Food tips: ಮೊಟ್ಟೆ ಜೊತೆ ಅಪ್ಪಿ ತಪ್ಪಿಯೂ ಈ ಪದಾರ್ಥಗಳನ್ನು ಸೇವಿಸಬಾರದು !! ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ !!
Lifestyle health news food tips egg and Banana should not be eaten together that would affect on health
Food tips: ಹೆಚ್ಚಿನ ಜನರು ಪ್ರೋಟೀನ್ ಗಾಗಿ ಮೊಟ್ಟೆಗಳನ್ನು ಸೇವಿಸುತ್ತಾರೆ. ಇದು ಸ್ನಾಯುಗಳನ್ನು ಬಲಪಡಿಸುವುದಷ್ಟೇ ಅಲ್ಲದೆ ಹೃದಯಕ್ಕೂ ತುಂಬಾ ಉಪಚಾರಿಯಾಗಿದೆ. ಯಾಕೆಂದರೆ ಪ್ರೋಟೀನ್, ವಿಟಮಿನ್ಗಳು ಮತ್ತು ಫೈಬರ್ ಮೊಟ್ಟೆಯಲ್ಲಿ ಹೇರಳವಾಗಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಉಳಿದುಕೊಳ್ಳುತ್ತದೆ ಮತ್ತು ರೋಗನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಆದರೆ ನೀವು ಬರೀ ಮೊಟ್ಟೆ ಸೇವಿಸಿದರೆ ಯಾವ ತೊಂದರೆ ಇಲ್ಲ. ಆದರೆ ಅದರೊಂದಿಗೆ ಈ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಹೌದು, ಮೊಟ್ಟೆಗಳನ್ನು ಸರಿಯಾಗಿ ಸೇವಿಸದಿದ್ದರೆ ಹಲವಾರು ಸಮಸ್ಯೆಗಳು ಎದುರಾಗಬಹುದು. ಕೆಲವೊಮ್ಮೆ ಎರಡು ಒಳ್ಳೆಯ ಆಹಾರಗಳನ್ನು ಒಟ್ಟಿಗೆ ಸೇವಿಸೋದರಿಂದ ದೇಹಕ್ಕೆ ಹಾನಿಯಾಗುತ್ತೆ ಎಂದು ಹೇಳಲಾಗುತ್ತೆ. ಇದು ನಿಜ. ಅವುಗಳಲ್ಲಿ ಮೊಟ್ಟೆ ಕೂಡ ಒಂದು. ಹೀಗಾಗಿ ನೀವು ಮೊಟ್ಟೆಗಳೊಂದಿಗೆ ಕೆಲವು ಆಹಾರ ಸೇವಿಸುವುದನ್ನು ತಪ್ಪಿಸಬೇಕು. ಹಾಗಾದ್ರೆ ಮೊಟ್ಟೆಗಳ ಜೊತೆಗೆ ಯಾವ ಆಹಾರ ಸೇವಿಸಬಾರದು ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ(Food tips).
• ಮೊಟ್ಟೆ ಮತ್ತು ಸಕ್ಕರೆ (egg and sugar)
ನೀವು ಮೊಟ್ಟೆಯೊಂದಿಗೆ ಸಕ್ಕರೆಯಿಂದ ಮಾಡಿದ ಆಹಾರ ಪದಾರ್ಥಗಳು ಅಥವಾ ಸಿಹಿ ಪದಾರ್ಥಗಳನ್ನು ಸೇವಿಸಿದರೆ, ಅದು ನಿಮ್ಮ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಮೊಟ್ಟೆ ಮತ್ತು ಸಿಹಿ ಚೀಸ್ ಎರಡನ್ನೂ ಒಟ್ಟಿಗೆ ಸೇವಿಸಿದಾಗ, ಅದು ಅಮೈನೋ ಆಮ್ಲಗಳನ್ನು ಉತ್ಪಾದಿಸುತ್ತದೆ, ಇದು ದೇಹಕ್ಕೆ ವಿಷಕಾರಿಯಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಗೂ ಕಾರಣವಾಗಬಹುದು. ಆದ್ದರಿಂದ, ಅದನ್ನು ಅವಾಯ್ಡ್ ಮಾಡಿ.
