Yashvanthpura-Karatagi Express: ಪ್ರಸಿದ್ಧ ‘ಯಶವಂತಪುರ -ಕಾರಟಗಿ ಎಕ್ಸ್ ಪ್ರೆಸ್’ ರೈಲು ಮಾರ್ಗದಲ್ಲಿ ಮಹತ್ವದ ಬದಲಾವಣೆ !! ಇಲ್ಲಿದೆ ನೋಡಿ ಡೀಟೇಲ್ಸ್
Karnataka news Yeshwantpur to karatagi train route change for 30 days
Yeshwantpur-karatagi express : ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಮಂದಿಗೆ ಯಶವಂತಪುರ -ಕಾರಟಗಿ ಎಕ್ಸ್ ಪ್ರೆಸ್(Yeshwantpur-karatagi express) ರೈಲು ಅಂದ್ರೆ ಚಿರಪರಿಚಿತ. ಅದರಲ್ಲೂ ಹಂಪಿ ಟ್ರಿಪ್ ಹೋಗೋರಿಗೆ ಇದು ಫೇವರಿಟ್ ಟ್ರೈನ್. ರಾತ್ರಿ 8.30ರ ಸುಮಾರಿಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ರೈಲು ಹತ್ತಿ ಮಲಗಿದರೆ ಬೆಳಿಗ್ಗೆ 7.45 ರ ಸುಮಾರಿಗೆ ಹೊಸಪೇಟೆ ಬಂದು ಹಂಪಿಗೆ ಆರಾಮಾಗಿ ಹೋಗಬಹುದು. ಅಲ್ಲದೆ ಸುತ್ತಮುತ್ತಲಿನ ಊರಿನವರಿಗೂ ಇದು ತುಂಬಾ ಅನುಕೂಲಕರವಾದ ರೈಲು. ಹೀಗಿರುವಾಗ ಈ ರೈಲು ಮಾರ್ಗದಲ್ಲಿ ಇಲಾಖೆಯು ಮಹತ್ವದ ಬದಲಾವಣೆ ಮಾಡಿದೆ.
ಹೌದು, ರೈಲು ಸಂಖ್ಯೆ 16545/16546 ಯಶವಂತಪುರ ಮತ್ತು ಕಾರಟಗಿ ನಿಲ್ದಾಣಗಳ ಮಧ್ಯ ಸಂಚರಿಸುತ್ತಿರುವ ಡೈಲಿ ಎಕ್ಸ್ ಪ್ರೆಸ್ ರೈಲುಗಳನ್ನು 30 ದಿನಗಳ ಕಾಲ ಮಾರ್ಗ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಯಾಕೆಂದರೆ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಬಳ್ಳಾರಿ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಈ ಸಲುವಾಗಿ ಬಳ್ಳಾರಿ ಫಂಕ್ಷನ್ ನಲ್ಲಿ ಪ್ಲಾಟ್ ಫಾರ್ಮ್ -3ರ ಕಾಮಗಾರಿ ಆರಂಭವಾಗಿರುವದರಿಂದ ಪ್ರಯಾಣಿಕರಿಗೆ ಅವಕಾಶ ನಿರ್ಬಂಧಿಸಿದೆ ಹೀಗಾಗಿ ಅನಿವಾರ್ಯವಾಗಿ ತಾತ್ಕಾಲಿಕವಾಗಿ 30 ದಿನಗಳ ಕಾಲ ಮಾರ್ಗ ಬದಲಾವಣೆ ಮಾಡಲಾಗಿದೆ.
1) ಯಶವಂತಪುರ- ಕಾರಟಗಿ ಹೋಗೋ ಮಾರ್ಗ:
• ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 23 ರವರೆಗೆ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
• ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಡೈಲಿ ಎಕ್ಸ್‌ಪ್ರೆಸ್(Yashwaantapur-karatagi daily express) ರೈಲು ಓಬಳಾಪುರಂ, ಬಳ್ಳಾರಿ ಬೈಪಾಸ್ ಕ್ಯಾಬಿನ್, ಬಳ್ಳಾರಿ ಕಂಟೋನ್ಮೆಂಟ್ ಮತ್ತು ಕುಡತಿನಿ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
• ಹೀಗಾಗಿ ಬಳ್ಳಾರಿ ಜಂಕ್ಷನಲ್ಲಿ ನಿಲುಗಡೆ ಇರುವುದಿಲ್ಲ.
2) ಕಾರಟಗಿ-ಯಶವಂತಪುರ ಮಾರ್ಗ:
• ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 24 ರವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
• ಕಾರಟಗಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16546 ಕಾರಟಗಿ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲು ಕುಡತಿನಿ, ಬಳ್ಳಾರಿ ಕಂಟೋನ್ಮೆಂಟ್, ಬಳ್ಳಾರಿ ಬೈಪಾಸ್ ಕ್ಯಾಬಿನ್ ಮತ್ತು ಓಬಳಾಪುರಂ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
• ಹೀಗಾಗಿ ಬಳ್ಳಾರಿ ಜಂಕ್ಷನಲ್ಲಿ ನಿಲುಗಡೆ ಇರುವುದಿಲ್ಲ.
ಇದನ್ನೂ ಓದಿ: Kusumavati: ಏಕಾಏಕಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ಸೌಜನ್ಯ ತಾಯಿ – ಸಚಿವರ ಬಳಿ ಇಟ್ಟ ಆ 3 ಪ್ರಮುಖ ಬೇಡಿಕೆಗಳೇನು ?