Railway Platform: ರೈಲು ಹಳಿ ಮೇಲೆ ಬಿದ್ದ ಅಂಧ ತಾಯಿಯ ಮಗ- ರೈಲು ಬರುವಾಗಲೇ ನಡೆಯಿತು ದೊಡ್ಡ ಪವಾಡ..!

Railway Platform: ಅದೃಷ್ಟ ಇದ್ದರೆ ಪಾತಾಳಕ್ಕೆ ಬಿದ್ದರೂ ಬದುಕಿ ಬರಬಹುದು. ಕೆಲವೊಮ್ಮೆ ಅಪಾಯದಿಂದ ತಪ್ಪಿಸಿಕೊಳ್ಳಲು ಅದೃಷ್ಟ ಕೈ ಕೊಟ್ಟರೆ, ಇನ್ನು ಕೆಲವೊಮ್ಮೆ ಯಾವುದೋ ರೂಪದಲ್ಲಿ ಸಹಾಯ ಎಂಬ ನೆಪದಲ್ಲಿ ಪವಾಡವೇ ನಡೆದು ಹೋಗುತ್ತದೆ. ಅದೇ ರೀತಿ ಇಲ್ಲೊಂದು ಕಡೆ ನಡೆದ ಘಟನೆಯೊಂದು (Train Accident) ನಿಮ್ಮನ್ನು ಬೆರಗು ಗೊಳಿಸಬಹುದು.

2021ರಲ್ಲಿ ಮುಂಬೈನಲ್ಲಿ ನಡೆದ ಘಟನೆ ಆಗಿದ್ದು, ಈ ಘಟನೆಯ ವೀಡಿಯೋ ಮತ್ತೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ. ಕಣ್ಣೆದುರು ಯಮ ಬಂದು ಹೋದ ಅನುಭವ ಆ ವಿಡಿಯೋ ದಲ್ಲಿ ಭಾಸವಾಗುತ್ತದೆ.

ಹೌದು, ಅಂಧ ತಾಯಿಯೊಬ್ಬರು ತನ್ನ ಮಗನನ್ನು ಕರೆದುಕೊಂಡು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ (Railway Platform)ನಡೆಯುತ್ತಾ ಸಾಗುತ್ತಿದ್ದರು. ಅಮ್ಮನಿಗೆ ಕಾಣಿಸದಿದ್ದರು, ಮಗನಿಗೆ ಸ್ಪಷ್ಟವಾಗಿ ಕಣ್ಣು ಕಾಣಿಸುತ್ತಿತ್ತು, ಅಂದಹಾಗೆ ಈ ಅಂಧತಾಯಿ ಹೊಟ್ಟೆ ಹೊರೆಯುವುದಕ್ಕಾಗಿ ಬಾಚಾಣಿಕೆ ಹೇರ್‌ಫಿನ್ ಮುಂತಾದ ವಸ್ತುಗಳನ್ನು ಮಾರುವ ಕೆಲಸ ಮಾಡುತ್ತಿದ್ದರು. ಕಣ್ಣು ಕಾಣದ ಇವರು ಎಲ್ಲೆಡೆ ತನ್ನ ಮಗನನ್ನು ಕರೆದೊಯ್ಯುತ್ತಿದ್ದರು. ಆ ನಂಬಿಕೆಯಲ್ಲಿ ತಾಯಿ ಆತನನ್ನು ಕರೆದುಕೊಂಡು ಸಾಗುತ್ತಿದ್ದಳು.

ಆದರೆ ಪುಟ್ಟ ಬಾಲಕ ಹುಡುಗಾಟದಲ್ಲಿ ಎಲ್ಲೋ ನೋಡುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಆ ಬಾಲಕ ಫ್ಲಾಟ್‌ಫಾರ್ಮ್‌ನ ಬದಿಗೆ ಕಾಲಿಟ್ಟು ರೈಲ್ವೆ ಹಳಿ ಮೇಲೆ ಬಿದ್ದು ಬಿಟ್ಟಿದ್ದ, ಈ ವೇಳೆ ಅಂಧ ತಾಯಿ ಏನು ನಡೆಯಿತು ಎಂಬುದನ್ನು ತಿಳಿಯದೆ ಅತ್ತಿತ್ತ ಕೈ ತಡಕಾಡುತ್ತಾ ಪರದಾಡುತ್ತಿದ್ದಳು. ಇತ್ತ ಒಂದು ಮೂಲೆಯಲ್ಲಿ ರೈಲು ಬರುತ್ತಿದ್ದು, ಇನ್ನೇನು ರೈಲು ಬಾಲಕನ ಮೇಲೆ ಹರಿದು ಹೋಗುತ್ತದೆ ಎನ್ನುವಷ್ಟರಲ್ಲಿ ದೇವರಂತೆ ಅಲ್ಲಿಗೆ ಬಂದವರು ಸೆಂಟ್ರಲ್ ರೈಲ್ವೆಯ ಪಾಯಿಂಟ್ ಮ್ಯಾನ್ ಮಯೂರ್ ಶೆಲ್ಕೆ(Mayur shelkhe).

