Pradhan Mantri Scholarship 2023: ಪ್ರಧಾನಮಂತ್ರಿಗಳ ವಿದ್ಯಾರ್ಥಿವೇತನ; ವಿದ್ಯಾರ್ಥಿಗಳೇ ಸಿಗಲಿದೆ ವರ್ಷಕ್ಕೆ Rs.36000 ಸ್ಕಾಲರ್‌ಶಿಪ್‌; ಈ ಕೂಡಲೇ ಅರ್ಜಿ ಸಲ್ಲಿಸಿ!!!

Pradhan Mantri Scholarship 2023: ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಎಸ್ ಬಿಐ, ಹೆಚ್‌ಡಿಎಫ್‌ಸಿ ಬ್ಯಾಂಕ್ ಗಳು ಹಾಗೆ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಸ್ಕಾಲರ್‌ಶಿಪ್‌ ಮೂಲಕ ಮಕ್ಕಳ ಓದುವ ಕನಸಿಗೆ ಆಸರೆಯಾಗುತ್ತಿದೆ. ಇದೀಗ, ಪ್ರಧಾನ ಮಂತ್ರಿಗಳ ವಿದ್ಯಾರ್ಥಿವೇತನ ಯೋಜನೆಗೆ(Pradhan Mantri Scholarship 2023)ಅರ್ಜಿ ಆಹ್ವಾನ ಮಾಡಲಾಗಿದೆ.

Sadananda Gowda: ಚುನಾವಣಾ ರಾಜಕೀಯದಿಂದ ನಾ ದೂರ-ಡಿ.ವಿ.ಸದಾನಂದ ಗೌಡ

2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಶಿಕ್ಷಣ / ತಾಂತ್ರಿಕ ಶಿಕ್ಷಣಕ್ಕೆ ಸೇರಿದ ವಿದ್ಯಾರ್ಥಿಗಳಿಗೆ (Students)ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಪ್ರಧಾನ ಮಂತ್ರಿಗಳ ವಿದ್ಯಾರ್ಥಿವೇತನ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ರೂ.30,000 ಹಾಗೂ ವಿದ್ಯಾರ್ಥಿನಿಯರಿಗೆ ರೂ.36,000 ವಾರ್ಷಿಕ ಸ್ಕಾಲರ್‌ಶಿಪ್‌ ನೀಡಲಾಗುತ್ತಿದೆ.

NTK Party In Krishnagiri: ಕಾಡುಗಳ್ಳ ವೀರಪ್ಪನ್‌ ಪುತ್ರಿಗೆ ಕೃಷ್ಣಗಿರಿಯಲ್ಲಿ ಎನ್‌ಟಿಕೆ ಪಕ್ಷದಿಂದ ಸ್ಪರ್ಧೆ

ಪ್ರಧಾನಮಂತ್ರಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ ಮಾಡಲಾಗಿದ್ದು, ಕೇಂದ್ರೀಯ ಸೈನಿಕ ಮಂಡಳಿ (KSB) ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಮಾನ್ಯತೆ ಪಡೆದ ಕೋರ್ಸ್‌ಗಳಲ್ಲಿ ವೃತ್ತಿ ಶಿಕ್ಷಣ ಮಾಡುವವರು / ತಾಂತ್ರಿಕ ಪದವಿ ಶಿಕ್ಷಣ ಪಡೆಯುತ್ತಿರುವ ಮಾಜಿ ಸೈನಿಕರು ಮತ್ತು ಭಾರತೀಯ ಕರಾವಳಿ ಕಾವಲು ಪಡೆಯ ಮಾಜಿ ಸಿಬ್ಬಂದಿಯ ಅರ್ಹ ಮಕ್ಕಳು /ವಿಧವೆಯರಿಂದ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು 30-11-2023 ಕೊನೆಯ ದಿನಾಂಕವಾಗಿದೆ.

ಈ ವಿದ್ಯಾರ್ಥಿವೇತನ ಮಾಜಿ ಸೈನಿಕರ (ಭೂಸೇನೆ/ ನೌಕಾದಳ/ವಾಯುಪಡೆ/ ಕರಾವಳಿ ಕಾವಲು ಪಡೆ) ಮಕ್ಕಳು/ ವಿಧವೆಯರಿಗೆ ಮಾತ್ರ ಇದೆ. ಸಾಮಾನ್ಯ ನಾಗರಿಕರ ಮಕ್ಕಳು ಅರ್ಜಿ ಸಲ್ಲಿಸುವಂತಿಲ್ಲ.

ವಿದ್ಯಾರ್ಥಿಗಳು ಕೇಂದ್ರೀಯ ಸೈನಿಕ ಬೋರ್ಡ್‌ ವೆಬ್‌ಸೈಟ್‌ www.ksb.gov.in ಮೂಲಕ ಈ ಕುರಿತ ಮಾಹಿತಿಗಳನ್ನು ಕೂಲಂಕುಶವಾಗಿ ಪರಿಶೀಲಿಸಬಹುದು.

ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?
# ಬಿಇ, ಬಿ.ಟೆಕ್, ಬಿಡಿಎಸ್, ಎಂಬಿಬಿಎಸ್, ಬಿ.ಇಡಿ, ಬಿಬಿಎ, ಬಿಸಿಎ, ಬಿ.ಫಾರ್ಮಾ ಮತ್ತು ಇತರೆ ಕೋರ್ಸ್ ಮಾಡುವವರು ಅರ್ಜಿ ಸಲ್ಲಿಸಬಹುದು.
# ಎಂಬಿಎ, ಎಂಸಿಎ ಹೊರತುಪಡಿಸಿ ಇತರೆ ಮಾಸ್ಟರ್‌ ಡಿಗ್ರಿ ಕೋರ್ಸ್‌ ಗಳನ್ನು ಓದುವವರು ಅರ್ಹರಲ್ಲ.
# ಅಬ್ರಾಡ್‌ನಲ್ಲಿ ಓದುತ್ತಿರುವವರು ಅರ್ಜಿಗೆ ಅರ್ಹರಲ್ಲ.

ಕೋರ್ಸ್‌ ಅವಧಿಗೆ ಅನುಗುಣವಾಗಿ 1-5 ವರ್ಷದವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಒಟ್ಟು 5500 ಅಭ್ಯರ್ಥಿಗಳಿಗೆ ಈ ಸ್ಕಾಲರ್‌ಶಿಪ್‌ ನೀಡಲಾಗುತ್ತದೆ. 2750 ಪುರುಷ ಅಭ್ಯರ್ಥಿಗಳಿಗೆ, 2750 ಮಹಿಳಾ ಅಭ್ಯರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ರೂ.30000 ಪ್ರತಿ ವರ್ಷಕ್ಕೆ(ಮಾಸಿಕ ರೂ.2500)ನೀಡಲಾಗುತ್ತದೆ. ವಿದ್ಯಾರ್ಥಿನಿಯರಿಗೆ ರೂ.36000 ಪ್ರತಿ ವರ್ಷಕ್ಕೆ(ಮಾಸಿಕ ರೂ.3000) ನೀಡಲಾಗುತ್ತದೆ.

Leave A Reply

Your email address will not be published.