Chennai: ಪತ್ನಿ ಲವ್ವರ್ ತಲೆ ಕಡಿದು ಪತ್ನಿಯ ಮನೆಯ ಮುಂದೆ ತಂದು ನಿಲ್ಲಿಸಿದ ಪತಿ !! ನಂತರ ಆದದ್ದು….?!

Tamil Nadu news Man Beheads Wife's Lover Takes Head To Her House in Chennai

Share the Article

Chennai: ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಕ್ರಮ ಸಂಬಂಧದಿಂದ ಬೇತಸ್ತು ಆಕೆಯ ಲವ್ವರ್ ನ ತಲೆಯನ್ನು ಎತ್ತಿಕೊಂಡು ಮನೆಗೆ ಬಂದ ಭೀಭತ್ಸ ಘಟನೆ ನಡೆದಿದೆ(Chennai). ಆರೋಪಿಯನ್ನು ತಮಿಳುನಾಡಿನ ಎಸ್ ವೇಲುಸಾಮಿ ಎಂದು ಗುರುತಿಸಲಾಗಿದೆ. ಡಿ ಮುರುಗನ್ ಕೊಲೆಯಾದಾತ. ಇವರಿಬ್ಬರು ತೆಂಕಾಸಿ ಜಿಲ್ಲೆಯ ಕನ್ನಡಿಕುಲಂ ಗ್ರಾಮದ ನಿವಾಸಿಗಳು.

ವೇಲುಸಾಮಿ ಪತ್ನಿ ಮತ್ತು ಮುರುಗನ್ ಮಧ್ಯೆ ಅಕ್ರಮ ಸಂಬಂಧವಿತ್ತು. ಇದು ವೇಲುಸಾಮಿಗೆ ಗೊತ್ತಾಗಿದ್ದು ಪತ್ನಿಗೆ ಎಚ್ಚರಿಕೆ ನೀಡಿದ್ದ. ಆದರೆ ಆಕೆ ಪತಿಯ ಮಾತನ್ನು ಪತ್ನಿ ಕೇಳದೇ ಮುರುಗನ್ ಜೊತೆ ತನ್ನ ಸಂಬಂಧ ಮುಂದುವರಿಸಿದ್ದಳು. ಹೀಗಾಗಿ ಇಬ್ಬರ ನಡುವೆ ಜಗಳಗಳು ಶುರುವಾದವು. ಕೊನೆಕೊನೆಗೆ ಜಗಳಗಳು ಸಾಮಾನ್ಯವಾದವು.

ಹೀಗೆ ಪದೇ ಪದೇ ಜಗಳವಾಗುತ್ತಿದ್ದರಿಂದ ಪತಿ ಮೇಲೆ ಸಿಟ್ಟು ಮಾಡಿಕೊಂಡ ಪತ್ನಿ ತವರು ಮನೆಯ ಹಾದಿ ಹಿಡಿದಿದ್ದಳು. ಆಗ ರೊಚ್ಚಿಗೆದ್ದ ವೇಲುಸಾಮಿ, ಮುರುಗನ್ ಜೊತೆ ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ಉಗ್ರ ರೂಪ ತಾಳಿದ ವೇಲುಸಾಮಿ ಮುರುಗನ್‍ನ ರುಂಡ-ಮುಂಡ ಬೇರೆ ಬೇರೆ ಮಾಡಿದ್ದಾನೆ. ನಂತರ ಆತನ ದೇಹವನ್ನು ಅಲ್ಲಿಯೇ ಬಿಟ್ಟು, ಮುರುಗನ್ ನ ರುಂಡದೊಂದಿಗೆ ವೇಲು ಸ್ವಾಮಿ ಪ್ರಯಾಣ ಬೆಳೆಸಿದ್ದಾನೆ. ಆತ ಅಲ್ಲಿಂದ ನೇರ ಹೋದದ್ದು ಆತನ ಪತ್ನಿಯ ಮನೆಗೆ.

ಹಾಗೆ ಪತ್ನಿಯ ಮನೆಗೆ ಹೋದವನೇ, ಬ್ಯಾಗಿನಿಂದ ತಲೆ ತೆಗೆದು, ‘ತಗೋ ನಿನ್ನ ಲವ್ವರ್ ತಲೆ ಕಡಿದು ತಂದಿದ್ದೇನೆ’ ಎಂದು ಸಿಟ್ಟಿನಿಂದ ಕಿರುಚಾಡಿದ್ದಾನೆ. ಇತ್ತ ತನ್ನ ಲವ್ವರ್ ನ ತಲೆ ಕಂಡು ಆಕೆ ಗಾಬರಿಯಿಂದ ತಲೆ ತಿರುಗಿ ಸ್ಮೃತಿ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವೇಲುಸಾಮಿಯನ್ನು ಬಂಧಿಸಿದ್ದಾರೆ. ಮತ್ತೊಂದು ಕಡೆ ಪೊಲೀಸರು ಮರಣೋತ್ತರ ಪರೀಕ್ಷೆ ಕಳಿಸಿದ್ದು, ಇತ್ತ ತನಿಖೆಯ ವೇಳೆ ತನ್ನ ಪತ್ನಿ ಮತ್ತು ಇದೀಗ ಕೊಲೆಯಾದ ಮುರುಗನ್ ರ ಅಕ್ರಮ ಸಂಬಂಧದ ಕುರಿತು ಆತ ವಿವರಿಸಿದ್ದಾನೆ.

ಇದನ್ನೂ ಓದಿ : ಮಂಗಳೂರು- ಸುರತ್ಕಲ್ : 20 ನಿಮಿಷ ಪ್ರಯಾಣಿಸಲು ಒಂದು ರೈಲಿಗೆ 45 ನಿಮಿಷ, ಮತ್ತೊಂದಕ್ಕೆ 2 ಗಂಟೆ !! ಅರೆ ಇದೇನಿದು ವಿಚಿತ್ರ?

Leave A Reply