Hyderabad: ಕಣ್ಣು ಮಿಟುಕಿಸುಷ್ಟರಲ್ಲಿ ಗಣೇಶನೆದುರಿದ್ದ 11 ಕೆಜಿ ಲಾಡು ಮಾಯ – ಸಿಸಿಟಿವಿಯಲ್ಲಿ ಸೆರೆಯಾಯ್ತು ಅಚ್ಚರಿ ನೆರಳಿನ ಆಕೃತಿಯ ದೃಶ್ಯ !! ವೈರಲ್ ಆಯ್ತು ವಿಡಿಯೋ

Hyderabad news devotees left astonished as 11 kg laddu offered to Lord Ganesha vanishes

Hyderabad: ಇಡೀ ದೇಶವೇ ಸಂಭ್ರಮದಿಂದ ಆಚರಿಸುವಂತ ಕೆಲವೇ ಕೆಲವು ಹಬ್ಬಗಳಲ್ಲಿ ಗೌರಿ ಗಣೇಶ ಹಬ್ಬ ಕೂಡ ಒಂದು. ಕೆಲವು ದಿನಗಳ ಹಿಂದಷ್ಟೇ ನಾಶು ಈ ಗೌರಿ ಗಣೇಶ ಹಬ್ಬವನ್ನು ಬಹಳ ವಿಜೃಂಭಣೆಯಿಂದ, ಸಂಭ್ರಮದಿಂದ ಆಚರಿಸಿ ಎಲ್ಲರೂ ಸಂತೋಷಪಟ್ಟಿದ್ದೇವೆ. ಈಗಾಗಲೇ ಕೆಲವರು ಮೂರ್ತಿಯನ್ನು ವಿಸರ್ಜನೆ ಕೂಡ ಮಾಡಿದ್ದಾರೆ. ಅದರಲ್ಲೂ ಹೈದರಾಬಾದ್(Hyderabad) ಕಡೆಗಳಲ್ಲಿ ಈ ಹಬ್ಬವನ್ನು ದೊಡ್ಡ ಜಾತ್ರೆಯ ಹಾಗೆ ಆಚರಿಸುತ್ತಾರೆ. ಇದೆಲ್ಲದರ ನಡುವೆ ಈ ಗಣೇಶ ಪ್ರತಿಷ್ಠಾಪನೆ ಬಳಿಕ ಇದೇ ಹೈದರಾಬಾದ್ ನಲ್ಲಿ ವಿಚಿತ್ರವಾದ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಮುತ್ತಿನ ನಗರಿ ಎಂದೆ ಖ್ರಾತಿಗಳಿಸಿರುವ ಹೈದರಾಬಾದ್​ನಲ್ಲಿ ಗಣೇಶ ಹಬ್ಬ ಅಂದ್ರೆ ದೊಡ್ಡ ಜಾತ್ರೆ. ಇಂತಹ ಸಂಭ್ರಮದ ನಡವೆ ಇಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಘಟನೆಯೊಂದು ನಡೆದಿದೆ. ಇದನ್ನು ನೋಡಿದವರು ಒಂದು ರೀತಿಯಲ್ಲಿ ಪವಾಡ ಎಂದೇ ಹೇಳಬಹುದು. ಯಾಕೆಂದರೆ ಗಣಪತಿ ಮೂರ್ತಿಗೆ ಅರ್ಪಿಸಿದ್ದ 11 ಕೆಜಿ ಗಾತ್ರದ ಲಡ್ಡು, ಕಣ್ಣು ಮಿಟುಕಿಸುವಷ್ಟರಲ್ಲಿ ಮಾಯವಾಗಿದೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಚ್ಚರಿಯ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ನೋಡಿದವರೆಲ್ಲರೂ ತುಂಬಾ ಅಚ್ಚರಿಗೆ ಒಳಗಾಗಿದ್ದಾರೆ.