ರೈಲು ಬರುತ್ತಿದೆ ಎಂಬುದನ್ನು ನೋಡಿದ ಅವರು ಸ್ವಲ್ಪವೂ ಹಿಂದೂ ಮುಂದೂ ನೋಡದೇ ಹಳಿಗೆ ಹಾರಿ ಬಾಲಕನನ್ನು ಪ್ಲಾಟ್‌ಫಾರ್ಮ್‌ ಮೇಲೆ ಎತ್ತಿ ಹಾಕಿ ಅವರು ಕೂಡ ಅಷ್ಟೇ ವೇಗದಲ್ಲಿ ಮೇಲೇರಿದ್ದರು, ಅವರು ಮೇಲೆರುವುದು ರೈಲೊಂದು ಪಾಸಾಗಿ ಹೋಗುವುದು ಅರೆ ಕ್ಷಣಗಳಲ್ಲಿ ನಡೆದು ಹೋಗಿದೆ.

ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಮಯೂರ್‌ ಒಂದೋ ಶಾಶ್ವತವಾಗಿ ಅಂಗವಿಕಲರಾಗಬೇಕಿತ್ತು. ಅಥವಾ ಪ್ರಾಣ ಕಳೆದುಕೊಳ್ಳಬೇಕಿತ್ತು. ಅದರೂ ಅದ್ಯಾವುದರ ಬಗ್ಗೆ ಯೋಚಿಸದೇ ಹಳಿಗೆ ಧುಮುಕಿದ ಮಯೂರ್‌ ಅಂದು ತಾಯಿ ಮಗನ ನ್ನು ಉಳಿಸಿಕೊಳ್ಳಲು ಆ ಕುಟುಂಬದ ಪಾಲಿಗೆ ದೇವರಾಗಿದ್ದರು..!

ಮಯೂರ್‌ ಶೆಲ್ಕೆ ಮಗುವನ್ನು ರಕ್ಷಿಸಿದ ಆ ರೋಚಕ ಕ್ಷಣದ ಸಾಹಸ ದೃಶ್ಯ ಪ್ಲಾಟ್‌ಫಾರ್ಮ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆ ಆಗಿತ್ತು, ಸದ್ಯ ಮಯೂರ್ ಶೆಲ್ಕೆ ಅವರ ಈ ಸಮಯೋಚಿತ ಕಾರ್ಯಕ್ಕೆ ಸೆಂಟ್ರಲ್ ರೈಲ್ವೆ ಅವರಿಗೆ 50 ಸಾವಿರ ಬಹುಮಾನ ನೀಡಿ ಗೌರವಿಸಿತ್ತು.

ಮಯೂರ್ ಶೆಲ್ಕೆ ಎಷ್ಟು ಉದಾರಿ ಎಂದರೆ, ಗೌರವ ಧನವನ್ನು ಬಾಲಕನ ಶಿಕ್ಷಣಕ್ಕಾಗಿ ಆ ಅಂಧ ತಾಯಿಗೆ ನೀಡಿದರು. ಇತ್ತ ಮಯೂರ್ ಶೆಲ್ಕೆ ಈ ವಿಚಾರವನ್ನು ಮನೆಗೆ ಹೇಳಿಯೇ ಇರಲಿಲ್ಲವಂತೆ. ಆದರೆ ಯಾವಾಗ ವೀಡಿಯೋ ವೈರಲ್ ಆಯ್ತೋ ಮನೆಯವರು ಈ ವೀಡಿಯೋ ನೋಡಿ ಮೊದಲಿಗೆ ಗಾಬರಿ ಬಿದ್ದು, ಬೈದಿದ್ದು, ಆಮೇಲೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Richie (@richie4u)

Leave A Reply

Your email address will not be published.