ರೋ

Leave A Reply

Your email address will not be published.