ಏನಿದು ಘಟನೆ?
ಗಣೇಶ ಚತುರ್ಥಿಯಂದು ಹೈದರಾಬಾದ್​ನ ಮಿಯಾಪುರ್​ ಏರಿಯಾದಲ್ಲಿ ಓಂಕಾರ ಸೇವಾ ಸಮಿತಿಯು ಮದಿನಾಗುಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಣಪತಿ ಉತ್ಸವನ್ನು ಅದ್ಧೂರಿಯಾಗಿ ಆಚರಿಸತು. ಸೆ.20ರಂದು ಬೆಳಗ್ಗೆ 4.15ರ ವೇಳೆ ಗಣೇಶನ ಮೂರ್ತಿಗೆ 11 ಕೆಜಿ ಗಾತ್ರದ ಲಾಡು ಪ್ರಸಾದವನ್ನು ಅರ್ಪಿಸಲಾಯಿತು. ಅನಂತರ ಭಕ್ತರಿಂದ ದೇವರ ದರ್ಶನ ಮುಗಿದ ಬಳಿಕ ಗಣಪರಿ ಪೆಂಡಾಲ್​ನಲ್ಲಿ ಭದ್ರತೆಗೆಂದು ಸಮಿತಿ ವತಿಯಿಂದ ಇಬ್ಬರನ್ನು ನಿಯೋಜಿಸಲಾಗಿತ್ತು. ಇಬ್ಬರನ್ನು ಭದ್ರತೆಗೆ ನಿಯೋಜಿಸಿದ್ದರೂ ಅವರು ಕಣ್ಣು ಮಿಟುಕಿಸುವಸ್ಟರಲ್ಲಿ ಬೆಲೆಬಾಳುವ ಲಡ್ಡುವು ಗಣೇಶನ ಮುಂದೆ ಅದರ ಪವಿತ್ರ ಸ್ಥಾನದಿಂದ ಕಣ್ಮರೆಯಾಯಿತು. ಈ ವಿಚಾರ ಗೊತ್ತಾಗಿ ಸ್ಥಳದಲ್ಲಿ ಕೋಲಾಹಲವೇ ಭುಗಿಲೆದ್ದಿತು.

ಇದೇ ಸಮಯಕ್ಕೆ ಓರ್ವ ವ್ಯಕ್ತಿ ಘಟನೆಗೆ ಸಾಕ್ಷಿಯಾಗಿ ಬಂದನು. ಆತನ ಹೇಳಿಕೆಯ ಆಧಾರದ ಮೇಲೆ, ಭಕ್ತರು ಕಳ್ಳತನದ ದೂರನ್ನು ಸಲ್ಲಿಸಿದರು. ಸ್ಥಳೀಯ ಅಧಿಕಾರಿಗಳು ನಿಗೂಢವಾಗಿ ಕಣ್ಮರೆಯಾದ ಲಾಡುವಿನ ಬಗ್ಗೆ ತನಿಖೆ ಆರಂಭಿಸಿದರು. ತನಿಖೆ ವೇಳೆ ಅಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ನೋಡುಗರಿಗೇ ದೊಡ್ಡ ಆಘಾತ ಎದುರಾಗಿದೆ. ಅಲ್ಲಿದ್ದ ದೃಶ್ಯ ಎಲ್ಲರನ್ನೂ ಒಮ್ಮೆ ಬೆಚ್ಟಿಬೀಳಿಸಿದೆ.

ಸಿಸಿಟಿವಿಯಲ್ಲಿ ನೆರಳಿನ ಆಕೃತಿಯ ದೃಶ್ಯ ಸೆರೆ!:
ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ 4.20ಕ್ಕೆ ಗಣಪತಿ ಪೆಂಡಾಲ್​ ಅನ್ನು ಪ್ರವೇಶಿಸುವ ನೆರಳಿನ ಆಕೃತಿಯ ದೃಶ್ಯ ಸೆರೆಯಾಗಿದೆ. ನೆರಳಿನ ದೃಶ್ಯ ಲಡ್ಡುವಿನೊಂದಿಗೆ ಅವಸರವಾಗಿ ಪೆಂಡಾಲ್​ನಿಂದ ನಿರ್ಗಮಿಸಿದೆ. ಈ ಆಘಾತಕಾರಿ ದೃಶ್ಯ ಎಲ್ಲರನ್ನೂ ಅಚ್ಚರಿಗೆ ದೂಡಿದೆ. ಸಮಿತಿಯು ಮಿಯಾಪುರ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದೆ. ಯಾರೋ ಖದೀಮ ಲಾಡನ್ನು ಕದ್ದಿರುವ ಶಂಕೆ ವ್ಯಕ್ತವಾಗಿದೆ. ಆದರೂ, ಈ ಪ್ರಕರಣದ ನಿಗೂಢತೆ ಇನ್ನಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ISRO: ಇಸ್ರೋಗೆ ಭಾರೀ ದೊಡ್ಡ ಆಘಾತ – ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಸಿಗ್ನಲ್ ಕಡಿತ ?!

Leave A Reply

Your email address will not be published.