

Girls Fight: ಸೋಷಿಯಲ್ ಮೀಡಿಯಾದಲ್ಲಿ (Social Media)ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್( Viral News) ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ವಿಚಾರವೊಂದು ನೆಟ್ಟಿಗರ ಗಮನ ಸೆಳೆದಿದೆ. ಶಾಲಾ ಬಾಲಕಿಯರ ತಂಡವೊಂದು ರಸ್ತೆ ಎಂಬುದನ್ನೇ ಮರೆತು ಕಿತ್ತಾಡಿರುವ(Girls Fight)ವೀಡಿಯೋ ವೈರಲ್ ಆಗಿದೆ.
ಶಾಲಾ ಬಾಲಕಿಯರ ಸೆಪ್ಟೆಂಬರ್ 20 ರಂದು ಪೋಸ್ಟ್ ಮಾಡಿದ ವಿಡಿಯೋ ಒಂದರಲ್ಲಿ ಶಾಲಾಬಾಲಕಿಯರ ಎರಡು ಗುಂಪುಗಳು ಬೀದಿಜಗಳಕ್ಕೆ ಇಳಿದಿದ್ದು, ಕೆಲವರು ಈ ವಿಡಿಯೋ ನೋಡಿ ಗಾಬರಿಗೊಂಡಿದ್ದಾರೆ. ಶಾಲಾಬಾಲಕಿಯರನ್ನು ಈ ಮಟ್ಟಕ್ಕೆ ಪ್ರಚೋದಿಸಿದ ವಿಷಯವಾದರು ಏನು? ಬೀದಿಯಲ್ಲಿ ರಣರಂಪಮಾಡುವ ಮಟ್ಟಿಗೆ ಅವರು ಕೋಪಗೊಂಡಿದ್ದು ಯಾಕೆ? ಎಂಬ ಪ್ರಶ್ನೆ ಸಹಜವಾಗಿ ನೆಟ್ಟಿಗರಲ್ಲಿ ಕಾಡುತ್ತಿದೆ. ನಿಜಕ್ಕೂ ಈ ವಿಡಿಯೋ ನೋಡುವವರಿಗೆ ಆತಂಕ ಮೂಡಿಸುತ್ತದೆ. ಈ ವಿಡಿಯೋ ದೆಹಲಿಯ ಮೂಲದ್ದು ಎಂದು ಹೇಳಲಾಗುತ್ತಿದ್ದು, ಅನೇಕರು ಈ ವಿಡಿಯೋಗೆ ತಮಾಷೆಯಿಂದ ಪ್ರತಿಕ್ರಿಯಿಸಿದ್ದಾರೆ.
ಆದರೆ, ಅಸಲಿಗೆ ಇದು ಮನರಂಜನೆಗೆ ಮಾಡಿದ ಹೊಡೆದಾಟ ಎನ್ನಲಾಗಿದ್ದು, ಸ್ವಲ್ಪ ಬ್ರೇಕ್ ತಗೊಂಡು ಹೊಡೆದಾಡಿ, ಮತ್ತೆ ಬ್ರೇಕ್ ತಗೊಳ್ಳಿ ಮತ್ತೆ ಹೊಡೆದಾಡಿ. ಹೀಗೆ ಹೊಡೆದಾಡುತ್ತ ಯಾವ ಗುಂಪು ಚೆನ್ನಾಗಿ ಹೊಡೆದಾಡುತ್ತಿದೆ ಮತ್ತು ಹೆಚ್ಚು ಮನೋರಂಜನೆ (Entertainment) ನೀಡುತ್ತದೆ ಎಂದು ನೋಡಲು ಮಾಡಿದ ಕಸರತ್ತು ಎನ್ನಲಾಗಿದೆ. ಆದರೆ, ಈ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ಮಕ್ಕಳ ಹೊಡೆದಾಟ ಬಡಿದಾಟ ನೋಡಿ ಕಳವಳ ವ್ಯಕ್ತಪಡಿಸಿದ್ದು,1 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಜನ್ಸ್ ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ.
https://twitter.com/gharkekalesh/status/1704364607727628451?ref_src=twsrc%5Etfw%7Ctwcamp%5Etweetembed%7Ctwterm%5E1704364607727628451%7Ctwgr%5E98456c76ccdf246daf01ef5079fd198588b82ed7%7Ctwcon%5Es1_c10&ref_url=https%3A%2F%2Fapi-news.dailyhunt.in%2F
ಇದನ್ನೂ ಓದಿ: ಒಂದೊಂದೇ ಬಯಲಾಗ್ತಿದೆ ಹಾಲವೀರಪ್ಪನ ಕರ್ಮಖಾಂಡ- ಪ್ರಧಾನಿ ಹೆಸರಿನಲ್ಲೇ 1.50 ಕೋಟಿ ಪಡೆದಿದ್ದ ಅಭಿನವ ಹಾಲಶ್ರೀ –













