Rakshith Shetty: ಸದ್ಯದಲ್ಲೇ ನಟ ರಕ್ಷಿತ್ ಶೆಟ್ಟಿ ಮದುವೆ ?! ಇವರೇನಾ ಸಿಂಪಲ್ ಸ್ಟಾರ್ ಕೈ ಹಿಡಿಯೋ ಲಕ್ಕಿ ಗರ್ಲ್ ?!

Entertainment Sandalwood news actor Rakshit Shetty is likely to get married soon

Rakshith Shetty: ಕಿರಿಕ್ ಪಾರ್ಟಿ(Kirik Party) ಮೂಲಕ ಸದ್ದು ಮಾಡಿದ ಸೈಲೆಂಟ್ ಬಾಯ್ ರಕ್ಷಿತ್ ಶೆಟ್ಟಿ(Rakshith Shetty)ಯವರ 777 ಚಾರ್ಲಿ’ ತೆರೆ ಕಂಡ ಬಳಿಕ ಸಿಂಪಲ್ ಸ್ಟಾರ್ ನಟನೆಗೆ ಎಲ್ಲೆಡೆ ಮೆಚ್ಚುಗೆಯ ಸುರಿಮಳೆ ಹರಿದುಬಂದದ್ದು ಮಾತ್ರವಲ್ಲ ದೊಡ್ಡ ಮಟ್ಟದ ನೇಮ್ ಫೇಮ್ ಕೂಡ ಬಂದಿದ್ದು ಸುಳ್ಳಲ್ಲ. ಈ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದ್ದು, ಸದ್ಯ, ರಕ್ಷಿತ್ ಶೆಟ್ಟಿ ಅವರ ಹೊಸ ಸಿನಿಮಾ ‘ಸಪ್ತಸಾಗರದಾಚೆ ಎಲ್ಲೋ’ (Sapta Sagaradaache Yello) ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರವು ಸಪ್ತ ಸಾಗರ ದಾಟಲು ಎಂಬ ಹೆಸರಿನೊಂದಿಗೆ ತೆಲುಗಿನಲ್ಲಿ ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿದೆ.

ಈ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ರಕ್ಷಿತ್ ಶೆಟ್ಟಿ ಹಲವು ಕುತೂಹಲಕಾರಿ ವಿಚಾರಗಳನ್ನು ಶೇರ್ ಮಾಡಿದ್ದು, ಇದೆ ವೇಳೆ ಮದುವೆ ಬಗ್ಗೆ ಕೂಡ ರಿವಿಲ್ ಮಾಡಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಕೂಡ ನಡೆದು, ಕೆಲ ದಿನಗಳಲ್ಲೇ ಈ ನಿಶ್ಚಿತಾರ್ಥ ಮುರಿದುಬಿತ್ತು. ಈ ಎಲ್ಲ ಕಹಾನಿ ಬಳಿಕ ಇದೀಗ ಮತ್ತೊಮ್ಮೆ ರಕ್ಷಿತ್ ಶೆಟ್ಟಿ ಮದುವೆ ವಿಚಾರ ಮುನ್ನಲೆಗೆ ಬಂದಿದೆ.

ಕನ್ನಡ ಚಲನಚಿತ್ರೋದ್ಯಮದ ಯಶಸ್ವಿ ನಟ ಮತ್ತು ನಿರ್ಮಾಪಕರಾಗಿ ಖ್ಯಾತಿ ಪಡೆದಿದ್ದು, ಕಿರಿಕ್ ಪಾರ್ಟಿ ಮತ್ತು ಉಳಿದವರು ಕಂಡಂತೆ ಸಿನಿಮಾಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ತೆಲುಗಿನಲ್ಲಿ ಕನ್ನಡ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್, ಇತ್ತೀಚೆಗೆ ತೆರೆಕಂಡ ಹಾಸ್ಟೆಲ್ ಹುಡುಗರು ಸಿನಿಮಾ, ಇದೀಗ ಮತ್ತೊಂದು ಕನ್ನಡ ಚಿತ್ರ ತೆಲುಗಿಗೆ ಎಂಟ್ರಿ ಕೊಡುತ್ತಿದೆ. ಸಂದರ್ಶನವೊಂದರಲ್ಲಿ ರಕ್ಷಿತ್‌ ಶೆಟ್ಟಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದು, ಮದುವೆ ಯಾವಾಗ ಎಂಬ ಪ್ರಶ್ನೆ ಕೇಳಲಾಗಿದೆ. ಈ ಸಂದರ್ಭ ರಕ್ಷಿತ್ ಶೆಟ್ಟಿ ಕೊಟ್ಟ ಉತ್ತರ ಕೇಳಿ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಶೀಘ್ರದಲ್ಲೇ ಮದುವೆಯಾಗುವ ಬಗ್ಗೆ ರಕ್ಷಿತ್ ಶೆಟ್ಟಿ ಹಿಂಟ್ ನೀಡಿದ್ದು, ಸದ್ಯದಲ್ಲೇ ಹುಡುಗಿಯ ವಿವರ ಕೂಡ ಹೊರಬೀಳಲಿದೆ ಎನ್ನುವ ಮೂಲಕ ಎಲ್ಲರ ತಲೆಗೂ ಹುಳ ಬಿಟ್ಟಿದ್ದಾರೆ.

ಇದನ್ನೂ ಓದಿ: ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ – ರಾಜ್ಯದಲ್ಲಿ ಇನ್ನೂ ಹೆಚ್ಚಾಗಲಿವೆ ವೈನ್ ಶಾಪ್ ಗಳು !! ನಿಮ್ಮೂರಲ್ಲೂ ಆಗುತ್ತಾ ಓಪನ್ ?!

Leave A Reply

Your email address will not be published.