• ಮೊಟ್ಟೆ ಮತ್ತು ಮಟನ್ (egg with mutton)
ಮೊಟ್ಟೆ ಮತ್ತು ಮಟನ್ ಒಟ್ಟಿಗೆ ತಿನ್ನಬಾರದು. ಈ ಆಹಾರ ಕಾಂಬಿನೇಶನ್ ದೇಹಕ್ಕೆ ತುಂಬಾ ಹಾನಿಕಾರಕ. ಮೊಟ್ಟೆಯಲ್ಲಿರುವ ಪ್ರೋಟೀನ್ ಮತ್ತು ಮಟನ್ ನಲ್ಲಿ ಕಂಡುಬರುವ ಹೆಚ್ಚುವರಿ ಕೊಬ್ಬುಗಳು ದೇಹ ಮತ್ತು ಜೀರ್ಣಕ್ರಿಯೆಗೆ ಸೂಕ್ತವಲ್ಲ. ಇದನ್ನು ಒಟ್ಟಿಗೆ ಸೇವಿಸಿದ ನಂತರ, ನೀವು ಆಲಸ್ಯ ಮತ್ತು ದಣಿವನ್ನು ಸಹ ಹೊಂದಿರಬಹುದು. ಆದ್ದರಿಂದ, ಮಟನ್‌ನೊಂದಿಗೆ ಮೊಟ್ಟೆಗಳನ್ನು ಎಂದಿಗೂ ತಿನ್ನಬೇಡಿ.
• ಮೊಟ್ಟೆ ಮತ್ತು ಚಹಾ (Egg with tea)
ಬೆಳಿಗ್ಗೆ ಮೊಟ್ಟೆ ಸೇವಿಸಿದ ನಂತರ ಚಹಾ ಕುಡಿಯಲು ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ, ಈ ಎರಡನ್ನೂ ಒಟ್ಟಿಗೆ ತಿನ್ನುವುದು ಹೊಟ್ಟೆಯ ತೊಂದರೆಗಳು ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಮೊಟ್ಟೆಯನ್ನು ಕೆಫೀನ್ ನೊಂದಿಗೆ ಸೇವಿಸಿದ್ರೆ, ಅದು ಪ್ರೋಟೀನ್ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಒಟ್ಟಿಗೆ ತಿನ್ನುವುದು ಮಲಬದ್ಧತೆಗೆ ಕಾರಣವಾಗಬಹುದು.
• ಮೊಟ್ಟೆ ಮತ್ತು ಬಾಳೆಹಣ್ಣು (egg with banana)
ಅನೇಕ ಜನರು ಬೆಳಗಿನ ಉಪಾಹಾರಕ್ಕಾಗಿ ಮೊಟ್ಟೆಗಳೊಂದಿಗೆ ಬಾಳೆಹಣ್ಣುಗಳನ್ನು ತಿನ್ನುತ್ತಾರೆ. ಆದರೆ ಈ ಎರಡನ್ನು ಎಂದಿಗೂ ಒಟ್ಟಿಗೆ ತಿನ್ನಬಾರದು. ಏಕೆಂದರೆ ಮೊಟ್ಟೆಗಳು ಸಾಕಷ್ಟು ಪ್ರೋಟೀನ್ ಹೊಂದಿರುತ್ತವೆ, ಆದರೆ ಬಾಳೆಹಣ್ಣುಗಳು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ಹೊಟ್ಟೆ ತುಂಬಿದ, ಅಥವಾ ಭಾರವಾದ ಅನುಭವ ನೀಡುತ್ತೆ.
ಇದನ್ನೂ ಓದಿ: Shocking news: ಚಂದ್ರಯಾನ-3 ಯಶಸ್ಸಿನ ಇಂಜಿನಿಯರ್ ಸದ್ಯ ಬೀದಿಬದಿಯ ಇಡ್ಲಿ ವ್ಯಾಪಾರಿ !! ಅರೆ ಏನಿದು ವಿಚಿತ್ರ ?!