Shivamogga: ಎರಡು ಬಣಗಳ ನಡುವೆ ಮಾರಾಮಾರಿ- ಐದು ಮಂದಿಗೆ ಚಾಕು ಇರಿತ !

shivamogga news crime news five stabbed in fighting between two groups latest news

Share the Article

Shivamogga: ಶಿವಮೊಗ್ಗದ (Shivamogga)ಆಲ್ಕೊಳ ಸರ್ಕಲ್‌ ಸಮೀಪ ಎಲ್‌ಐಸಿ ಕಚೇರಿ ಬಳಿ ಹಳೆ ಎರಡು ಬಣಗಳ ನಡುವೆ ಹಳೆ ದ್ವೇಷದ ಹಿನ್ನೆಲೆ ಗಲಾಟೆ ನಡೆದಿದ್ದು(Clash)ಐದು ಮಂದಿಗೆ ಚಾಕು ಇರಿದ ಘಟನೆ ನಡೆದಿದೆ.

ಗುರುವಾರ ಮಧ್ಯರಾತ್ರಿ ವೇಳೆಗೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಪವನ್‌ ಮತ್ತು ಕಿರಣ್‌ ಎಂಬ ಸ್ನೇಹಿತರ ನಡುವೆ ಹಳೆಯ ವೈಷಮ್ಯವಿತ್ತು. ಈ ವಿಚಾರವಾಗಿ ಕಳೆದ ರಾತ್ರಿ ನೇತಾಜಿ ಸರ್ಕಲ್‌ನಲ್ಲಿ ಗಲಾಟೆ ನಡೆದಿದ್ದು, ಪವನ್‌ ಮತ್ತು ಆತನ ಜೊತೆಗಿದ್ದ ಮಂದಿ ಕಿರಣ್‌ ಮತ್ತು ಆತನ ಸ್ನೇಹಿತರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಘಟನೆ ವೇಳೆ ಗಾಯಗೊಂಡ ಗಾಯಾಳುಗಳನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Leave A Reply