BJP ಕಾರ್ಯಕರ್ತನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಕೈ ಕಾಲು ಮುರಿದುಕೊಂಡ!

Political news BJP worker breaks hands and legs while trying to escape from police

Bjp worker: ಬಿಜೆಪಿ ಕಾರ್ಯಕರ್ತನೊಬ್ಬ (Bjp worker) ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕೈ-ಕಾಲು ಮುರಿದುಕೊಂಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಪೋಲಿಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ (escape from police)ಆರೋಪಿಯನ್ನು ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಮಹಾಂತೇಶ್ ಎಂದು ಗುರುತಿಸಲಾಗಿದೆ. ಬಿಜೆಪಿ ಕಾರ್ಯಕರ್ತನಾದ ಮಹಾಂತೇಶ್ ವಿದ್ಯುತ್ ಬಿಲ್ ವಿಚಾರಕ್ಕೆ ಸಂಬಂಧಿಸಿದಂತೆ ಜೆಸ್ಕಾಂ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದ. ಈ ನಡುವೆ, ಒಂದು ತಿಂಗಳ ವಿದ್ಯುತ್ ಬಿಲ್ 8 ಸಾವಿರ ಬಂದಿದ್ದನ್ನು ಪ್ರಶ್ನಿಸಿ ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ. ಇದೇ ಸಂದರ್ಭ ಜೆಸ್ಕಾಂ ಎಇಇ ಚಿದಾನಂದ ಹಾಗೂ ಮಹಾಂತೇಶ್‌ ಮಧ್ಯೆ ಗಲಾಟೆ ನಡೆದಿದೆ. ಹೀಗಾಗಿ, ಅಫಜಲಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು ದಾಖಲಾಗಿತ್ತು.

ಅಫಜಲಪುರ ಪೊಲೀಸರು ದೂರು ದಾಖಲಿಸಿಕೊಂಡು ಮಹಾಂತೇಶ್‌ನನ್ನು ಬಂಧಿಸಿ, ಕಲಬುರಗಿಗೆ ಕರೆ ತಂದಿದ್ದು, ಆದರೆ, ಈ ನಡುವೆ ಊಟಕ್ಕಾಗಿ ಹೋಟೆಲ್‌ಗೆ ಕರೆದೊಯ್ದ ಸಂದರ್ಭ ಮಹಾಂತೇಶ್‌ ಎಸ್ಕೇಪ್‌ ಆಗಲು ಮುಂದಾಗಿದ್ದಾನೆ. ಹೋಟೆಲ್‌ನ ಅಡುಗೆ ರೂಮಿನಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದು, ಈ ಸಂದರ್ಭ 2ನೇ ಮಹಡಿಯಿಂದ ಬಿದ್ದು ಕೈ- ಕಾಲು ಮುರಿದುಕೊಂಡ ಘಟನೆ ನಡೆದಿದೆ. ಸದ್ಯ ಪೊಲೀಸರು ಗಾಯಾಳು ಮಹಾಂತೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ, ಆರೋಪಿ ಪರಾರಿಯಾಗಲು ಯತ್ನಿಸಿದ ಕುರಿತು ಕೂಡ ಪ್ರಕರಣ ದಾಖಲಾಗುವ ಸಂಭವವಿದೆ.

ಇದನ್ನೂ ಓದಿ: Yatindra Siddaramaiah: ಸಿದ್ದು ಕುಕ್ಕರ್, ಐರನ್ ಬಾಕ್ಸ್ ಹಂಚಿಕೆ ಪ್ರಕರಣ- ತಕ್ಕ ಉತ್ತರ ಕೊಟ್ಟು ಎಲ್ಲರ ಬಾಯಿ ಮುಚ್ಚಿದ ಯತೀಂದ್ರ ಸಿದ್ದರಾಮಯ್ಯ!

Leave A Reply

Your email address will not be published.