Jharkhand: ವಾಕಿಂಗ್‌ಗೆ ತೆರಳಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ! ಮದುವೆಯಾಗಬೇಕಿದ್ದ ಯುವಕ ಜೊತೆಗಿದ್ದಾಗಲೇ ನಡೆಯಿತು ಘೋರ ಘಟನೆ!!
Jharkhand news women out for walk with fiance gangraped in West Singhbhum 5 arrested


Jharkhand: ಹೆಣ್ಮಕ್ಕಳ ಮೇಲೆ ಅತ್ಯಾಚಾರ ಮಾಡಿದರೆ ನ್ಯಾಯಾಲಯದಲ್ಲಿ ಇದಕ್ಕೆ ಕಠಿಣ ಶಿಕ್ಷೆ ಇದ್ದರೂ ಕೂಡಾ ಎಗ್ಗಿಲ್ಲದೆ ಅಲ್ಲಲ್ಲಿ ಅತ್ಯಾಚಾರ ಘಟನೆ ನಡೆಯುವ ಪ್ರಸಂಗಗಳು ನಡೆಯುತ್ತಲೇ ಇದೆ. ಇದೀಗ ತಾನು ಮದುವೆಯಾಗಬೇಕಿದ್ದ ಹುಡುಗನೊಂದಿಗೆ ವಾಕಿಂಗ್‌ಗೆಂದು ತೆರಳಿದ್ದಾಗ ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಜಾರ್ಖಂಡ್‌ನ( Jharkhand) ಪಶ್ಚಿಮ ಸಿಂಗ್‌ಭೂಮ್‌ನಲ್ಲಿ ನಡೆದಿದೆ.

ಈ ಘಟನೆ ಗುರುವಾರ ಸಂಜೆ ನಡೆದಿದ್ದು, ಇಬ್ಬರೂ ವಾಕ್ ಮಾಡುವ ಸಂದರ್ಭ ನಡೆದಿದೆ.
ಅತ್ಯಾಚಾರ ಮಾಡಿದ್ದಲ್ಲದೆ ಯುವತಿಯಲ್ಲಿದ್ದ ಮೊಬೈಲ್, ಬ್ಯಾಗ್ ಅನ್ನು ಕೂಡಾ ಕದ್ದೊಯ್ದಿದ್ದಾರೆ. ರೇಪ್ ಮಾಡಿ ನಂತರ ಆಕೆಯನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ. ಯುವಕ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸರಿಗೆ ಕರೆ ಮಾಡಿದ್ದಾನೆ. ಪೊಲೀಸರು ಕೂಡಲೇ ಸ್ಥಳಕ್ಕೆ ಬಂದಿದ್ದು, ಯುವತಿಯನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗಾಗಿ ಕಳುಹಿಸಿದ್ದಾಗಿ ಎಸ್ಪಿ ಅಶುತೋಷ್ ಶೇಖರ್ ತಿಳಿಸಿದ್ದಾರೆ. ಹಾಗೂ ಯುವತಿ ನೀಡಿದ ಮಾಹಿತಿ ಮೇರೆ ಪೊಲೀಸರು ಶುಕ್ರವಾರ ಕಿಟಗುತ್ತು ಗ್ರಾಮದ ಐವರನ್ನು ಬಂಧಿಸಿದ್ದಾರೆ. ಹಾಗೂ ಅವರಿಂದ ಯುವತಿಯ ಮೊಬೈಲ್, ಬ್ಯಾಗ್‌ನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಂಗಳೂರು -ಸುಬ್ರಹ್ಮಣ್ಯ ರಸ್ತೆಗೆ ಪ್ರತಿದಿನ ಪ್ಯಾಸೆಂಜರ್ ರೈಲು – ನಳಿನ್ ಕುಮಾರ್ ಕಟೀಲ್
