Liquor Licence: ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ – ರಾಜ್ಯದಲ್ಲಿ ಇನ್ನೂ ಹೆಚ್ಚಾಗಲಿವೆ ವೈನ್ ಶಾಪ್ ಗಳು !! ನಿಮ್ಮೂರಲ್ಲೂ ಆಗುತ್ತಾ ಓಪನ್ ?!
Karnataka political news Congress government is all set to issue more liquor shop licences in state
Liquor Licence: ರಾಜ್ಯದಲ್ಲಿ ಹೊಸದಾಗಿ ಮದ್ಯ ಮಾರಾಟ(Liquor Sale)ಮಳಿಗೆಗಳ ಲೈಸೆನ್ಸ್ (Liquor Licence)ವಿತರಣೆಗೆ ಅಬಕಾರಿ ಇಲಾಖೆಯಲ್ಲಿ ಪ್ರಸ್ತಾವನೆ ರೆಡಿ ಮಾಡಿದೆ. 389 ಹೆಚ್ಚುವರಿ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ, 3 ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ಪರವಾನಗಿ ಹಾಗೂ ಸೂಪರ್ ಮಾರುಕಟ್ಟೆಗಳಲ್ಲಿ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಬೆಂಗಳೂರು ಮಹಾನಗರ, ಜಿಲ್ಲಾ ಕೇಂದ್ರಗಳ ಸೂಪರ್ ಮಾರುಕಟ್ಟೆ, ಹೈಪರ್ ಮಾರುಕಟ್ಟೆ ಹಾಗೂ ಮಾಲ್‌ಗಳಲ್ಲಿ ಸಿಎಲ್-2 (ಎ) ಎಂಬ ಹೊಸ ಸನ್ನದು ಮಂಜೂರು ಮಾಡ ಲು ಪ್ರಸ್ತಾಪ ಸಲ್ಲಿಸಲಾಗಿದೆ.ಕನಿಷ್ಠ 7,500 ಚದರಡಿ ವಿಸ್ತೀರ್ಣವಿರುವ ಮಾಲ್, ಸೂಪರ್ ಮಾರುಕಟ್ಟೆಗಳಲ್ಲಿ 400 ಚದರಡಿ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಮದ್ಯ ಮಳಿಗೆ ಮಾಡಲು ಅನುಮತಿ ನೀಡಲು ಪ್ರಸ್ತಾಪಿಸಲಾಗಿದೆ.
ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಹೊಸ ಮದ್ಯದಂಗಡಿ ತೆರೆಯಲು ಅವಕಾಶ ನೀಡಬೇಕು. 3 ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಿಎಲ್ -6ಎ, ಸಿಎಲ್ -7, ಸಿಎಲ್ -7ಎ ಸನ್ನದು (ಲೈಸೆನ್ಸ್) ಮಂಜೂರು ಮಾಡಬಹುದು ಎಂದು ಹೇಳಲಾಗಿದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಅಬಕಾರಿ ಇಲಾಖೆಯು ಪ್ರಸ್ತಾವನೆ ರೆಡಿ ಮಾಡಿದ್ದು, ಇದರಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ಲೈಸೆನ್ಸ್ ವಿತರಣೆ ಮಾಡುವ ಬಗ್ಗೆ ಪ್ರಸ್ತಾಪನೆ ಸಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಆರ್.ವಿ.ಬಿ. (ಸ್ವತಂತ್ರ ಬಿಯರ್ ಮಾರಾಟ ಮಳಿಗೆ) ಈ ಹಿಂದೆಯೇ ಸ್ಥಗಿತವಾಗಿದ್ದು, ಪರವಾನಗಿಗಳನ್ನು ಪುನರ್ ವಿತರಣೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಒಟ್ಟು 12,593 ವಿವಿಧ ಪರವಾನಗಿಗಳ ಮದ್ಯ ಮಾರಾಟ ಮಳಿಗೆಗಳಿದ್ದು, ಇದರ ನಡುವೆ ಹೊಸದಾಗಿ 389 ಎಂಎಸ್‌ಐಎಲ್ (ಸಿಎಲ್-11ಸಿ) ಶಾಪ್ ತೆರೆಯಲು ಅನುಮತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಇದರಲ್ಲಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ 91, ಬೆಳಗಾವಿ 20, ಕಲಬುರಗಿ 20, ಹೊಸಪೇಟೆ 22, ಮಂಗಳೂರು 51, ಮೈಸೂರು ನಗರದಲ್ಲಿ 43 ಪರವಾನಗಿ ನೀಡಬಹುದು ಎಂದು ಅಬಕಾರಿ ಇಲಾಖೆ ಪ್ರಸ್ತಾವನೆಯಲ್ಲಿ ಹೇಳಲಾಗಿದೆ.
ರಾಜ್ಯದಲ್ಲಿ ಪರವಾನಗಿದಾರರ ಅಥವಾ ಸನ್ನದುದಾರರ ಬದಲಿಗೆ ಬೇನಾಮಿ ವ್ಯಕ್ತಿಗೆ ಗುತ್ತಿಗೆ ನೀಡಿ ಸುಮಾರು ಶೇ.40ರಷ್ಟು ಮಳಿಗೆಗಳು ನಡೆಯುತ್ತಿದ್ದು, ಇವುಗಳನ್ನು ಸನ್ನದು ಶುಲ್ಕ ಹಾಗೂ ಹೆಚ್ಚುವರಿ ಶೇ.25ರಷ್ಟು ಶುಲ್ಕ ಪಾವತಿಸಿ ಸಕ್ರಮಗೊಳಿಸಲು ಅವಕಾಶವಿದೆ. ಇನ್ನು ಸನ್ನದು ವರ್ಗಾವಣೆ ಶುಲ್ಕ ನಾಲ್ಕು ಪಟ್ಟು ಏರಿಕೆ ಮಾಡಬಹುದು. ಪ್ರಸ್ತುತ ಸ್ಥಗಿತಗೊಂಡ ಸನ್ನದುದಾರರಿಗೆ ಒಂದು ತಿಂಗಳ ನೋಟಿಸ್ ನೀಡಿ ಮತ್ತೆ ಸಕ್ರಿಯಗೊಳಿಸಲು ಬಾರದಿದ್ದರೆ ಹರಾಜು ಮಾಡಲು ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆ.
ಇದನ್ನೂ ಓದಿ: ಹಳೇ ವಾಹನ ಇರುವವರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ- ಸಂಪುಟ ಸಭೆಯಲ್ಲಿ ಆಯ್ತೊಂದು ಮಹತ್ವದ ನಿರ್ಧಾರ !!