Property Tax: ಗ್ರಾಮೀಣ ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ – ಇನ್ಮುಂದೆ ಜಮೀನಿನ ತೆರಿಗೆಯನ್ನು ಹೀಗೂ ಕಟ್ಟಬಹುದು
Property Tax: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು, ಗ್ರಾಮೀಣ ಜನತೆಗೆ ಸಿಹಿಸುದ್ದಿ ನೀಡಿದೆ. ಹೌದು, ಇನ್ಮುಂದೆ ಆನ್ ಲೈನ್ ಮೂಲಕವೇ ತೆರಿಗೆ (Property Tax) ಪಾವತಿಸುವಂತೆ ಗ್ರಾಮಪಂಚಾಯತಿಗಳಲ್ಲಿ ಡಿಜಿಟಲ್ ಪಾವತಿ ಶುರುವಾಗಲಿದ್ದು, ಕೈ ಬರಹದ ರಶೀದಿಗಳನ್ನು ಕಾಲಕ್ರಮೇಣ ಸ್ಥಗಿತಗೊಳಿಸಲು ವಹಿಸಲಾಗುತ್ತಿದೆ. ಗ್ರಾಮೀಣ ಜನರು ಇನ್ನು ಮುಂದೆ ಸುಲಭವಾಗಿ ಆನ್ ಲೈನ್ ಮೂಲಕವೇ ತೆರಿಗೆ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಗ್ರಾಮೀಣ ಜನತೆಗೆ ಇಲಾಖೆಗಳ ಸೇವೆಗಳ ದಾಖಲೆಗಳನ್ನು ಸುಲಭವಾಗಿ ಮತ್ತು ಸಮೀಪವಾಗಿ ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಒಂದೇ ಸೂರಿನಡಿ ಗ್ರಾಮೀಣ ಜನರ ಅನುಕೂಲಕ್ಕಾಗಿ ಬಾಪೂಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಿದೆ.
ಗ್ರಾಮಪಂಚಾಯಿತಿ ವ್ಯಾಪ್ತಿಯ ತೆರಿಗೆ ಮತ್ತು ಇತರೆ ಫೀಸುಗಳ ಸಂಗ್ರಹ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಿಒಎಸ್ ಯಂತ್ರಗಳನ್ನು ಗ್ರಾಮಪಂಚಾಯಿತಿಗಳಿಗೆ ಒದಗಿಸಿದೆ. ಒಟ್ಟಿನಲ್ಲಿ ಬಾಪೂಜಿ ಸೇವಾ ಕೇಂದ್ರ ಮತ್ತು ಪಿಒಎಸ್ ಯಂತ್ರ ಮತ್ತು ಗೂಗಲ್ ಪೇ, ಪೇಟಿಎಂ ಮೂಲಕ ಪಾವತಿಸಿರುವ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ರಶೀದಿಯನ್ನು ಲಾಗ್ ಇನ್ ಆಗದೇ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಡೌನ್ ಲೋಡ್ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.