Electric Shock: ಬೆಕ್ಕನ್ನು ರಕ್ಷಿಸಲು ಮರ ಏರಿದ ಯುವಕ- ಕೆಳಗೆ ಬಂದು ಕಾದು ಕುಳಿತಿದ್ದ ಯಮ !

bengaluru news electric shock young man climbs tree to save cat

Share the Article

Electric Shock: ದೊಡ್ಡಬಳ್ಳಾಪುರದಲ್ಲಿ ಯುವಕನೊಬ್ಬ ಬೆಕ್ಕಿನ ಜೀವ ಉಳಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ ಘಟನೆ ನಡೆದಿದೆ. ಕರೆಂಟ್ ಶಾಕ್ ನಿಂದ ಮೃತಪಟ್ಟ ದುರ್ದೈವಿಯನ್ನು ರೋಷನ್ (25)ಎನ್ನಲಾಗಿದ್ದು, ದೊಡ್ಡಬಳ್ಳಾಪುರದ ಹಾಲಿನ ಡೈರಿ ಬಳಿ ಕರೆಂಟ್‌ ಶಾಕ್‌ಗೆ(Electric shock) ಬಲಿಯಾಗಿದ್ದಾನೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಕ್ಕನ್ನು ರಕ್ಷಿಸಲು ಹೋಗಿ ಏಕಾಏಕಿ ಪ್ರವಹಿಸಿದ ವಿದ್ಯುತ್‌ಗೆ ರೋಷನ್‌ ಮರದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಡೈರಿ ಮುಂಭಾಗವೇ ಕಾರ್‌ ಗ್ಯಾರೇಜ್‌ನಲ್ಲಿ ರೋಷನ್‌ ಕೆಲಸ ಮಾಡುತ್ತಿದ್ದನಂತೆ. ಕೆಲಸ ಮಾಡುವಾಗ ಮರದಲ್ಲಿ ಬೆಕ್ಕೊಂದು ಸಿಲುಕಿ ನರಳಾಡುತಿತ್ತು. ಬೆಕ್ಕಿನ ನರಳಾಟ ಕಂಡು ರೋಷನ್‌ ತನ್ನ ಜೀವದ ಹಂಗು ತೊರೆದು ಹೇಗಾದರೂ ಬೆಕ್ಕನ್ನು ರಕ್ಷಿಸಬೇಕೆಂದು ಮರ ಹತ್ತಿದ್ದಾನೆ. ಆದರೆ ಮರದ ಮೇಲೆ ಹಾದು ಹೋಗಿದ್ದ ವಿದ್ಯುತ್‌ ಲೈನ್‌ ಹರಿದಿದೆ. ಮರದ ರೆಂಬೆ – ಕೊಂಬೆಗಳನ್ನು ಹಿಡಿದು ಬೆಕ್ಕು ಬಚಾವ್ ಮಾಡಿಸಿದೆ ಎಂದುಕಕೊಂಡ ರೋಷನ್‌ಗೆ ವಿದ್ಯುತ್ ಪ್ರವಹಿಸಿದ್ದು, ಕರೆಂಟ್ ಶಾಕ್ ಹೊಡೆದು ರೋಷನ್ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರದಲ್ಲಿದ್ದ ಮೃತದೇಹವನ್ನು ಇಳಿಸಿ ಪೋಲಿಸರು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

Leave A Reply